ಧೈರ್ಯದಿಂದ ಕೋವಿಡ್ ಪರೀಕ್ಷೆಗೊಳಪಡಿ,ಜಾಗರೂಕತೆ ವಹಿಸಿ: ಮಾಧವ ನಾಯಕ

 ಧೈರ್ಯದಿಂದ ಕೋವಿಡ್ ಪರೀಕ್ಷೆಗೊಳಪಡಿ,ಜಾಗರೂಕತೆ ವಹಿಸಿ: ಮಾಧವ ನಾಯಕ
Share this post
ಮಾಧವ ನಾಯಕ,
ಅಧ್ಯಕ್ಷರು, ಜನಶಕ್ತಿ ವೇದಿಕೆ

ಇತ್ತೀಚೆಗೆ ಕೆಲವರು ಅನಾರೋಗ್ಯ ಕಾಡಿದರೆ ಆಸ್ಪತ್ರೆಗೆ ತೆರಳಲು ಭಯಪಡುತ್ತಿರುವ ವಿಚಾರ ತಿಳಿಯಿತು. ಜ್ವರ ಬಂದರೆ ಆಸ್ಪತ್ರೆಗೆ ತೆರಳಿದರೆ ತಪಾಸಣೆ ನಡೆಸಿ ಕೊರೊನಾ ಪಾಸಿಟಿವ್ ಎಂದು ವರದಿ ನೀಡುತ್ತಾರೆ, ಅದರ ಬಳಿಕ ನಾವು ಕಷ್ಟ ಅನುಭವಿಸಬೇಕಾಗುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ.

ಆದರೆ ನನ್ನ ಅನುಭವವನ್ನೇ ಆಧರಿಸಿ ಜನರಿಗೆ ಹೇಳುವುದಾದರೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ತಪ್ಪದೆ ತಕ್ಷಣ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಿ. ಕೊರೊನಾ ಇರಲಿ, ಇಲ್ಲದಿರಲಿ ಸೂಕ್ತ ಚಿಕಿತ್ಸೆ ಪಡೆಯಬೇಕಾಗಿರುವುದು ನಮ್ಮ‌ ಕರ್ತವ್ಯವೂ, ಜವಾಬ್ದಾರಿಯೂ ಹೌದು.

ಕೆಲ ದಿನಗಳ ಹಿಂದೆ ನನಗೂ ಜ್ವರ, ನೆಗಡಿ ಸಮಸ್ಯೆ ಕಾಡಿತ್ತು. ವರ್ಷವೂ ಅಕ್ಟೋಬರ್ ಸಮಯ್ದಲ್ಲಿ ನನಗೆ ಈ ಸಮಸ್ಯೆ ಮಾಮೂಲಿನಂತೆ ಕಾಣಿಸಿಕೊಳ್ಳುತ್ತದೆ. ನನ್ನ ಅನಾರೋಗ್ಯದ ಕುರಿತಾಗಿ ಹಿರಿಯರಾದ ಗಂಗಾಧರ ಹಿರೇಗುತ್ತಿ ಅವರ ಬಳಿ ಹೇಳಿಕೊಂಡಾಗ ಅವರು ಕೂಡಲೆ ಕೊರೊನಾ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

ನನಗೂ ಅವರ ಸಲಹೆ ಔಚಿತ್ಯವೆನಿಸಿ ಕೂಡಲೆ ಕುಟುಂಬ ಸದಸ್ಯರೆಲ್ಲರ ತಪಾಸಣೆ ಜೊತೆಗೆ ನಾನೂ ಕೊರೊನಾ ತಪಾಸಣೆಗೊಳಪಟ್ಟೆ. ನನ್ನ ವರದಿ ಮಾತ್ರ ಪಾಸಿಟಿವ್ ಬಂದಿತ್ತು. ಉಳಿದವರದ್ದು ನೆಗೆಟಿವ್.

ಧೈರ್ಯಗುಂದದ ನಾನು ವೈದ್ಯರ ಸಲಹೆಯಂತೆ ಮನೆಯಲ್ಲೇ ಐಸೊಲೇಶನ್ ಗೊಳಪಟ್ಟು ಚಿಕಿತ್ಸೆ ಪಡೆದುಕೊಂಡೆ. ವೈದ್ಯರಾದ ಡಾ.ಅಮಿತ ಕಾಮತ್, ಡಾ.ಗಜಾನನ ನಾಯಕ, ಡಾ.ಶ್ರೀನಿವಾಸ ಮತ್ತಿತರರು ನೀಡಿದ ಸಲಹೆಯಂತೆ ಔಷಧಗಳನ್ನು ಕಾಲಕಾಲಕ್ಕೆ ಪಡೆದುಕೊಂಡೆ. ಜೊತೆಗೆ ಮನೆಯಲ್ಲೇ ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯ, ರೋಗನಿರೋಧಕ ಶಕ್ತಿ ವೃದ್ಧಿಸುವ ಆಹಾರಗಳನ್ನು ಸೇವಿಸಿದೆ. ಪರಿಣಾಮ ಈಗ ಸಂಪೂರ್ಣ ಗುಣಮುಖನಾಗಿರುವೆ.

ಒಂದು ವೇಳೆ ನಾನು ಅನಾರೋಗ್ಯ ಸಮಸ್ಯೆ ಪ್ರತಿವರ್ಷದಂತೆ ಇದೆ ಎಂದು ಅಲಕ್ಷಿಸಿದ್ದರೆ ನಾನು ಗಂಭೀರ ಸ್ಥಿತಿಗೆ ತಲುಪುವ ಆತಂಕವೂ ಇತ್ತೆನೊ? ಎಂಬ ಪ್ರಶ್ನೆ ಈಗ ನನ್ನೊಳಗೆ ಮೂಡಿದೆ. ಸಕಾಲಕ್ಕೆ ಕೊರೊನಾ ಪರೀಕ್ಷೆಗೊಳಪಟ್ಟು ಚಿಕಿತ್ಸೆ ಪಡೆದ ಕಾರಣ ಅಪಾಯದಿಂದ ಪಾರಾಗಿರುವೆ.

ಇದೇ ಕಾರಣಕ್ಕೆ ನಾನು ಎಲ್ಲ ಸಾರ್ವಜನಿಕರಲ್ಲೂ ವಿನಂತಿಸುವುದೇನೆಂದರೆ ನೀವು ಕೂಡ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅನಾರೋಗ್ಯ ಉಂಟಾದರೆ ಸ್ವಯಂ ವೈದ್ಯರಾಗುವ ಬದಲು ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ತಪಾಸಣೆ ಮಾಡಿಸಿಕೊಳ್ಳಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮಾಸ್ಕ್ ಕಡ್ಡಾವಾಗಿ ಬಳಸಿ ಎಂದು ವಿನಂತಿಸುತ್ತೇನೆ.

Also read:

Uttara Kannada: Now reflector stickers on stray cattle horns

Kasarkod, Padubidri beaches get ‘Blue Flag’ tag

Subscribe to our newsletter!

Other related posts

error: Content is protected !!