ಮಂಗಳೂರು,ಡಿ 03 2020: ಬಲಿಷ್ಠ ಕನಸು- ಆಕಾಂಕ್ಷೆಗಳಿಂದ ಕೂಡಿದ ಪರಿಶ್ರಮಗಳ ಮೂಲಕ ಶ್ರೇಷ್ಠ ಉದ್ಯಮಿಗಳಾಗಲು ಸಾಧ್ಯ ಮತ್ತು ಸ್ವ ಉದ್ಯೋಗದ ಮೂಲಕವೇ ಆರ್ಥಿಕ ಸ್ವಾವಲಂಭಿಗಳಾಗಬಹುದು ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು. ಸಂಕಲ್ಪ ಯೋಜನೆಯಡಿ ಆಯ್ದ ಜಿಲ್ಲೆಗಳಿದ್ದು ದಕ್ಷಿಣ ಕನ್ನಡದ ಸ್ವ ಉದ್ಯೋಗಾಕಾಂಕ್ಷಿಗಳು ತರಬೇತಿಯ ಸಂಪೂರ್ಣ ಸದುಪಯೋಗ ಪಡೆದು ಕ್ರಿಯಾಶೀಲ ಹಾಗೂ ಮಾದರಿ ಉದ್ಯಮಿಗಳಾಗಿ ಮೂಡಿ ಬರಬೇಕೆಂದು ಕರೆ ನೀಡಿದರು. ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಸಿಡಾಕ್ ಧಾರವಾಡ, […]Read More
ಮಂಗಳೂರು,ಡಿ 03 2020: ಪ್ರಸ್ತುತ ಸಾಲಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಗೂ ಮೆರಿಟ್ ಕಂ-ಮೀನ್ಸ್ ವಿದ್ಯಾರ್ಥಿವೇತನಕ್ಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಕಛೇರಿ ಮೌಲನಾ ಅಝಾದ್ ಭವನ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ ಮಂಗಳೂರು ಕಛೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆRead More
ಉಡುಪಿ, ಡಿ 02: ಜಿಲ್ಲೆಯ ದೊಡ್ಡಣಗುಡ್ಡೆಯ ಶಿವಳ್ಳಿ ತೋಟಗಾರಿಕೆ ಕ್ಷೇತ್ರದ ರೈತ ಸೇವಾಕೇಂದ್ರದ ಆವರಣದಲ್ಲಿ ಪ್ರತಿ ಗುರುವಾರ ರೈತಸಂತೆ ನಡೆಯಲಿದ್ದು, ರೈತ ಸಂತೆಯಲ್ಲಿ ಭಾಗವಹಿಸಲು ಇಚ್ಛಿಸುವ ರೈತರು ಹಾಗೂ ಇತರೆ ಯಾವುದೇ ರೈತ ಸಂಘ, ಸಂಸ್ಥೆಗಳು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಅರ್ಜಿಯನ್ನು ಡಿಸೆಂಬರ್ 21 ರ ಒಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿಲ್ಲಾ ಪಂಚಾಯತ್ ಉಡುಪಿ, ದೂ.ಸಂ:0820-2522837, ಕುಂದಾಪುರ ದೂ. ಸಂ:08254-230813, ಕಾರ್ಕಳ ದೂ.ಸಂ: 08258-230288, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಉಡುಪಿ ದೂ.ಸಂ: […]Read More
ಉಡುಪಿ, ಡಿ 02: ಉಡುಪಿ ನಗರಸಭಾ ವ್ಯಾಪ್ತಿಯ ಗುಂಡಿಬೈಲು ರಸಿಕ ಬಾರ್ನಿಂದ ದೊಡ್ಡಣಗುಡ್ಡೆ ಜುಮಾದಿಕಟ್ಟೆವರೆಗೆ ಮ್ಯಾನ್ಹೋಲ್ ಸೋರಿಕೆಯಾಗುತ್ತಿರುವುದರಿಂದ ದುರಸ್ಥಿ ಪಡಿಸಲು ಹಾಗೂ ಒಳಚರಂಡಿ ಪೈಪ್ಲೈನ್ ಬದಲಾವಣೆ ಮಾಡಲು ರಸ್ತೆ ಅಗೆಯಬೇಕಾಗಿರುವುದರಿಂದ, ಡಿಸೆಂಬರ್ 3 ರಿಂದ 2021 ಜನವರಿ 2 ರ ವರೆಗೆ ಒಂದು ತಿಂಗಳ ಕಾಲ ಸದರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿರುತ್ತದೆ. ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Read More
ಉಡುಪಿ, ಡಿ 02: ಜಿಲ್ಲೆಯಲ್ಲಿ ಡಿಸೆಂಬರ್ 22 ರಂದು ಮೊದಲ ಹಂತದ ಹಾಗೂ ಡಿಸೆಂಬರ್ 27 ರಂದು ಎರಡನೇ ಹಂತದ ಗ್ರಾಮ ಪಂಚಾಯತ್ಗಳ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಹಾಗೂ ಡಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದೆ. ಈ ಸಂದರ್ಭದಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಸಾರ್ವಜನಿಕ ಹಿತದೃಷ್ಟಿಯಿಂದ, ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಡಿಸೆಂಬರ್ 31 ರ ವರೆಗೆ ಯಾವುದೇ ಶಸ್ತ್ರಾಸ್ತ್ರಗಳು, ಆಯುಧಗಳು ಮತ್ತು ಮದ್ದುಗುಂಡುಗಳೊಂದಿಗೆ ಸಂಚರಿಸುವುದನ್ನು ಮತ್ತು ಅವುಗಳನ್ನು ಬಳಸುವುದನ್ನು […]Read More
ಉಡುಪಿ, ಡಿ 02: ಕೋವಿಡ್ ನಿಯಮ ಉಲ್ಲಂಘನೆ- ದಂಡ ವಿಧಿಸಲು ಅಧಿಕಾರಿಗಳ ನೇಮಕ ಮಾಡಲಾಗಿದೆ. ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೇ, ನಿಯಮಗಳನ್ನು ಪಾಲನೆ ಮಾಡದೇ ಇರುವ ಬಗ್ಗೆ ಸರ್ಕಾರದ ಅಧಿಸೂಚನೆಯಲ್ಲಿ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರೂ.200 ಮತ್ತು ಇತರೆ ಕಡೆಗಳಲ್ಲಿ ರೂ 100 ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಯಾವ ಅಧಿಕಾರಿ? ಪೋಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳು, ಗ್ರಾಮ […]Read More
ಉಡುಪಿ, ಡಿ 02: ಕರಾರಸಾ.ನಿಗಮದ ವತಿಯಿಂದ ಮಂಗಳೂರು-ಮೂಡಬಿದ್ರೆ-ಧರ್ಮಸ್ಥಳ-ಬೆಂಗಳೂರು ಮಾರ್ಗದಲ್ಲಿ ರಾತ್ರಿ ಸಾರಿಗೆಯಾಗಿ “ರಾಜಹಂಸ” ವಾಹನವನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಡಿಸೆಂಬರ್ 4 ರಿಂದ ಪ್ರಾರಂಭಿಸಲಾಗುತ್ತಿದೆ. ವಿಭಾಗದ ಮಂಗಳೂರು ಬಸ್ಸು ನಿಲ್ದಾಣದಿಂದ ಬೆಂಗಳೂರಿಗೆ ವಯಾ ಕುಲಶೇಖರ-ವಾಮಂಜೂರು-ಗುರುಪುರ-ಕೈಕಂಬ-ಗಂಜಿಮಠ-ಎಡಪದವು-ಮೀಜಾರು-ತೋಡಾರು ಬಡಗಬೆಟ್ಟು-ಮೂಡಬಿದ್ರೆ-ವೇಣೂರು-ಗುರುವಾಯನಕೆರೆ-ಬೆಳ್ತಂಗಡಿ-ಉಜಿರೆ-ಧರ್ಮಸ್ಥಳ-ಕೊಕ್ಕಡ-ಗುಂಡ್ಯ-ಸಕಲೇಶಪುರ-ಹಾಸನ-ಚೆನ್ನರಾಯಪಟ್ಟಣ ಮಾರ್ಗವಾಗಿ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಇದೇ ಮಾರ್ಗವಾಗಿ ಮಂಗಳೂರು ತಲುಪಲಿದೆ. ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು www.ksrtc.in ಹತ್ತಿರದ ರಿಸರ್ವೇಶನ್ ಕೌಂಟರ್ ಸಂಪರ್ಕಿಸುವಂತೆ ಮಂಗಳೂರು ಕರಾರಸಾಸಂ, ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. […]Read More
ಸಸ್ಯ ಜನ್ಯ ಕೀಟನಾಶಕಗಳು ಪರಿಸರ, ಪರತಂತ್ರ ಮತ್ತು ಪರಭಕ್ಷಕ ಜೀವಿಗಳ ಮೇಲೆ ಯಾವುದೇ ತರಹದ ತೊಂದರೆಯನ್ನುಂಟು ಮಾಡದೆ ಉತ್ತಮವಾಗಿ ಕೀಟಗಳನ್ನುRead More
ಕಾರವಾರ, ಡಿಸೆಂಬರ್ 2, 2020: ಅಂತರಾಷ್ಟ್ರೀಯ ದತ್ತು ಮಾಸಾಚರಣೆಯ ಅಂಗವಾಗಿ ದತ್ತು ವಿಷಯಗಳಿಗೆ ಸಂಭದಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆನ್ಲೈನ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ. ದತ್ತು ಪಡೆದ ಮಗುವಿನ ಸುರಕ್ಷಾ, ಆರೈಕೆ, ಮಕ್ಕಳನ್ನು ದತ್ತು ಪಡೆಯುವುದು ಪೋಷಕರಿಗೆ ಹಾಗೂ ಮಕ್ಕಳಿಗೆ ಹೇಗೆ ಸಂತೋಷದಾಯವಾಗುತ್ತದೆ ಹಾಗೂ ಪೋಷಕತ್ವ ವಿಷಯಗಳ ಕುರಿತು ಪೋಸ್ಟರ್, ಡಾನ್ಸ್ ಕೀರು ಚಿತ್ರ (ಶಾರ್ಟ ಫಿಲ್ಮ ಎರಡು ನಿಮಿಷಕ್ಕೆ ಮೀರಿರದ ) ಹಾಗೂ ಪದ್ಯ ರಚಿಸುವಂತಹ ಆನ್ಲೈನ್ […]Read More
ಕಾರವಾರ, ಡಿಸೆಂಬರ್ 30, 2020: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2020-21ನೇ ಸಾಲಿನ ಸಹಾಯಧನ ಯೋಜನೆಯಡಿ ಹಿಂದುಳಿದ ವರ್ಗಗಳಿಗೆ ಸೇರಿದ ವರ್ಗ-1, 2ಎ, 3ಎ ಮತ್ತು 3ಬಿ ವರ್ಗಗಕ್ಕೆ ಸೇರಿದ ಯುವಕರಿಗೆ ಬೈಕ್ ಕೊಂಡುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಇ-ವಾಣಿಜ್ಯ ಸಂಸ್ಥೆಗಳಾದ zomato, swiggy, uber, amazon ಮೊದಲಾದ ಸಂಸ್ಥೆಗಳಲ್ಲಿ ಉದ್ಯೋಗ ಮಾಡುವಂತ ಯುವಕರಿಗೆ ಬೈಕ್ ಕೊಂಡುಕೊಳ್ಳಲು ನಿಗಮದಿಂದ ರೂ. 25,000/-ಗಳ ಸಹಾಯಧನ ಹಾಗೂ ಉಳಿಕೆ ಸಾಲದ ಮೊತ್ತವನ್ನು ಬ್ಯಾಂಕುಗಳ ಮೂಲಕ ಪಡೆಯಬಹುದಾಗಿದೆ. ಸೌಲಭ್ಯ […]Read More