ಶ್ರೀ ಕೃಷ್ಣಾಪುರ ಪರ್ಯಾಯೋತ್ಸವ: ಕಾರ್ಕಳ, ಕಾಪು ಭಕ್ತರಿಂದ ಹೊರೆಕಾಣಿಕೆ
ಉಡುಪಿ, ಜ 13, 2022: ಶ್ರೀಕೃಷ್ಣಾಪುರದ ಪರ್ಯಾಯೋತ್ಸವಕ್ಕೆ ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಕಾಪು ತಾಲೂಕಿನ ಭಕ್ತಾದಿಗಳಿಂದ ಹಾಗೂ ಕೃಷ್ಣಾಪುರ ಮಠದ ಬಾಡಿಗೆದಾರರು,ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಾಲೇಜು, ಜ್ಞಾನಸುಧಾ ಶಾಲಾ ಸಂಸ್ಥೆ, ಪಾಟಿದಾರರ ಸಮಾಜ, ವಲಸೆ ಕಾರ್ಮಿಕರು ಮುಂತಾದ ಭಕ್ತಾದಿಗಳ ವತಿಯಿಂದ ಹೊರೆಕಾಣಿಕೆ ಸಮರ್ಪಣೆಯು ನಡೆಯಿತು.
ಜ್ಞಾನಸುಧಾ ಶಿಕ್ಷಣ ಸಮೂಹ ಸಂಸ್ಥೆಯ ಸಂಚಾಲಕರಾದ ಸುಧಾಕರ್ ಶೆಟ್ಟಿ ,ಹೊರೆಕಾಣಿಕೆ ಸಮಿತಿಯ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪರ್ಯಾಯೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್, ರಾಜಗೋಪಾಲ್ ಭಟ್, ಪಾಟಿದಾರ್ ಸಮಾಜದ ಜಿಲ್ಲಾಧ್ಯಕ್ಷರಾದ ಅಮೃತ್ ಭಾಯ್ ಪಟೇಲ್, ಮನ್ಸುಕ್ ಲಾಲ್ ಪಟೇಲ್, ಪುರುಷೋತ್ತಮ್ ಪಟೇಲ್, ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರೆ, ಪುರಸಭೆ ಮಾಜಿ ಅಧ್ಯಕ್ಷರಾದ ಅನಿಲ್ ಕುಮಾರ, ಕಾಪುವಿನ ಉದ್ಯಮಿ ಶ್ರೀಕರ್ ಕಲ್ಯ ,ಪಡುಬಿದ್ರೆಯ ಉದ್ಯಮಿ ನವೀನ್ ಚಂದ್ರ ಜೆ ಶೆಟ್ಟಿ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಧರ್ಮದರ್ಶಿ ರವೀಂದ್ರ ಶೆಟ್ಟಿ, ಪ್ರಧಾನ ಅರ್ಚಕ ರಾಮದಾಸ ಆಚಾರ್ಯ, ರಘುವೀರ್ ಶೆಣೈ ,ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖ ಉಮೇಶ್ ನಾಯಕ್, ರಾಜೇಶ್ ಕುಂದರ್ ಉದ್ಯಾವರ, ಬಜರಂಗ ದಳದ ತಾಲ್ಲೂಕು ಸಂಚಾಲಕ ಜಯಪ್ರಕಾಶ್ ಪ್ರಭು ,ಗಾಯತ್ರಿ ಪ್ರಭು ಪಲಿಮಾರು, ಸುರೇಶ್ ದೇವಾಡಿಗ, ಈಶ್ವರ ಚಿಟ್ಪಾಡಿ ,ರಾಧಾಕೃಷ್ಣ ಮೆಂಡನ್, ಸತೀಶ್ ಕುಮಾರ್, ವಾಸುದೇವ ಭಟ್ ಪೆರಂಪಳ್ಳಿ, ಮಟ್ಟು ಲಕ್ಷ್ಮೀನಾರಾಯಣ ರಾವ್ ,ಹೇಮಂತ್ ಶೆಟ್ಟಿ ಮಾರ್ಪಳ್ಳಿ ,ರಮಾಕಾಂತ್ ರಾವ್ ಪಡುಬಿದ್ರಿ ಶ್ರೀಕಾಂತ್ ರಾವ್.ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಮೊದಲಾದವರ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಸುಪ್ರಸಾದ್ ಶೆಟ್ಟಿ ಮೆರವಣಿಗೆಯ ವ್ಯವಸ್ಥೆಯನ್ನು ಮಾಡಿದರು.
ಶ್ರೀಕೃಷ್ಣಾಪುರ ಪರ್ಯಾಯೋತ್ಸವಕ್ಕೆ ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಕಾಪು ತಾಲೂಕಿನ ಭಕ್ತಾದಿಗಳಿಂದ ಹಾಗೂ ಕೃಷ್ಣಾಪುರ ಮಠದ ಬಾಡಿಗೆದಾರರು,ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಾಲೇಜು,ಜ್ಞಾನಸುಧಾ ಶಾಲಾ ಸಂಸ್ಥೆ,ಪಾಟಿದಾರರ ಸಮಾಜ,ವಲಸೆ ಕಾರ್ಮಿಕರು,ಸುಧಾಕರ್ ಶೆಟ್ಟಿ (ಜ್ಞಾನ ಸುಧಾ ಕಾಲೇಜು )ಇಂದಿರಾ ಶಿವ ರಾವ್ ಕಾಲೇಜು, ಶ್ರೀ ರಾಮದಾಸ್ ಆಚಾರ್ಯ (ಅರ್ಚಕರು ಮುಂಡ್ಕೂರು ದೇವಸ್ಥಾನ )ರವೀಂದ್ರ ಶೆಟ್ಟಿ ಮುಂಡ್ಕೂರು, ಉಮೇಶ್ ನಾಯಕ್, ಶ್ರೀಕಾಂತ್ ಶೆಟ್ಟಿ ಕಾಪು, ಅನಿಲ್ ಕುಮಾರ್, ಶಶಿಕಾಂತ್ ಪಡುಬೆಳ್ಳೆ, ಹರೀಶ್ ಜೋಯಿಸ್ ಪಡುಬಿದ್ರೆ, ಶ್ರೀ ರಾಮಕಾಂತ್ (ಅಧ್ಯಕ್ಷರು ತರಂಗಿಣಿ ಮಿತ್ರ ಮಂಡಳಿ ಪಡುಬಿದ್ರೆ ), ರಾಜೇಶ್ ಕುಂದರ್, ಉದ್ಯಾವರ, ಗಾಯತ್ರಿ ಪ್ರಭು(ಅಧ್ಯಕ್ಷರು )ಪಲಿಮಾರು,ಶ್ರೀಕಾಂತ್ ಅಲೆವೂರ್, ವಿಷ್ಣು ಮೂರ್ತಿ ಆಚಾರ್ ಪಾದೆಬೆಟ್ಟು ಮೊದಲಾದ ಹೊರೆಕಾಣಿಕೆಯನ್ನುಸಮರ್ಪಿಸಿದ ಭಕ್ತಾದಿಗಳನ್ನುಉದ್ದೇಶಿಸಿ ಕೋವಿಡ್ ನ ಈ ಸಂಕಷ್ಟ ಕಾಲದಲ್ಲೂ ತಾವೆಲ್ಲರೂ ಅರ್ಪಿಸಿದ ಕಾಣಿಕೆಯನ್ನು ಶ್ರೀಕೃಷ್ಣ ದೇವರು ಸ್ವೀಕರಿಸಿ ಸಮಾಜದ ಎಲ್ಲರಿಗೂ ಕಲ್ಯಾಣವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಪಲವನ್ನಿತ್ತು ಹರಸಿದರು.
ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ಮೊದಲಾದವರ ಉಪಸ್ಥಿತಿಯಲ್ಲಿ ವಾಸುದೇವ ಭಟ್ ಪೆರಂಪಳ್ಳಿಯವರು ಪ್ರಸ್ತಾವನೆಗೈದು ಸಮಿತಿ ಅಧ್ಯಕ್ಷರಾದ ಸೂರ್ಯ ನಾರಾಯಣ ಉಪಾಧ್ಯಾಯರು ಸ್ವಾಗತಿಸಿದರು. ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಸುಪ್ರಸಾದ್ ಶೆಟ್ಟಿ,ಧನ್ಯವಾದವಿತ್ತರು.