ಸರಕಾರದಿಂದ ಕ್ಷಣಕ್ಕೊಂದು ಮಾರ್ಗಸೂಚಿ: ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಖಂಡನೆ

 ಸರಕಾರದಿಂದ ಕ್ಷಣಕ್ಕೊಂದು ಮಾರ್ಗಸೂಚಿ: ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಖಂಡನೆ
Share this post

ಮಂಗಳೂರು, ಏಪ್ರಿಲ್ 22, 2021: ಕೊರೋನಾ ಮಾರ್ಗಸೂಚಿ ಹೆಸರಿನಲ್ಲಿ ಸರಕಾರ ಕ್ಷಣಕ್ಕೊಂದು ನಿರ್ಧಾರ ತಳೆದು ಜನರನ್ನು ಸಂಪೂರ್ಣ ಗೊಂದಲ ಹಾಗೂ ಭಯಭೀತಗೊಳಿಸಿದೆ. ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲವೆಂದು ಹೇಳಿದ್ದ ಸರಕಾರ ಇದೀಗ ಹಿಂಬಾಗಿಲ ಮೂಲಕ ಸಾರ್ವಜನಿಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ, ವೀಕೆಂಡ್ ಕರ್ಫ್ಯೂ ಹೆಸರಲ್ಲಿ ಅಘೋಷಿತ ಸಂಪೂರ್ಣ ಲಾಕ್ ಡೌನ್ ಸ್ಥಿತಿಗೆ ತಂದಿದೆ ಎಂದು ಮುಸ್ಲಿಂ ಒಕ್ಕೂಟ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ ಅಶ್ರಫ್ ತಿಳಿಸಿದ್ದಾರೆ.

Also read: PU Colleges warned against conducting classes

ಕೊರೋನಾ ನಿಯಂತ್ರಣ ಇರುವ ಪ್ರದೇಶದಲ್ಲಿ ಕೂಡ ವ್ಯವಹಾರ ಮಳಿಗೆಗಳನ್ನು ಏಕಾಏಕಿ ಬಲವಂತ ಮುಚ್ಚಲು ಆರಂಭಿಸಿದೆ. ಸರಕಾರದ ಈ ಕ್ರಮ ಮುಂದಿನ ತಿಂಗಳು ಮೇ 4 ವರೆಗೆ ಅಘೋಷಿತ ಕರ್ಫ್ಯೂ ಹೇರುವ ಹುನ್ನಾರ ದಂತೆ ಕಾಣುತ್ತದೆ. ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಅವರ ಹಿಂದಿನ ಅನಾರೋಗ್ಯದ ಬಗ್ಗೆ ವಿಚಾರಿಸದೆ, ಅದಕ್ಕೆ ಸರಿಯಾದ ಔಷದಿ ನೀಡದೆ ರೋಗಿಗಳನ್ನು ಮೃತ್ಯು ಕೂಪಕ್ಕೆ ತಳ್ಳುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ದಕ್ಷ ಅಧಿಕಾರಿಯಾದ ನಮ್ಮ ಮಾನ್ಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಶೀಘ್ರದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರಕಾರದ ಇಂತಹ ಬೇಜವಾಬ್ದಾರಿತನವನ್ನು ದ.ಕ ಜಿಲ್ಲಾ ಮುಸ್ಲಿಮ್ ಒಕ್ಕೂಟವು ತೀವ್ರವಾಗಿ ಖಂಡಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟಗಳ ಅಧ್ಯಕ್ಷ, ಮಾಜಿ ಮೇಯರ್ ಕೆ ಅಶ್ರಫ್ ವೆಲ್ನೆಸ್ ಹೆಲ್ಪ್ ಲೈನ್ ವ್ಯಾಕ್ಸೀನ್ ಕ್ಯಾಂಪಿನಲ್ಲಿ ಕೊರೋನಾ ನಿರೋಧಕ ವ್ಯಾಕ್ಸಿನ್ ಪಡೆದುಕೊಂಡರು.

Subscribe to our newsletter!

Other related posts

error: Content is protected !!