ಮಂಗಳೂರು ಅ 03 :- ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಮೂಲನಿವಾಸಿ ಪಂಗಡದವರಾದ ಕೊರಗ ಸಮುದಾಯದ ಎಸ್.ಎಸ್.ಎಲ್.ಸಿ ಮತ್ತು ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಲು ಪ್ರೋತ್ಸಾಹ ಧನವನ್ನು ವರ್ಷದಲ್ಲಿ 2 ಬಾರಿ ನೀಡಲಾಗುವುದು. ಅರ್ಜಿಗಳನ್ನು ಆಯಾ ತಾಲೂಕಿನ ಸಹಾಯಕ ನಿರ್ದೇಶಕರು, (ಗ್ರೇಡ್-1&2) ಸಮಾಜ ಕಲ್ಯಾಣ ಇಲಾಖೆಯಲ್ಲಿ ಪಡೆದು ನವೆಂಬರ್ 30 ರೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ:0824-2451269,2450114 ಸಂಪರ್ಕಿಸಲು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ […]Read More
ಉಡುಪಿ , ಅ 02: ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿದ ಸ್ವಾತಂತ್ರ್ಯ ಪೂರ್ವದ ರೇಡಿಯೋ ಟವರ್ ಗೆ ಮರುಜೀವ ಬಂದಿದೆ. 1938 ರಲ್ಲಿ ನಿರ್ಮಾಣಗೊಂಡಿರುವ ಈ ಟವರ್ ಕೆಲವು ವರ್ಷಗಳಿಂದ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದ್ದು, ಕಳೆದ ಬಾರಿಯ ಗಾಂಧೀ ಜಯಂತಿ ಕಾರ್ಯಕ್ರಮದಂದು ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಇದನ್ನು ದುರಸ್ತಿಗೊಳಿಸಿ, ಸಾರ್ವಜನಿಕ ಬಳಕೆಗೆ ಅನುವು ಮಾಡಲು ಸೂಚಿಸಿದ್ದರು. ಇಂದು ಗಾಂಧೀ ಜಯಂತಿಯಂದು ಇದರ ಪ್ರಸಾರ ಕಾರ್ಯಕ್ಕೆ ಶಾಸಕ ರಘುಪತಿಭಟ್ ಚಾಲನೆ ನೀಡಿದರು. ಪ್ರಸ್ತುತ ದುರಸ್ತಿಗೊಂಡಿರುವ ಈ ಟವರ್ ಮೂಲಕ […]Read More
ಉಡುಪಿ ಅ 02: ಗಾಂಧೀ ಜಯಂತಿ ಪ್ರಯುಕ್ತ, ಕರಾವಳಿ ಕಾವಲು ಪೊಲೀಸ್ , ಮಲ್ಪೆ ಅವರವತಿಯಿಂದ , ಕಡಲ್ ಸೆಂಟರ್ ಫಾರ್ ಸಪ್ ಸರ್ಫ್ ಯೋಗ ಮತ್ತು ನೇಶನ್ ನೆಸ್ಟ್ ತಂಡದ ಸಹಯೋಗದಲ್ಲಿ , ಮಲ್ಪೆ ಲೈಟ್ಹೌಸ್ ದ್ವೀಪದಲ್ಲಿ ಮತ್ತು ಸಮುದ್ರ ತೀರ ಪ್ರದೇಶದಲ್ಲಿ ಸ್ಚಚ್ಛತಾ ಕಾರ್ಯಕ್ರಮವು, ಕರಾವಳಿ ಕಾವಲು ಪಡೆಯ ಎಸ್ಪಿ ಆರ್.ಚೇತನ್ ನೇತೃತ್ವದಲ್ಲಿ ಶುಕ್ರವಾರ ನಡೆಯಿತು. ಸಂಗ್ರಹಿಸಿದ ಕಸವನ್ನು ಮಣಿಪಾಲದ ಕಸ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು.Read More
ಮಂಗಳೂರು ಅ 01: ಮಂಗಳೂರು ಮಹಾನಗರ ಪಾಲಿಕೆ ಬೆಂಗ್ರೆ ವಾರ್ಡಿನ ಸಾರ್ವಜನಿಕ ರಿಗೆ ಅನುಕೂಲ ಆಗುವಂತೆ ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾದ ಮಾಹಿತಿ ಮತ್ತು ಸೇವಾ ಕೇಂದ್ರ ಹಾಗೂ ಕಾರ್ಪೊರೇಟ್ ಕಛೇರಿಯನ್ನು ಪಕ್ಷದ ರಾಜ್ಯ ಅಧ್ಯಕ್ಷರಾದ ಇಲ್ಯಾಸ್ ಮುಹಮ್ಮದ್ ತುಂಬೆ ಉದ್ಘಾಟಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಸುಹೈಲ್ ಖಾನ್ ವಹಿಸಿದ್ದರು.. ಬೆಂಗರೆ ಮುಯ್ಯುದ್ದೀನ್ ಜುಮ್ಮಾ ಮಸೀದಿ ಇದರ ಖತೀಬರಾದ ಶರೀಫ್ ದಾರಿಮಿ ದುವಾ ಆಶಿರ್ವಚನ ನೀಡಿದರು. ಈ ಸಂಧರ್ಭದಲ್ಲಿ […]Read More
ಉಜಿರೆ, ಅ.1: ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಭಾಸ್ಕರ ಹೆಗಡೆ ಅವರಿಗೆ ಮಂಗಳೂರು ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿದೆ. ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಪಿ.ಶಿವರಾಂ ಅವರ ಮಾರ್ಗದರ್ಶನದಲ್ಲಿ ‘ಪತ್ರಿಕೆಗಳ ಮೂಲಕ ಔಪಚಾರಿಕ ಶಿಕ್ಷಣ: ಕನ್ನಡ ಪ್ರಮುಖ ದೈನಿಕಗಳ ತೌಲನಿಕ ಅಧ್ಯಯನ’ ಶೀರ್ಷಿಕೆಯಲ್ಲಿ ಪಿ.ಎಚ್.ಡಿ ಮಹಾಪ್ರಬಂಧವನ್ನು ಸಲ್ಲಿಸಿದ್ದರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಳಕೋಡು ಗ್ರಾಮದವರಾದ ಭಾಸ್ಕರ ಹೆಗಡೆ ಅವರು […]Read More
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ದನ, ಎಮ್ಮೆ, ಹಂದಿಗಳಿಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಪಲ್ಸ್ ಪೋಲಿಯೋ ಮಾದರಿ 17 ನೇ ಸುತ್ತಿನ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮRead More
ಮಂಗಳೂರು ಅ 01: ಮಂಗಳೂರು ನಗರದ ಹಲವೆಡೆ ಅನೇಕ ವರ್ಷಗಳಿಂದ ನೊಂದಾಯಿತರಾಗಿರುವ ಗೂಡ್ಸ್ ಟೆಂಪೋ, ರಿಕ್ಷಾ, ಕಾರು ನಿಲ್ದಾಣಗಳನ್ನು ವಿವಿಧ ಕಾರಣಗಳನ್ನು ನೀಡಿ ನಿಲ್ದಾಣದ ಸ್ಥಳವನ್ನು ಆಕ್ರಮಿಸಿರುವುದು ಖಂಡನೀಯ ಎಂದು ದ.ಕ ಜಿಲ್ಲಾ ಕಾರ್ಮಿಕ ಪರಿಷತ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಐವನ್ ಡಿ ಸೋಜ ಖಂಡಿಸಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಕಾರ್ಮಿಕರ ಪರವಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದರು. ಐವನ್ ಡಿ ಸೋಜ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು, ಮೇಯರ್ […]Read More
ಉಡುಪಿ ಅ 01: ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯನ್ನು ಪ್ರಸಕ್ತ ಸಾಲಿನಿಂದ ಪ್ರಾರಂಭಿಸಲಾಗಿದ್ದು, ಯೋಜನೆಯ ಅನುಷ್ಟಾನಕ್ಕಾಗಿ ಅರ್ಹ ವ್ಯಕ್ತಿಗಳಿಂದ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳು ಜಿಲ್ಲಾ ಮಟ್ಟದ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿ ಲಭ್ಯವಿರುತ್ತವೆ. ಅರ್ಜಿಗಳನ್ನು ಪಡೆಯಲು ಅಕ್ಟೋಬರ್ ೧೬ ಕೊನೆಯ ದಿನ.ಭರ್ತಿ ಮಾಡಿದ ಅರ್ಜಿಯನ್ನು ಜಂಟಿ ಕೃಷಿ ನಿರ್ದೇಶಕರು, ಉಡುಪಿ ಇವರ ಕಚೇರಿಗೆ ಅಕ್ಟೋಬರ್ ೨೩ ಒಳಗೆ ಸಲ್ಲಿಸಬೇಕು. ಇದನ್ನೂ ಓದಿ: ಉಡುಪಿ […]Read More
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಮಂಡಿಸಿ ಒಪ್ಪಿಗೆ ಉಡುಪಿ, ಅ 01: ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸುವ ಯೋಜನೆಗೆ ಆರ್ಥಿಕ ಇಲಾಖೆ ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಸಚಿವ ಸಂಪುಟದ ಒಪ್ಪಿಗೆಯಷ್ಟೇ ದೊರೆಯಬೇಕಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ. “ಉಡುಪಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಂಬಂಧ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿರುವಂತೆ ಹಾಗೂ ಈ ಹಿಂದೆ ಮುಖ್ಯಮಂತ್ರಿಯವರು ಆಯವ್ಯಯದ ಮೇಲೆ ಉತ್ತರಿಸುವಾಗ ನಮ್ಮ ಬೇಡಿಕೆಯಂತೆ ಉಡುಪಿ […]Read More
