ಕಾರವಾರ: ಅಂಚೆ ಪಿಂಚಣಿ ಅದಾಲತ್

 ಕಾರವಾರ: ಅಂಚೆ ಪಿಂಚಣಿ ಅದಾಲತ್
Share this post


ಕಾರವಾರ ಡಿಸೆಂಬರ್ 5, 2020: ಕಾರವಾರ ವಿಭಾಗೀಯ ಅಂಚೆ ಪಿಂಚಣಿ ಅದಾಲತ್ ಡಿ 29 ರಂದು ಬೆಳಿಗ್ಗೆ 11 ಕ್ಕೆ ಕಾರವಾರ ಅಂಚೆ ಅಧೀಕ್ಷಕರ ಕಾರ್ಯಾಲಯ ದಲ್ಲಿ ನಡೆಯಲಿದೆ.

ಕಾರವಾರ ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಅಂಚೆ ಪಿಂಚಣಿದಾರರು ಮಾತ್ರ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಗ್ರಾಮೀಣ ಅಂಚೆ ಇಲಾಖೆಯ ಮೂಲಕ ಪಿಂಚಣಿ ಪಡೆಯುತ್ತಿರುವ ಇತರೆ ನೌಕರರಿಗೆ ಯಾವುದೆ ಅವಕಾಶ ಇರುವುದಿಲ್ಲ ಹಾಗೂ ಭತ್ಯೆ ಕೊಡಲಾಗುವುದಿಲ್ಲ.

ಪಿಂಚಣಿದಾರರು ತಮಗೆ ಬಂದಿರುವ ಸಮಸ್ಯೆಗಳನ್ನು ಲಿಖಿತವಾಗಿ ತಮ್ಮ ವಿವರ, ವಿಳಾಸ ಪಿ. ಪಿ. ಒ ನಂಬರ್ ಮತ್ತು ತಾವು ಪಿಂಚಣಿ ಪಡೆದುಕೊಳ್ಳುತ್ತಿರುವ ಅಂಚೆ ಕಛೇರಿ ಅಥವಾ ಅಂಚೆ ಅಧೀಕಕರ ಕರ್ಯಾಲಯಕ್ಕೆ ಡಿ 28 ರ ಒಳಗಾಗಿ ಕಳುಹಿಸುವಂತೆ ಅಂಚೆ ಅಧೀಕ್ಷಕರಾದ ಜಿ. ಹರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!