ಪೈಪ್ಲೈನ್ ಕಾಮಗಾರಿ: ವಾಹನ ಸಂಚಾರ ನಿಷೇಧ
ಉಡುಪಿ, ಮಾರ್ಚ್ 09, 2021: ಉಡುಪಿ ನಗರಸಭಾ ವ್ಯಾಪ್ತಿಯ ಒಳಕಾಡು ವಾರ್ಡಿನ ಪದ್ಮಾವತಿ ಅಪಾರ್ಟ್ಮೆಂಟ್ ಎದುರಿನಿಂದ ಸರಸ್ವತಿ ಭವನವರೆಗೆ ಆಳಗುಂಡಿಗಳ ಮರು ನಿರ್ಮಾಣ ಮತ್ತು ಪೈಪ್ಲೈನ್ ಬದಲಾವಣೆ ಕಾಮಗಾರಿ ನಡೆಯಲಿದೆ.
ಸದರಿ ರಸ್ತೆಯಲ್ಲಿ ಮಾರ್ಚ್ 8 ರಿಂದ 22 ರ ವರೆಗೆ ವಾಹನ ಸಂಚಾರ ನಿಷೇಧಿಸಿ, ಬದಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.