ಡಿ .ಹರ್ಷೇಂದ್ರ ಕುಮಾರ್ ಅವರಿಗೆ ಕೇಶವಾನಂದ ಭಾರತೀ ಪ್ರಶಸ್ತಿ
ಧರ್ಮಸ್ಥಳ, ಮಾರ್ಚ್ 07, 2021: ಶ್ರೀ ಎಡನೀರು ಮಠದ ವತಿಯಿಂದ ಕೀರ್ತಿಶೇಷ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಹೆಸರಿನ ಚೊಚ್ಚಲ ಪ್ರಶಸ್ತಿಯನ್ನು ಯಕ್ಷಗಾನ ಕ್ಷೇತ್ರದ ವಿಶೇಷ ಸಾಧನೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ .ಹರ್ಷೇಂದ್ರ ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು.
ಮಾ 6 . ರಂದು ಸುಳ್ಯ ತಾಲೂಕು ಕಲ್ಲುಗುಂಡಿಯಲ್ಲಿ ಡಾ! ಕೀಲಾರುಗೋಪಾಲಕೃಷ್ಣ ಪ್ರತಿಷ್ಠಾನದಿಂದ ನಡೆದ ಸಂಪಾಜೆ ಯಕ್ಷೋತ್ಸವದಲ್ಲಿ ನಾಲ್ವರು ಸಾಧಕರನ್ನು ಪ್ರಶಸ್ತಿ ಪುರಸ್ಕಾರದೊಂದಿಗೆ ಗೌರವಿಸಲಾಯಿತು.
ಭಾರತ ಸರಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (ನ್ಯಾಯಾಂಗ ), ಬೆಂಗಳೂರಿನ ಡಾI ವಿದ್ಯಾಭೂಷಣ( ಸಂಗೀತ) ಹಾಗು ಸುಳ್ಯದ ಡಾI ರೇಣುಕಾ ಪ್ರಸಾದ್(ಶಿಕ್ಷಣ) ಪ್ರಶಸ್ತಿ ಪುರಸೃತರಾದ ಸಾಧಕರು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ದಿವ್ಯಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ , ಸಚಿವ ಎಸ್. ಅಂಗಾರ, ಕಲಾಪೋಷಕ ಟಿ. ಶಾಮ್ ಭಟ್, ಡಾI ಕೀಲಾರು ಪ್ರತಿಷ್ಠಾನದ ಉಪಾಧ್ಯಕ್ಷ ರಾಜಾರಾಮ್ ಭಟ್, ಕಾರ್ಯದರ್ಶಿ ಸುಮನಾ ಶಾಮ್ ಭಟ್ , ಮುರಳೀಧರ ಕೀಲಾರು, ನಿರ್ದೇಶಕ ಸುಬ್ರಹ್ಮಣ್ಯ ಉಪಾಧ್ಯಾಯ, ಮೊದಲಾದವರು ಉಪಸ್ಥಿತರಿದ್ದರು.