ಕೋವಿಡ್ ಭೀತಿಯ ನಡುವೆ ಅಶಕ್ತರ ನೆರವಿಗೆ ನಿಂತ ಹಾಂಗ್ಯೊ

 ಕೋವಿಡ್ ಭೀತಿಯ ನಡುವೆ ಅಶಕ್ತರ ನೆರವಿಗೆ ನಿಂತ ಹಾಂಗ್ಯೊ
Share this post

ಮಂಗಳೂರು, ಮೇ 02, 2021: ಕೋವಿಡ್‌ 19 ಸಾಂಕ್ರಾಮಿಕ ದೇಶವನ್ನೇ ತಲ್ಲಣಕ್ಕೀಡು ಮಾಡಿರುವ ಈ ದಿನಗಳಲ್ಲಿ, ಹಾಂಗ್ಯೊ ಕಂಪನಿಯು ಸಮಾಜದ ಅಶಕ್ತ ಮತ್ತು ಅಸಹಾಯಕರ ನೆರವಿಗೆ ನಿಂತಿದೆ.

ವಿನೂತನ ರೀತಿಯಲ್ಲಿ ಹಾಂಗ್ಯೊ ಕಂಪನಿ ಯು ತನ್ನ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದ ಭಾಗವಾಗಿ ಅಶಕ್ತ, ನಿರ್ಗತಿಕರಿಗೆ ಊಟ ನೀಡುವುದಕ್ಕೆ ಮುಂದಾಗಿದೆ.

ಹೀಗಿದೆ ಕಾರ್ಯ ಯೋಜನೆ:

ಯಾರಾದರೂ ಹಾಂಗ್ಯೊದ https://shop.hangyo.in ಮೂಲಕ ಪೂರ್ವನಿರ್ಧರಿತ ಪ್ರಮಾಣದ ಉತ್ಪನ್ನಗಳನ್ನು ಖರೀದಿಸಿದರೆ ಆ ಮೊತ್ತದ ನಿಗದಿತ ಭಾಗವನ್ನು ಅಶಕ್ತ ಮತ್ತು ಅಸಹಾಯಕರ ಊಟಕ್ಕೆ ನೀಡಲಾಗುವುದು.

ಮಂಗಳೂರಿನ ಯೂತ್‌ ಆಫ್‌ ಜಿಎಸ್‌ಬಿ (Youth of GSB) ಮತ್ತು ಕಾಸ್‌ (CAUSE) ಸಂಘಟನೆಗಳು ಈ ಪ್ರಯತ್ನಕ್ಕೆ ಸಹಕಾರ ನೀಡುತ್ತಿವೆ.

ಇಡೀ ವಿಶ್ವವನ್ನೇ ಅಲ್ಲೋಲಕಲ್ಲೋಲಗೊಳಿಸುತ್ತಿರುವ ಕೋವಿಡ್‌ ಜನರನ್ನು ಕಂಗೆಡಿಸಿದೆ. ಕೋವಿಡ್‌ ಎರಡನೇ ಅಲೆ ಇದುವರೆಗೆ ಕಂಡು ಕೇಳಿರದ ರೀತಿಯಲ್ಲಿ ಭಾರತವನ್ನು ಅಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಹಾಂಗ್ಯೊದಿಂದ ಖರೀದಿಸುವ ಉತ್ಪನ್ನಗಳು ಈ ಮೂಲಕ ಸಮಾಜದ ಅಶಕ್ತರ ಮತ್ತು ಅಸಹಾಯಕರ ನೆರವಾಗಲಿದೆ.

“ಜನರ ಮುಖದಲ್ಲಿ ಸಂತಸ ತರುವುದು ಇದರ ಉದ್ದೇಶ. ನಮ್ಮ ಸಂಸ್ಥೆಯಿಂದ ಇದು ಒಂದು ಚಿಕ್ಕ ಸೇವೆ,” ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಜಿ.ಪೈ ತಿಳಿಸಿದ್ದಾರೆ

Subscribe to our newsletter!

Other related posts

error: Content is protected !!