ಉತ್ತರ ಕನ್ನಡ ಜಿಲ್ಲೆ: ಜನರ ಸಮಸ್ಯೆಗೆ ಸ್ಪಂದಿಸಿದ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ

 ಉತ್ತರ ಕನ್ನಡ   ಜಿಲ್ಲೆ: ಜನರ ಸಮಸ್ಯೆಗೆ ಸ್ಪಂದಿಸಿದ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ
Share this post

ಕಾರವಾರ, ಮಾರ್ಚ್ 14, 2021 : ಸಣ್ಣ ನೀರಾವರಿ ಇಲಾಖೆಯ ರಾಜ್ಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಶನಿವಾರದಂದು ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದರು. ಗೋವಾ ಮಾರ್ಗವಾಗಿ ಕಾರವಾರಕ್ಕೆ ಭೇಟಿ ನೀಡಿದ ಅವರನ್ನು ಗಡಿಯಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆದ ವಿ.ಡಿ.ರಾಯ್ಕರ್,ವಿನೋದ್ ನಾಯ್ಕ್ ಮತ್ತು ಇತರರು ಸ್ವಾಗತಿಸಿಕೊಂಡರು.

ಅವರು ಕಣಸಗಿರಿ, ದೇವಬಾಗ ಪ್ರದೇಶದ ಖಾರಲ್ಯಾಂಡ್‍ಗಳ ಪ್ರದೇಶವನ್ನು ವೀಕ್ಷಿಸಿದರು. ಅಲ್ಲಿನ ಸಮಸ್ಯೆಗಳನ್ನು ಅರಿತುಕೊಂಡರು. ನಗರದ ಸಾಯಿ ಇಂಟರ್ ನೇಷನಲ್ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನಿಂದ ಬಂದಿದ್ದ ಗುತ್ತಿಗೆದಾರರು ಚರ್ಚೆ ನಡೆಸಿದರು.

“ಎಲ್ಲ ಗುತ್ತಿಗೆದಾರರ ಪರವಾಗಿ ಗುತ್ತಿಗೆದಾರರ ಸಂಘದ ವತಿಯಿಂದ ನಾವು ಪ್ಯಾಕೇಜ್ ಟೆಂಡರ್ ವ್ಯವಸ್ಥೆ ರದ್ದುಪಡಿಸುವಂತೆ ವಿನಂತಿಸಿದೆವು. ಒಂದಕ್ಕಿಂತ ಹೆಚ್ಚಿನ ಕಾಮಗಾರಿ ಗಳನ್ನು ಒಂದುಗೂಡಿಸಿ ಪ್ಯಾಕೇಜ್ ಮಾಡುವ ಕಾಮಗಾರಿಗೆ ನಮ್ಮ ಸಹಮತ ವಿಲ್ಲ ಅದರ ಬದಲು ಏಕರೂಪದ ಟೆಂಡರ್ ವ್ಯವಸ್ಥೆಯೇ ಇರಬೇಕು ಎಂದು ಆಗ್ರಹಿಸಲಾಯಿತು. ಕಾಮಗಾರಿ ಅವಧಿಯಲ್ಲಿ ಮಳೆಗಾಲದ ನಾಲ್ಕು ತಿಂಗಳು ಹೊರತುಪಡಿಸುವಂತೆ ಮಾಡಿದ ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು,” ಎಂದು ಸಂಘದ ಅಧ್ಯಕ್ಷ ಮಾಧವ ಬಿ ನಾಯಕ ದಿ ಕೆನರಾ ಪೋಸ್ಟ್ ಗೆ ತಿಳಿಸಿದರು.

ಇದೇ ವೇಳೆ ಕುಮಟಾ, ಹೊನ್ನಾವರ ಮತ್ತಿತರ ಕಡೆಗಳಲ್ಲಿ ಖಾರಲ್ಯಾಂಡ್‍ಗಳಲ್ಲಿ ಸಿಗಡಿ, ಚಿಪ್ಪು ಕೃಷಿ ನಡೆಸುತ್ತಿರುವವರರಿಗೆ ಉಪ್ಪುನೀರಿನ ಸಮಸ್ಯೆ ಎದುರಾಗುತ್ತಿರುವ ಕುರಿತು ಗಮನಸೆಳೆಯಲಾಯಿತು. ಇದಕ್ಕೆ ಸ್ಪಂದಿಸಿದ ಕಾರ್ಯದರ್ಶಿಯವರು ಅಗತ್ಯವಿರುವ ಕಡೆಗಳಲ್ಲಿ ಬಂಡುಗಳನ್ನು ನಿರ್ಮಿಸಿ ರೈತರಿಗೆ ಅನುಕೂಲ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಕುಮಟಾ, ಹೊನ್ನಾವರ, ಭಟ್ಕಳ ಭಾಗದವರಿಗೆ ಸಮಸ್ಯೆ ಉಂಟಾಗದಂತೆ ಕುಮಟಾದಲ್ಲಿ ಸಬ್ ಡಿವಿಶನ್ ಕಚೇರಿ ಆರಂಭಿಸುವ ಮನವಿಗೆ ತಕ್ಷಣವೇ ಸ್ಪಂದಿಸಿ ಲ್ಲಿ ಕಚೇರಿ ತೆರೆಯಲು ಎಲ್ಲ ರೀತಿಯ ಕ್ರಮವಹಿಸಲಾಗುತ್ತದೆ. ತಾಂತ್ರಿಕ ತಜ್ಞರ ನೇಮಕಾತಿ ಕಷ್ಟವಾದರೂ ಹೊರಗುತ್ತಿಗೆ ಆಧಾರದಲ್ಲಿ ನೇಮಕಮಾಡಿ ಕೆಲಸ ನಿರ್ವಹಣೆಗೆ ಕ್ರಮವಹಿಸುವಂತೆ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.

ಹಾರವಾಡ, ಹಟ್ಟಿಕೇರಿ, ಅವರ್ಸಾ ಭಾಗದಿಂದ ಬಂದಿದ್ದ ಅಲ್ಲಿನ ಪ್ರಮುಖರಾದ ಮಾರುತಿ ನಾಯ್ಕ, ವಿನೋದ ನಾಯ್ಕ, ಉಮೇಶ ಕಾಂಚನ್,ಮಂಜುನಾಥ ಟಾಕೀಕರ್, ಮುಂತಾದವರು ಖಾರಲ್ಯಾಂಡ್ ಸಮಸ್ಯೆ ಬಗೆಹರಿಸಲು ಮನವಿ  ನೀಡಿದರು. ಕಾರವಾರ ತಾಲೂಕಿನ ಮುಡಗೇರಿ ಭಾಗದ ಅರ್ಥಲಾವ ಕೆರೆ ಅಭಿವೃದ್ಧಿಗೆ ಆರ್.ವಿ.ನಾಯ್ಕ (ರಾಜಾ ವಕೀಲ) ನೇತೃತ್ವದಲ್ಲಿ ಜನರು ಮನವಿ ನೀಡಿದರು.

ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಬೆಳಗಾವಿ ವಿಭಾಗದ ಅಧೀಕ್ಷಕ ಅಭಿಯಂತರ ಸತೀಶ, ಎಕ್ಸಿಕ್ಯೂಟಿವ್ ಇಂಜಿನಿಯರ್ ಎಸ್.ಡಿ.ರಾಯ್ಕರ್, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿನೋದ ನಾಯ್ಕರನ್ನು ಗುತ್ತಿಗೆದಾರರ ಪರವಾಗಿ ಸನ್ಮಾನಿಸಲಾಯಿತು. ಈ ವೇಳೆ ಉಪಸ್ಥಿತರಿದ್ದ ಜ್ಯೂನಿಯರ್ ಇಂಜಿನಿಯರಗಳಾದ ರಜಿನಿ ತಳೇಕರ, ರೂಪಾ, ಪೂರ್ನ್ರಿಮಾ,ಅಮಿತಾ, ಮತ್ತಿತರರಿಗೂ ಪುಷ್ಪಗುಚ್ಛ ನೀಡಿ ಅಭಿನಂದಿಸಲಾಯಿತು.

ಗುತ್ತಿಗೆದಾರರ ಸಂಘಧ ಅಧ್ಯಕ್ಷ ಮಾಧವ ನಾಯಕ, ಕಾರ್ಯದರ್ಶಿ ಅನಿಲಕುಮಾರ ಮಾಳ್ಸೇಕರ, ಮುರಳಿ ಗೋವೇಕರ, ವಿಜಯ ದೇಸಾಯಿ, ರೋಹಿದಾಸ ಕೊಠಾರಕರ, ರವೀಂದ್ರ ಕೇರ್ಕರ್, ರಾಮಾ ಜೋಶಿ, ಮನೋಜ ನಾಗರಕಟ್ಟೆ, ಕುಮಟಾ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಕಲಬಾಗ, ಧೀರೂ ಶಾನಭಾಗ, ಲೊಕೇಶ ನಾಯ್ಕ, ಟೋನಿ, ಜಯ್ ಶೆಟ್ಟಿ, ರಿಚರ್ಡ್, ಸುಧೀರ ಪಂಡಿತ್, ಅಂಕೋಲಾ ಸಂಘದ ಅಧ್ಯಕ್ಷ ಪ್ರಶಾಂತ ನಾಯಕ,ಸಂದೇಶ ನಾಯ್ಕ್, ಮುಂತಾದವರು ಉಪಸ್ಥಿತರಿದ್ದರು.  

Subscribe to our newsletter!

Other related posts

error: Content is protected !!