ಉಡುಪಿ ಸೆ 22 : ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರ್ಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವಾಗಬೇಕೆಂದು ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದರು. ಅವರು ಇಂದು ತಮ್ಮ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವರ್ಷಕ್ಕೊಮ್ಮೆ ಕಡ್ಡಾಯವಾಗಿ ಹೆಲ್ತ್ ಚೆಕ್ಆಪ್ ಕಾರ್ಯವು ಉನ್ನತ ಆಸ್ಪತ್ರೆಯ ಸಹಯೋಗದೊಂದಿಗೆ ಚಿಕಿತ್ಸೆ ನೀಡಬೇಕು. ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಜನಪರ ಕಲ್ಯಾಣ […]Read More
ಮಂಗಳೂರು, ಸೆ 22: ನರೇಂದ್ರ ಮೋದಿ ಸರಕಾರದ ರೈತ-ಕಾರ್ಮಿಕ-ದಲಿತ-ಮಹಿಳಾ ವಿರೋಧಿ ನೀತಿಗಳ ವಿರುದ್ದ ಹಾಗೂ ದೆಹಲಿ ಗಲಭೆಯ ನೆಪದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರ ಮೇಲೆ ಸುಳ್ಳು ಕೇಸ್ ದಾಖಲಿಸಿದ ಸರಕಾರದ ಧೋರಣೆ ಖಂಡಿಸಿ ಸಿ ಪಿ ಐ ಎಂ ನೇತ್ರತ್ವದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನುದ್ದೇಶಿಸಿ ಸಿ ಪಿ ಐ ಎಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡುತ್ತಾ, ದೇಶದ ಉದ್ದಗಲಕ್ಕೂ ಹೋರಾಟಗಳನ್ನು ಹತ್ತಿಕ್ಕಲು ಹೋರಾಟದ ಮುಂಚೂಣಿ ನಾಯಕರನ್ನು ಜೈಲಿಗಟ್ಟಲು […]Read More
ಜಲಾಶಯಗಳ ಇಂದಿನ ನೀರಿನ ಮಟ್ಟ Read More
ಒಸರಿಲ್ಲದಿರೆ ಅಲ್ಲಿ ಹಸಿರಾಗಿರದು ಬಾಳುಹಸಿರಲ್ಲದೆಡೆ ಹಕ್ಕಿ ಕಲರವವು ಶೂನ್ಯ |ಹೆಸರಿಹುದು ಹರಿದು ಒಡಲುಣಿಸಿರುವ ನದಿಗಷ್ಟೆಮಸಿಯಾಗದಿರು ಬೆಂದು ಪಣಿಯರಾಮ||೦೦೮೧|| ಜಯರಾಂ ಪಣಿಯಾಡಿRead More
ಕಾರವಾರ ಸೆ. 19 : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ಆದೇಶದನ್ವಯ ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ‘ಬನ್ನಿ ರಾಜಿ ಸಂಧಾನ ಮಾಡೋಣಾ’ ಎನ್ನುವ ಘೋಷವಾಖ್ಯದೊಂದಿಗೆ ಶನಿವಾರ ಜಿಲ್ಲೆಯ 22 ಬೆಂಚ್ಗಳಲ್ಲಿ ಆನ್ಲೈನ್ ಇ-ಲೋಕ್ ಅದಾಲತ್ ಹಮ್ಮಿಕೊಂಡು 1,482 ಪ್ರಕರಣಗಳನ್ನು ರಾಜಿಸಂಧಾನ ಮಾಡುವ ಮೂಲಕ ಅದ್ಬುತ್ ಯಶಸ್ಸು ಸಾಧಿಸಿತು. ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿಯಾಗಬಹುದಾದಂತಹ ಅಪರಾಧಿಕ, ಚೆಕ್ ಬೌನ್ಸ್, ಮೋಟಾರ್ ವಾಹನ ಅಪಘಾತ ಪರಿಹಾರ, ವೈವಾಹಿಕ/ಕೌಟುಂಬಿಕ, ಸಿವಿಲ್ ಪ್ರಕರಣಗಳು ಸೇರಿದಂತೆ ಇತರೆ […]Read More
ಕಾರವಾರ ಸೆ. 19: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ-2005ರ ಯೋಜನೆಯಡಿ ಕಾಮಗಾರಿಗಳ ಅನುಷ್ಠಾನದಲ್ಲಿ ವಂಚನೆಗಳು ಕಂಡು ಬಂದಲ್ಲಿ ದೂರು ನೀಡುವಂತೆ ಒಂಬುಡ್ಸಮನ್ ಆರ್ ಜಿ ನಾಯಕ ತಿಳಿಸಿದ್ದಾರೆ. ಮಾರ್ಗಸೂಚಿಗಳ ಉಲ್ಲಂಘನೆ, ಗುತ್ತಿಗೆದಾರರು, ಯಂತ್ರಗಳ ಬಳಕೆ, ಕಳಪೆ ಅಪೂರ್ಣ ಕಾಮಗಾರಿ, ಹಣದುರುಪಯೋಗ, ಕೆಲಸ ನಿರಾಕರಣೆ, ಉದ್ಯೋಗ ಚೀಟಿ ಪಂಚಾಯತಿ ಸುಪರ್ಧಿಯಲ್ಲಿ ಇಟ್ಟುಕೊಳ್ಳುವುದು, ಕನಿಷ್ಠ ಕೂಲಿ ಪಾವತಿಯಲ್ಲಿ ಕಡಿತ, ವಿಳಂಬ ಸೌಲಭ್ಯಗಳ ನೀಡಿಕೆಯಲ್ಲಿ ನಿರಾಕರಣೆ ವಂಚನೆ ಮೊದಲಾದ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಸಾರ್ವಜನಿಕರು, ಕೂಲಿ […]Read More
ಉಡುಪಿ ಸೆ 8 : ಜಿಲ್ಲೆಯ ಪಡುಬಿದ್ರೆ ಬೀಚ್ ಗೆ ಅಂತಾರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆಗೆ ಇನ್ನುಒಂದು ಹೆಜ್ಜೆ ಮಾತ್ರ ಇದ್ದು, ಶೀಘ್ರದಲ್ಲಿ ಪಡುಬಿದ್ರೆ ಬೀಚ್ ಗೆ ಬ್ಲೂ ಫ್ಲಾಗ್ ಸರ್ಟಿಫಿಕೇಶನ್ ದೊರೆಯಲಿದೆ ಎಂದು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ವಿಶ್ವಾಸ ವ್ಯಕ್ತಪಡಿಸಿದರು. ಅವರು ಶುಕ್ರವಾರ ಪಡುಬಿದ್ರೆಯ ಬ್ಲೂ ಫ್ಲಾಗ್ ಬೀಚ್ ನಲ್ಲಿ , ಕೇಂದ್ರ ಸರ್ಕಾರದ ಸ್ವಚ್ಛತಾ ಅಭಿಯಾನದ ಮುಂದುವರೆದ ಭಾಗವಾಗಿ ನಡೆದ, ಐ ಆಮ್ ಸೇವಿಂಗ್ ಮೈ ಬೀಚ್ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ […]Read More