ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ:ತರಬೇತಿ ಕಾರ್ಯಾಗಾರ

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ:ತರಬೇತಿ ಕಾರ್ಯಾಗಾರ
Share this post
SKDRDP Training program

ಉಡುಪಿ, ಫೆಬ್ರವರಿ 02, 2021: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಉಡುಪಿ ಮತ್ತು ನಬಾರ್ಡ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜೀವನಾಧಾರ ಮತ್ತು ಉದ್ಯಮ ತರಬೇತಿಗೆ ಸಂಬಂಧಪಟ್ಟಂತೆ ಬಟ್ಟೆ ಬ್ಯಾಗ್ ತಯಾರಿ ಕೌಶಲ್ಯಾಭಿವೃದ್ಧಿ ತರಬೇತಿಯ 7 ದಿನಗಳ ಕಾರ್ಯಾಗಾರವನ್ನು ದಿನಾಂಕ 02.02.2021ರಂದು ರಾಷ್ಟ್ರೀಯ ಸ್ವ ಸಹಾಯ ಸಂಘಗಳ ತರಬೇತಿ ಸಂಸ್ಥೆNIST, ಉಡುಪಿಯಲ್ಲಿ ಹಮ್ಮಿಕೊಳ್ಳಲಾಯಿತು.

ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ಶ್ರೀ ರುದ್ರೇಶ್ ಐಆಒ, ಸಿಂಡಿಕೇಟ್ ಬ್ಯಾಂಕ್ ಉಡುಪಿ ಇವರು ನೆರವೇರಿಸಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕರಾದ ಶ್ರೀ ಗಣೇಶ್ ಬಿ. ವಹಿಸಿದ್ದರು.

SKDRDP Training program

ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಅಶೋಕ ಕೆ., ಉಡುಪಿ ತಾಲೂಕು ಯೋಜನಾಧಿಕಾರಿ ಶ್ರೀ ರೋಹಿತ್ ಎಚ್. ಉಪಸ್ಥಿತರಿದ್ದರು.

ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಅಶೋಕ್ ಕೆ. ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ರುದ್ರೇಶ್‍ರವರು ಐಆಒ, ಸಿಂಡಿಕೇಟ್ ಬ್ಯಾಂಕ್ ಇವರು ಉಡುಪಿ ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಇಂತಹ ತರಬೇತಿಗಳ ಅವಶ್ಯಕತೆ ಇದ್ದು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.

ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕರಾದ ಶ್ರೀ ಗಣೇಶ್ ಬಿ. ಇವರು ಮಹಿಳೆ ಇಂದು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು. ಆದುದರಿಂದ ಇಂತಹ ಅವಕಾಶಗಳು ಸಿಕ್ಕಾಗ ಇದರ ಪ್ರಯೋಜನವನ್ನು ತಾವೆಲ್ಲರೂ ಪಡೆದುಕೊಂಡು ಸ್ವಾವಲಂಬಿಗಳಾಗಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸ್ವ ಉದ್ಯೋಗಕ್ಕೆ ಪೂರಕವಾಗಿ ನಡೆದ ತರಬೇತಿ ಕಾರ್ಯಾಗಾರದ ಪ್ರಯೋಜನವನ್ನು ಉಡುಪಿ, ಬ್ರಹ್ಮಾವರ, ಬೈಂದೂರು, ಕುಂದಾಪುರ, ಕಾರ್ಕಳ ತಾಲೂಕಿನ 30 ಮಂದಿ ಸ್ವ ಸಹಾಯ ಸಂಘದ ಸದಸ್ಯರು ಪಡೆಯುತ್ತಿದ್ದಾರೆ.

ಈ ತರಬೇತಿಯಲ್ಲಿ ಭಾಗವಹಿಸಿದ ಸದಸ್ಯರಿಗೆ ತರಬೇತಿ ಕಿಟ್ ವಿತರಿಸಲಾಯಿತು.

ಉಡುಪಿ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಜ್ಯೋತಿ ಶೆಟ್ಟಿ ಸ್ವಾಗತಿಸಿದ್ದು, ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀ ರಮೇಶ್ ನಿರೂಪಿಸಿದರು. ಉಡುಪಿ ಜಿಲ್ಲಾ NRLM ಸಮನ್ವಯಾಧಿಕಾರಿ ಶ್ರೀ ರಮೇಶ್ ಧನ್ಯವಾದ ಸಲ್ಲಿಸಿದರು.

Subscribe to our newsletter!

Other related posts

error: Content is protected !!