ಹಟ್ಡಿಕೇರಿ ಶ್ರೀ ನಾಗಯಲ್ಲಮ್ಮ ದೇವಿಯ ದಸರಾ ಮಹೋತ್ಸವ
ಅಂಕೋಲಾ, ಅ 16: ವರ್ಷ ಪ್ರತಿಯಂತೆ ಈ ವರ್ಷ ವೂ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದ ಶ್ರೀ ನಾಗಯಲ್ಲಮ್ಮ ದೇವಿಯ ಸನ್ನಿಧಿ ಯಲ್ಲಿ ಅ 17 ರಿಂದ ಅ 26 ರ ವರೆಗೆ ದಸರಾ ಉತ್ಸವ ನಡೆಯಲಿದೆ.
ದೇವಾಲಯದ ಎಲ್ಲ ಕಾರ್ಯಕ್ರಮಗಳು ಕೋವಿಡ್-19 ಕಾರಣದಿಂದ ಸರಕಾರದ ನಿಯಮಾವಳಿ ಪ್ರಕಾರವೇ ನಡೆಯುವುದು. ಆದ್ದರಿಂದ.ದೇವಿಯ ಭಕ್ತಾದಿಗಳು ಮಾಸ್ಕ್ ಧರಿಸಿ ಸಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಿ ದೇವಿಯ ದರ್ಶನವನ್ನು ಪಡೆಯಬೇಕಾಗಿ ಶ್ರೀ ರೇಣುಕಾದೇವಿ ದೇವಸ್ಥಾನ ಅಭಿವೃದ್ಧಿ ಹಾಗೂ ಉತ್ಸವ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ. 17 ರಂದು ಘಟ ಸ್ಥಾಪನೆಯೊಂದಿಗೆ ಶ್ರೀ ದೇವಿಯ ಪೂಜೆ ನಡೆಯಲಿದೆ. ಅ 23 ರಂದು ಸುಹಾಸಿನಿ ಯರಿಗಾಗಿ ಅರಷಿನ ಕುಂಕುಮ ಕಾರ್ಯಕ್ರಮ, ಅ 25 ರಂದು ಆಯುಧ ಪೂಜೆ ಹಾಗೂ ಅ 26 ರಂದು ದಸರಾ ಪೂಜೆ ನಡೆಯಲಿದೆ.
ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಸಮಾಜಿಕ ಅಂತರವನ್ನು ಪಾಲಿಸಿ ಹೂ ಹಣ್ಣು ಕಾಯಿ ಸೇವೆ ಸಲ್ಲಿಸಲು ಅವಕಾಶ ಇರುತ್ತದೆ, ಪ್ರತಿ ವರ್ಷದಂತೆ ನಡೆಯುವ ತುಲಾಭಾರ ಸೇವೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಈ ವರ್ಷ ಕೋವಿಡ್-19 ನ ಕಾರಣದಿಂದ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಮಾಹಿತಿಗಾಗಿ 8277225544, 9535453823 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.