ಬೆಳ್ತಂಗಡಿ ಡಿಸೆಂಬರ್, 14, 2020: ಸಾಹಿತ್ಯ ಸಮಾಜದ ಕನ್ನಡಿಯಂತಿದ್ದು ಸಮಾಜದ ರಕ್ಷಣೆ ಮತ್ತು ಪೋಷಣೆಗೆ ಸಾಹಿತ್ಯ ಅಗತ್ಯ ಎಂದು ಬೆಂಗಳೂರಿನ ಹಿರಿಯ ವಿದ್ವಾಂಸ ಡಾ. ಎಸ್. ರಂಗನಾಥ್ ಹೇಳಿದರು. ಅವರು ಸೋಮವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 88ನೆ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯಕ್ಕೆ ಔಷಧೀಯ ಗುಣವೂ ಇದ್ದು ಜೀವನ ಮೌಲ್ಯಗಳ ಆಕರವಾಗಿದೆ. ಸಾಹಿತ್ಯದಲ್ಲಿ ಧರ್ಮ, ಕಲೆ, ಚಿತ್ರಕಲೆ, ಜೀವನ ಸೌಂದರ್ಯ, ವ್ಯಾಕರಣ, ವೈಚಾರಿಕತೆ – ಎಲ್ಲವೂ ಅಡಕವಾಗಿದೆ.ಕೊರೊನಾದಿಂದ ಮುಕ್ತಿ ಪಡೆಯಲು ಕೂಡಾ ಸಾಹಿತ್ಯ […]Read More
Search Results for: ಧರ್ಮಸ್ಥಳ
ಧರ್ಮಸ್ಥಳ, ಡಿಸೆಂಬರ್ 14, 2020: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವ ಪ್ರಯುಕ್ತ ಭಕ್ತರು ಅನೇಕ ರೀತಿ ಸೇವೆ ಸಲ್ಲಿಸುತ್ತಾರೆ. ಪ್ರತಿ ಬಾರಿಯಂತೆ ಈ ವರ್ಷ ಕೂಡ ಹರಕೆ ರೂಪದಲ್ಲಿ ಅಕ್ಕಿ ತೆಂಗಿನಕಾಯಿ ಸಿಹಿ ತಿಂಡಿ ಸಹಿತ ಹಲವು ವಸ್ತುಗಳನ್ನು ಭಕ್ತರು ನೀಡಿದ್ದಾರೆ. ಈ ಬಾರಿ ಹರಕೆ ರೂಪದಲ್ಲಿ ಬಂದ ಪ್ರಮುಖ ವಸ್ತುಗಳು: ಅಕ್ಕಿ : 1200 ಕ್ವಿಂಟಾಲ್ತರಕಾರಿ : 800 ಕ್ವಿಂಟಾಲ್ಬೆಲ್ಲ : 5 ಕ್ವಿಂಟಾಲ್ರಾಗಿ : 5 ಕ್ವಿಂಟಾಲ್ ಸಿಹಿ ತಿಂಡಿಗಳು : 1,20,000ಬಾದ್‍ಷಾ : 25,000ಮೈಸೂರು […]Read More
ಇವರಿಗೆ 76 ವರ್ಷ ಪ್ರಾಯ. ಆದರೆ ಯುವಕರನ್ನೂ ನಾಚಿಸುವಂತಹ ಉತ್ಸಾಹ. Read More
ಬೆಳ್ತಂಗಡಿ, ಡಿಸೆಂಬರ್ 10, 2020: ಕಷ್ಟಕಾಲದಲ್ಲಿ ನಂಬಿದವರಿಗೆ ಇಂಬು ಕೊಟ್ಟು ಅಭಯದಾನ ನೀಡುವ ಪವಿತ್ರ ಕ್ಷೇತ್ರ ಧರ್ಮಸ್ಥಳ. ಅನಿರೀಕ್ಷಿತವಾಗಿ, ಅಪಾಯದ ಮಟ್ಟವನ್ನು ಅಳತೆ ಮಾಡಲೂ ಸಾಧ್ಯವಾಗದ ಕೊರೊನಾ ಭೀತಿಯಿಂದಾಗಿ ಜನರೆಲ್ಲ ಭಯ ಮತ್ತು ಆತಂಕದಿಂದ ಸೋತಿದ್ದಾರೆ. ಭೀತಿಯ ವಾತಾವರಣ ನಿವಾರಿಸಿ ಅವರಲ್ಲಿ ಪ್ರೀತಿ, ಭಕ್ತಿ, ವಿಶ್ವಾಸದೊಂದಿಗೆ ಅವಾಲುಗಳನ್ನು ಧೈರ್ಯದಿಂದ ಎದುರಿಸಲು ಧರ್ಮಸ್ಥಳದಿಂದ ಅಭಯದಾನ ನೀಡಲಾಗಿದೆ. ಸಹಸ್ರಾರು ಫಲಾನುಭವಿಗಳಿಂದ ನಮಗೆ ದೊರಕಿದ ಧನ್ಯತೆಯ ಮೌನ ಸಂದೇಶವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. […]Read More
ಬೆಳ್ತಂಗಡಿ, ಡಿಸೆಂಬರ್ 10, 2020: ಆರೋಗ್ಯ ಸಚಿವ ಡಾ. ಸುಧಾಕರ್ ಸಕುಟುಂಬಿಕರಾಗಿ ಗುರುವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಹೆಗ್ಗಡೆಯವರು ಸಚಿವರನ್ನು ಗೌರವಿಸಿದರು. ಕೊರೊನಾ ಹತೋಟಿಯಲ್ಲಿದೆ: ಕೊರೊನಾ ಈಗ ಹತೋಟಿಯಲ್ಲಿದ್ದು ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಒಂದು ವರ್ಷದೊಳಗೆ ಕೊರೊನಾ ಸಂಪೂರ್ಣ ನಿರ್ಮೂಲನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಸಹಕರಿಸಬೇಕು ಎಂದು ಸಲಹೆ ನೀಡಿದರು. […]Read More
ಬೆಳ್ತಂಗಡಿ, ನ 25: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 73 ನೆ ಜನ್ಮದಿನವನ್ನು ಧರ್ಮಸ್ಥಳದಲ್ಲಿ ಇಂದು ಸರಳವಾಗಿ ಆಚರಿಸಲಾಯಿತು. ಮಾಣಿಲದ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ, ಬಿ. ಅಪ್ಪಣ್ಣ ಹೆಗ್ಡೆ ಮೊದಲಾದವರು ಹೆಗ್ಗಡೆಯವರಿಗೆ ಗೌರವಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ಅರ್ಪಿಸಿದರು. ಸಾವಿರಾರು ಮಂದಿ ಅಭಿಮಾನಿಗಳು, ಭಕ್ತರು ದೂರವಾಣಿ, ವಾಟ್ಸಾಪ್, ವಿದ್ಯುದಂಚೆ […]Read More
ಬೆಳ್ತಂಗಡಿ, ನ 25: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ “ವಾತ್ಸಲ್ಯ” ಕಾರ್ಯಕ್ರಮಕ್ಕೆ ಹೇಮಾವತಿ ವಿ. ಹೆಗ್ಗಡೆಯವರು ಚಾಲನೆ ನೀಡಿದರು. “ರೋಗಿಗಳು, ನಿರ್ಗತಿಕರು, ಅಸಹಾಯಕರು, ವಿಧವೆಯರು ಹಾಗೂ ಬಡವರ ಕಷ್ಟಗಳಿಗೆ ಮಾನವೀಯತೆಯಿಂದ ಸ್ಪಂದಿಸಿ ಸಕಾಲಿಕ ನೆರವು, ಮಾರ್ಗದರ್ಶನ ನೀಡಿ ಅವರ ದುಃಖವನ್ನು ನಿವಾರಿಸಿ ಶಾಂತಿ, ನೆಮ್ಮದಿಯ ಜೀವನ ನಡೆಸುವಂತೆ ಅಭಯ ನೀಡುವುದೇ ವಾತ್ಸಲ್ಯ ಕಾರ್ಯಕ್ರಮದ ಉದ್ದೇಶವಾಗಿದೆ,” ಹೇಮಾವತಿ ವಿ. ಹೆಗ್ಗಡೆಯವರು ಹೇಳಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕಿಗೆ ಮಾರ್ಗದರ್ಶನ […]Read More
ಬೆಳ್ತಂಗಡಿ, ನ 23: ಧರ್ಮಸ್ಥಳದ ಶಾಂತಿವನ ದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಅನುವರ್ತನಾ ಚಿಕಿತ್ಸಾ ಘಟಕವನ್ನು ಡಿ. ಹರ್ಷೇಂದ್ರಕುಮಾರ್ ಸೋಮವಾರ ಉದ್ಘಾಟಿಸಿದರು. ಲೋಕಾಯುಕ್ತ ವಿಭಾಗದ ಜಿಲ್ಲಾ ನ್ಯಾಯಾಧೀಶ ಎಚ್.ಎ. ಮೋಹನ್, ಡಾ.ಶಿವಪ್ರಸಾದ್ ಶೆಟ್ಟಿ, ಡಾ. ಶಶಿಕಿರಣ್ ಡಾ. ಶಶಿಕಾಂತ್ ಜೈನ್ ಉಪಸ್ಥಿತರಿದ್ದರು. ಪಾದಗಳಿಗೆ ಮಸಾಜ್ ಮಾಡಿ ದೇಹದ ಅಂಗಗಳಿಗೆ ಹಾಗೂ ಮನಸ್ಸಿಗೆ ಮುದನೀಡುವ ಚಿಕಿತ್ಸಾ ಕ್ರಮವೇ ಅನುವರ್ತನಾ ಚಿಕಿತ್ಸೆ. Also read:Read More
ಬೆಳ್ತಂಗಡಿ, ನ 12 : ರಾಜ್ಯೋತ್ಸವ ಪ್ರಶಸ್ತಿ ಪುರಸೃತ, ಕಾರ್ಕಳದ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ಅವರನ್ನು ಅವರ ನಿವಾಸದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಶುಭಶ್ಚಂದ್ರರಾಜ್, ಪುರಂದರ ಭಟ್ ಗೌರವಿಸಿ ಅಭಿನಂದಿಸಿದರು. ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ, ಮೋಹನ್ ಪಡಿವಾಳ್, ನೇಮಿರಾಜ ಆರಿಗ, ಮಹಾವೀರ ಹೆಗ್ಡೆ, ಎಂಕೆ. ವಿಪುಲ್ ತೇಜ್, ಪಾಶ್ರ್ವನಾಥ ವರ್ಮಾ ಮೊದಲಾದವರು ಉಪಸ್ಥಿತರಿದ್ದರು.Read More
ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನತಾಣ ಕಾರ್ಯಕ್ರಮ ಉದ್ಘಾಟನೆ
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜ್ಞಾನತಾಣ ಕಾರ್ಯಕ್ರಮ ಉದ್ಘಾಟಿಸಿದರು.Read More