ಧಾರ್ಮಿಕ ಸಂಸ್ಥೆಗಳಲ್ಲಿ ಕೋವಿಡ್ ಶುಶ್ರೂಷಾ ಕೇಂದ್ರ: ಕೆ. ಅಶ್ರಫ್

 ಧಾರ್ಮಿಕ ಸಂಸ್ಥೆಗಳಲ್ಲಿ ಕೋವಿಡ್ ಶುಶ್ರೂಷಾ ಕೇಂದ್ರ: ಕೆ. ಅಶ್ರಫ್
Share this post

ಮಂಗಳೂರು, ಏಪ್ರಿಲ್ 28, 2021: ಮಂಗಳೂರು ನಗರದ ಬಂದರ್ ವಾರ್ಡ್ ವ್ಯಾಪ್ತಿಯಲ್ಲಿ ಅಗತ್ಯತೆ ಆಧಾರದಲ್ಲಿ ಧಾರ್ಮಿಕ ಸಂಸ್ಥೆಗಳನ್ನು ಕೋವಿಡ್ ರೋಗಿಗಳಿಗೆ ಪ್ರಾಥಮಿಕ ಐಸೋಲೇಶನ್ ಘಟಕಗಳಾಗಿ ಬಳಕೆ ಮಾಡಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಮನಾಪ ಸಹಕಾರ,ಅನುಮತಿ ಯೊಂದಿಗೆ ನಡೆಸಲು ಚಿಂತನೆ ನೆಡೆದಿದೆ ಎಂದು ಮಾಜಿ ಮೇಯರ್ ಹಾಗೂ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಕೆ ಅಶ್ರಫ್ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಕೋವಿಡ್ ಪ್ರಕರಣಗಳು ಅಧಿಕವಾಗುತ್ತಿದ್ದು, ನಗರದ ಆಸ್ಪತ್ರೆಗಳಲ್ಲಿ ಪ್ರಾಥಮಿಕ ವೈದ್ಯಕೀಯ ಸೌಕರ್ಯಗಳ ಕೊರತೆ ಸಂಭವಿಸಿದರೆ ಪರ್ಯಾಯ ವ್ಯವಸ್ಥೆಗಾಗಿ ಬಂದರ್ ಮತ್ತು ಕುದ್ರೋಳಿ ವಾರ್ಡ್ ನಲ್ಲಿನ ಧಾರ್ಮಿಕ ಸಂಸ್ಥೆಗಳ ಆಡಳಿತ ಮಂಡಳಿಯ ಸಹಕಾರದೊಂದಿಗೆ, ಅವುಗಳ ಕಟ್ಟಡಗಳನ್ನು ಸ್ಥಳೀಯ ಇಲಾಖೆಗಳ ಸಹಕಾರದೊಂದಿಗೆ ಕೋವಿಡ್ ಪ್ರಾಥಮಿಕ ಶುಶ್ರೂಷಾ ಕೇಂದ್ರವಾಗಿ ಮಾರ್ಪಡಿಸಲು ಚಿಂತನೆ ನಡೆಸಲಾಗಿದೆ.

ಇದರೊಂದಿಗೆ ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಆಂಬುಲೆನ್ಸ್ ವಾಹನ ಸೇವೆ, ಸ್ಥಳೀಯ ವೈದ್ಯರು ಮತ್ತು ಲಭ್ಯ ಪ್ಯಾರಾ ಮೆಡಿಕ್ ವ್ಯಕ್ತಿಗಳ ಸೇವೆಯನ್ನು ಪಡೆದು ಕೋವಿಡ್ ವಿರುದ್ಧ ಹೋರಾಟದಲ್ಲಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ಯೋಚಿಸಲಾಗಿದೆ. ಈ ಬಗ್ಗೆ ಸದ್ಯದಲ್ಲೇ ಸಂಬಂಧಪಟ್ಟವರಲ್ಲಿ ಸಮಾಲೋಚನೆ ನಡೆಸಲಾಗುವುದು ಎಂದಿದ್ದಾರೆ.

Subscribe to our newsletter!

Other related posts

error: Content is protected !!