ರಂಝಾನ್ ಸಂದರ್ಭದಲ್ಲಿ ಪೊಲೀಸ್ ಸಹಕಾರ ಕೋರಿ ಆಯುಕ್ತರಿಗೆ ಕೆ.ಅಶ್ರಫ್ ನೇತೃತ್ವದ ಮುಸ್ಲಿಮ್ ಒಕ್ಕೂಟ ಮನವಿ

 ರಂಝಾನ್ ಸಂದರ್ಭದಲ್ಲಿ ಪೊಲೀಸ್ ಸಹಕಾರ ಕೋರಿ ಆಯುಕ್ತರಿಗೆ ಕೆ.ಅಶ್ರಫ್ ನೇತೃತ್ವದ ಮುಸ್ಲಿಮ್ ಒಕ್ಕೂಟ  ಮನವಿ
Share this post

ಮಂಗಳೂರು, ಏಪ್ರಿಲ್ 14, 2021 : ಪವಿತ್ರ ರಂಜಾನ್ ಮಾಸದಲ್ಲಿ ಬೆಳಿಗ್ಗಿನ ನಮಾಝ್, ಇಫ್ತಾರ್ ಮತ್ತು ತರಾವೀಹ್ ವಿಶೇಷ ರಾತ್ರಿ ನಮಾಝ್ ವೇಳೆ, ಸರಕಾರದ ನಿಯಮಾವಳಿ ಅವಧಿಗಳಲ್ಲಿ ಪೊಲೀಸರು ಪೂರಕವಾಗಿ ಸಹಕರಿಸಬೇಕು ಎಂದು ದ.ಕ ಜಿಲ್ಲಾ ಮುಸ್ಲಿಂ ಒಕ್ಕೂಟ ಮನವಿ ಮಾಡಿದೆ.

ಒಕ್ಕೂಟ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ ಅಶ್ರಫ್ ನೇತೃತ್ವದಲ್ಲಿ ಇಂದು ಮುಸ್ಲಿಂ ನಾಯಕರು ಮಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

“ಕಳೆದ ವರ್ಷ ಲಾಕ್‌ಡೌನ್‌ ಕಾರಣದಿಂದ ಮಸೀದಿಗಳು ಚಟುವಟಕೆಗಳು ಸ್ಥಗಿತಗೊಂಡು ಸರ್ವರೂ ಮನೆಯಲ್ಲಯೇ ವೃತಾಚರಣೆ ನಮಾಜ್ ಇತ್ಯಾದಿಗಳನ್ನು ನಿರ್ವಹಿಸಲಾಗಿತ್ತು. ಈ ವರ್ಷ ಸರಕಾರದ ವಿವಿಧ ನಿಯಮಾವಳಿಗಳ ಬಗ್ಗೆ ಗೊಂದಲವಿರುವುದರಿಂದ ಮತ್ತು ದಕ್ಷಿಣ ಕನ್ನಡ, ಮ೦ಗಳೂರು ನಗರದ ವ್ಯಾಪ್ತಿಯಲ್ಲಿ ಮುಸ್ಲಿಮ್‌ ಸಮುದಾಯದವರು ವೃತಾಚರಣಿಯನ್ನು ಗಂಭೀರವಾಗಿ
ಪರಿಗಣಿಸುವುದರಿ೦ದ ಮಸೀದಿಗೆ ಮುಂಜಾನೆ ಭೇಟಿ, ಇಪ್ತಾರ್‌ ಬಿಡುವಿಕೆ ಮತ್ತು ರಾತ್ರಿ ವಿಶೇಷ ನಮಾಜ್ ಗೆ ಹೋಗಿ ಬರುವಿಕೆಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕರಿಸಬೇಕು,” ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Also read: Suresh Kumar clarifies on SSLC examination

ಈ ಬಗ್ಗೆ ಠಾಣಾ ವ್ಯಾಪ್ತಿ ಪೊಲೀಸ್ ಅಧಿಕಾರಿಗಳಗೆ ನಿರ್ದೇಶನ ನೀಡಿ ಸಹಕರಿಸಬೇಕು, ರಂಝಾನ್ ವೃತಾಚರಣೆ ಸಂದರ್ಭ ಮಸೀದಿ ಕೇಂದ್ರಿತ ಆರಾಧನಾ ಚಟುವಟಕೆಗಳಿ ಗೆ ಸಂಪೂರ್ಣ ಸಹಕರಿಸಬೇಕು, ಉದ್ದೇಶಿತ ಮತೀಯ ಉದ್ದಿಗ್ನತೆ ಸೃಷ್ಟಿಯಾಗದಂತೆ ಮತ್ತು ಕಾನೂನು, ಶಾಂತಿ ಸುವ್ಯವಸ್ಥೆ ಪಾಲನೆಗೊಳಸಲು ಕೂಡಾ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಬೇಕು ಎಂದೂ ನಾಯಕರು ಮನವಿ ಮಾಡಿದರು.

ಇದನ್ನೂ ಓದಿ: ಎಸ್‌ಡಿಪಿಐ ವತಿಯಿಂದ ಸಾಮಾಜಿಕ ನ್ಯಾಯ ದಿನ ಆಚರಣೆ

ನಿಯೋಗದಲ್ಲಿ ಅಬ್ದುಲ್ ಜಲೀಲ್ ಅದ್ದಾಕ ಕೃಷ್ಣಾಪುರ, ಮುಸ್ತಫಾ ಸಿ. ಎಂ, ಮೊಹಮ್ಮದ್ ಹನೀಫ್. ಯು, ಹಿದಾಯತ್ ಮಾರಿಪಲ್ಲ, ಸೋಶಿಯಲ್ ಫಾರೂಕ್ ಮತ್ತು ನೌಷಾದ್ ಬಂದರ್ ಉಪಸ್ಥಿತರಿದ್ದರು.

Also read: IMD issues Yellow alert for Coastal Karnataka

Subscribe to our newsletter!

Other related posts

error: Content is protected !!