ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೇವಾ ರಶೀದಿ ವಿತರಿಸುವ ಸ್ವಯಂಚಾಲಿತ ಯಂತ್ರ ಉದ್ಘಾಟನೆ
- ಪ್ರವಚನ ಮಂಟಪ ಹಾಗೂ ಸಹ್ಯಾದ್ರಿ ವಸತಿ ಗೃಹದಲ್ಲಿ ಸೇವಾ ರಶೀದಿ ವಿತರಿಸುವ ಸ್ವಯಂಚಾಲಿತ ಯಂತ್ರ (KIOSK) ಪ್ರಾರಂಭ
- ಕಾರ್ಡ್ ಕಾರ್ಡ್, ಯುಪಿಐ ಮೂಲಕ ಸೇವೆಯ ಹಣ ಪಾವತಿ
ಧರ್ಮಸ್ಥಳ, ಅ 29: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದೇವಳದ ಭಕ್ತರ ಅನುಕೂಲತೆಗಾಗಿ ಕ್ಷೇತ್ರದ ಪ್ರವಚನ ಮಂಟಪ ಹಾಗೂ ಸಹ್ಯಾದ್ರಿ ವಸತಿ ಗೃಹದಲ್ಲಿ ಸೇವಾ ರಶೀದಿ ವಿತರಿಸುವ ಯಂತ್ರ (KIOSK) ಉದ್ಘಾಟಿಸಲಾಯಿತು.
ಸೇವಾ ಕೌಂಟರ್ ಎದುರು ಜನಸಂದಣಿ ತಪ್ಪಿಸಲು ಸಹಾಯಮಾಡುವ ಈ ಯಂತ್ರ ವು ಭಕ್ತರಿಗೆ ತ್ವರಿತವಾಗಿ ಸೇವಾ ರಶೀದಿ ಪಡೆಯಲು ಸಹಕಾರಿಯಾಗಲಿದೆ. ಭಕ್ತರು ನೇರವಾಗಿ ತಮ್ಮಅಪೇಕ್ಷೆಯ ಸೇವೆಗಳ ರಶೀದಿ ಪಡೆದು ಬಳಿಕ ದೇವಾಲಯಕ್ಕೆ ಸರತಿ ಸಾಲಿನಲ್ಲಿ ಬಂದು ಸ್ವಾಮಿ ದರ್ಶನ ಪಡೆಯಬಹುದು.
ಇದರಿಂದ ಭಕ್ತಾದಿಗಳಿಗೆ ಸಮಯದ ಉಳಿತಾಯವಾಗಲಿದೆ. ತಂತ್ರಜ್ಞಾನ ಅಳವಡಿಕೆಯಲ್ಲಿ ಕ್ಷೇತ್ರದ ಇನ್ನೊಂದು ಹೆಜ್ಜೆ ಇದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆ, ,ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಪೂರಣ್ ವರ್ಮ, ಲಕ್ಷ್ಮೀನಾರಾಯಣ್ ಪಾರ್ಶ್ವನಾಥ್, ಮಲ್ಲಿನಾಥ್, ,ಚಂದ್ರಕಾಂತ, ನವೀನ್, KIOSK ನ ಅಭಿವೃದ್ದಿ ತಂಡ, ಧರ್ಮಸ್ಥಳ ಬ್ಯಾಂಕ್ ಆಫ್ ಬರೋಡದ ವಿಜಯಪಾಟೀಲ್, ಕಿರಣ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.