ಉಡುಪಿ: ಮೂರನೇ ಶಸ್ತ್ರಾಸ್ತ್ರ ವಿಲೇವಾರಿ ಕಡ್ಡಾಯ

 ಉಡುಪಿ: ಮೂರನೇ ಶಸ್ತ್ರಾಸ್ತ್ರ  ವಿಲೇವಾರಿ ಕಡ್ಡಾಯ
Share this post

ಉಡುಪಿ, ಡಿ 06 2020: ಭಾರತೀಯ ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆಯ ಪ್ರಕಾರ ಆತ್ಮರಕ್ಷಣೆ ಹಾಗೂ ಬೆಳೆ ರಕ್ಷಣೆಗಾಗಿ ಅಧಿಕೃತ ಶಸ್ತ್ರಾಸ್ತ್ರ ಪರವಾನಿಗೆದಾರರು ತಮ್ಮ ಶಸ್ತ್ರಾಸ್ತ್ರಪರವಾನಿಗೆಯಲ್ಲಿನ ಮೂರನೇ ಆಯುಧವನ್ನು ಹೊಂದಲು ಅವಕಾಶವಿರುವುದಿಲ್ಲ ಮತ್ತು ತಮ್ಮ ಶಸ್ತ್ರಾಸ್ತ್ರ ಪರವಾನಿಗೆಯಲ್ಲಿ ಗರಿಷ್ಟ 2 ಶಸ್ತ್ರಾಸ್ತ್ರವನ್ನು ಹೊಂದಲು ಮಾತ್ರ ಅವಕಾಶವಿರುತ್ತದೆ.

ಆದ್ದರಿಂದ ಎಲ್ಲಾ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಮೂರನೇ ಶಸ್ತ್ರಾಸ್ತ್ರವನ್ನು ಡಿಸೆಂಬರ್ 13 ರ ಒಳಗಾಗಿ ಹತ್ತಿರದ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಬೇಕು ಹಾಗೂಶಸ್ತ್ರಾಸ್ತ್ರವನ್ನು ಮಾರಾಟ ಮಾಡುವ ಮೂಲಕ ವಿಲೇವಾರಿ ಮಾಡಬೇಕು.

ಉಲ್ಲಂಘನೆಯಾದಲ್ಲಿ ಅಂತಹ ಪರವಾನಿಗೆದಾರರ ವಿರುದ್ಧ ಶಸ್ತ್ರಾಸ್ತ್ರಕಾಯ್ದೆಯಡಿ ಕಾನೂನು ಕ್ರಮ
ಜರುಗಿಸಲಾಗುವುದು.

ಆಯುಧ ಪರವಾನಿಗೆ ಕೋರಿ ಅರ್ಜಿ ಸಲ್ಲಿಸುವವರು ಆನ್‌ಲೈನ್ www.mha.gov.in ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ದೂರವಾಣಿ ಸಂಖ್ಯೆ: 0820-2574925 ಅಥವಾ ಟೋಲ್ ಫ್ರೀ ನಂಬರ್ 1077 ಅನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!