ವೈದ್ಯಾಧಿಕಾರಿ ಹಾಗೂ ಶುಶ್ರೂಷಾಧಿಕಾರಿ ಹುದ್ದೆಗೆ ನೇರ ಸಂದರ್ಶನ

 ವೈದ್ಯಾಧಿಕಾರಿ ಹಾಗೂ ಶುಶ್ರೂಷಾಧಿಕಾರಿ ಹುದ್ದೆಗೆ ನೇರ ಸಂದರ್ಶನ
Share this post

ಮಂಗಳೂರು, ಮೇ 05, 2021: ಜಿಲ್ಲೆಯಾದ್ಯಂತ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ DCH (Dedicated Covid
Hospital) DV ಆಗಿ ಕಾರ್ಯನಿರ್ವಹಿಸುತ್ತಿರುವ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಗೆ ವ್ಶೆದ್ಯಾಧಿಕಾರಿ ಹಾಗೂ ಶುಶ್ರೂಷಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಪ್ರಸ್ತುತ ಸಾಲಿನ ಸೆಪ್ಟೆಂಬರ್  30ರ ವರೆಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಮೇ. 7 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರ, ಕಚೇರಿಯಲ್ಲಿ  ನೇರ ಸಂದರ್ಶನ ಕರೆಯಲಾಗಿದೆ.

ತಾತ್ಕಾಲಿಕ ಹುದ್ದೆಗಳ ವಿವರ:

  • ತಜ್ಞರು – ಪಿಜಿಷಿಯನ್, ಹುದ್ದೆಗಳ ಸಂಖ್ಯೆ-5, ಎಂ.ಬಿ.ಬಿ.ಎಸ್, ಎಂ.ಡಿ ಮೆಡಿಕಲ್  ಕೌನ್ಸಿಲಿಂಗ್ ರಿಜಿಸ್ಟರ್ ಆಗಿರಬೇಕು.
  • ಅನಸ್ತೆಟಿಸ್ಟ್, ಹುದ್ದೆಗಳ ಸಂಖ್ಯೆ-5  ಎಂ.ಬಿ.ಬಿ.ಎಸ್, ಎಂ.ಡಿ, ಡಿ.ಎ, ಡಿ.ಎನ್.ಬಿ,  ಮೆಡಿಕಲ್  ಕೌನ್ಸಿಲಿಂಗ್ ರಿಜಿಸ್ಟರ್ ಆಗಿರಬೇಕು.      
  • ಶುಶ್ರೂಷಾಧಿಕಾರಿ- ಹುದ್ದೆಗಳ ಸಂಖ್ಯೆ-50, ಡಿಪ್ಲೋಮಾ ನರ್ಸಿಂಗ್/ ಬಿ.ಎಸ್.ಸಿ ನರ್ಸಿಂಗ್ (ನರ್ಸಿಂಗ್ ಕೌನ್ಸಿಲ್‍ನಲ್ಲಿ ನೋಂದಣಿಯಾಗಿರಬೇಕು.

ಅಭ್ಯರ್ಥಿಗಳು ವಿದ್ಯಾರ್ಹತೆಯ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿ ಹಾಗೂ ಅವುಗಳ ಸ್ವಯಂ ದೃಡೀಕೃತ ನಕಲು ಪ್ರತಿಗಳು, ಅನುಭವಕ್ಕೆ ಆದ್ಯತೆ ನೀಡಲಾಗುವುದು. ಆದ್ದರಿಂದ ಅನುಭವ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರ ಕಚೇರಿ ದೂ.ಸಂ: 0824-2413205, 0824-2421351, 0824-2425137 ಅಥವಾ ಇ-ಮೇಲ್ ವಿಳಾಸ : [email protected] ನ್ನು ಸಂಪರ್ಕಿಸಬಹುದು ಎಂದು ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Subscribe to our newsletter!

Other related posts

error: Content is protected !!