ಕು.ಗೋ.. ಭೂಮಿಗೆ ಲ್ಯಾಂಡ್ ಆದದ್ದು 1938ರ ಇದೇ ತಿಂಗಳು ಜೂನ್ ಆರರಂದು. ಪದ್ಮನಾಭ ಭಟ್ಟ ಹಾಗೂ ವಾಗ್ದೇವೀ ದಂಪತಿಗಳ ಕರುಳ ಬಳ್ಳಿಯಲ್ಲಿ ಜನಿಸಿದ ಏಕಾದಶ ಮಕ್ಕಳಲ್ಲಿ ಪಂಚಮರು ಇವರು. Read More
ವಿಮರ್ಶಾತ್ಮಕ ಲೇಖನ, ಸಂಕಲನ, ಅಂಕಣ ಬರಹ, ವ್ಯಕ್ತಿ ಚಿತ್ರಣ, ಕಾವ್ಯಾಧ್ಯಯನದ ಮೂಲಕ ಸಾಹಿತ್ಯ ಲೋಕದಲ್ಲಿ ಸಾಹಿತ್ಯಾಸಕ್ತರೆಲ್ಲರ ಗಮನ ಸೆಳೆದ ಚಾಣಕ್ಯ, 65ರ ನವ ತರುಣ ಅನುಭವೀ ಸಾಹಿತಿ ಶ್ರೀ ಎಸ್. ಆರ್. ವಿಜಯಶಂಕರ್. ತನ್ನ ಕಲ್ಪನೆಗಳಿಗೆ ಜೀವ ತುಂಬುತ್ತ ತನ್ನ ಮನದಾಳದ ಚಿಂತನೆಗಳನ್ನು ಮಂಥನ ಮಾಡುತ್ತ ನವನೀತವನ್ನು ಹೊರ ತೆಗೆದು ಸಾಹಿತ್ಯ ಪ್ರೇಮಿಗಳಿಗೆ ಅದರ ಸವಿಯುಣ್ಣಿಸುವ ಕಾಯಕದಲ್ಲಿ ಸೈ ಎನಿಸಿಕೊಂಡವರು ಇವರು.Read More
ಪ್ರಭಾಕರ್ ರವರ ಕ್ರಿಯಾಶೀಲತೆ ಹಾಗೂ ಪ್ರತಿಭೆ ಕೇವಲ ನಾಟಕ ರಂಗಕ್ಕೆ ಸೀಮಿತವಾಗಿರದೆ ಕ್ರಿಕೆಟ್, ಬ್ಯಾಡ್ಮಿಂಟನ್, ವಾಲಿಬಾಲ್ ಇತ್ಯಾದಿ ಕ್ರೀಡೆಗಳಲ್ಲಿ ಪರಿಣತನಾಗಿದ್ದು ಒಳ್ಳೆಯ ಕ್ರೀಡಾಪಟುವೆನಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಲಗೋರಿ, ಚಿನ್ನಿದಾಂಡು, ಸೊಪ್ಪಿನ ಆಟ ಹೀಗೆ ಹಲವು ಗ್ರಾಮೀಣ ಆಟಗಳನ್ನು ಹಳ್ಳಿ ಪ್ರದೇಶಗಳಲ್ಲಿ ಆಯೋಜಿಸುತ್ತಾ, ತೀರ್ಪು ಗಾರರಾಗಿಯೂ ಭಾಗವಹಿಸುತ್ತ ಗ್ರಾಮೀಣ ಕ್ರೀಡಾ ಜಗತ್ತಿಗೆ ಒಂದಷ್ಟು ಬೆಳಕು ಚೆಲ್ಲುತ್ತಿದ್ದಾರೆ.Read More
ರೂಪಕ, ಲಘು ಸಂಗೀತ ತರಬೇತಿ, ಲಲಿತ ಕಲಾ ಸಂಚಾಲಕಿಯಾಗಿ ಕಾರ್ಯನಿರ್ವಹಣೆ, ಸಂಪನ್ಮೂಲ ವ್ಯಕ್ತಿಯಾಗಿ, ತೀರ್ಪುಗಾರರಾಗಿ ಜೊತೆಗೆ ಆಕಾಶವಾಣಿ ನಾಟಕಗಳಲ್ಲಿ ಧ್ವನಿ ನೀಡುವ ಕಲಾವಿದೆಯಾಗಿ ತನ್ನ ವಿದ್ವತ್ತಿನ ಪರಿಚಯವನ್ನು ಪರಿಪರಿಯಾಗಿ ಪಸರಿಸಿದ್ದಾರೆ.Read More
ಡಾ. ಗಿರೀಶ್ ಕಾಸರವಳ್ಳಿ … ಕರುನಾಡು ಕಂಡ ಬಲು ಹೆಮ್ಮೆಯ ಕನ್ನಡಿಗ. ನಮ್ಮ ನೆಲ ಕಲೆ, ನುಡಿ ಹಾಗೂ ಸಂಸ್ಕೃತಿಯ ಸೊಗಡನ್ನು ಅರಿತು ಅದನ್ನು ಚಿತ್ರೀಕರಣದ ಮೂಲಕ ದಾಖಲೆಯಾಗಿಸಿಟ್ಟ ಶ್ರೇಷ್ಟ ಚಲನಚಿತ್ರ ನಿರ್ಧೇಶಕ. ಇವರು ಮುಟ್ಟಿದ್ದೆಲ್ಲವೂ ಬೆಳ್ಳಿ ಬಂಗಾರ.Read More
ದೀಪ ತನ್ನ ಗಾತ್ರವನ್ನು ಹೆಚ್ಚಿಸಿಕೊಂಡರೆ ಅದು ದೊಂದಿ ಬೆಳಕು ಎನಿಸಿಕೊಳ್ಳುತ್ತದೆ. ಅದು ತನ್ನ ಆಕಾರವನ್ನು ಕಳಕೊಂಡಾಗ ಅಥವಾ ವ್ಯಘ್ರವಾದಾಗ ಅಗ್ನಿ, ಚಿತೆ ಅಥವಾ ಬೆಂಕಿ ಎನ್ನುವ ಹೆಸರಿನಿಂದ ಕರೆಯಲ್ಪಡುತ್ತದೆ. ಆಗ ದಹಿಸುವುದೇ ಅದರ ಆಹಾರ ಮತ್ತು ವ್ಯವಹಾರ. ದೀಪ ಜಗತ್ತನ್ನು ಬೆಳಗಲೂಬಹುದು ಸುಡಲೂ ಬಹುದು. ಅತಿಯಾದರೆ ಅಮೃತವೂ ವಿಷ ಎಂಬಂತೆ ದೀಪವೂ ಹಾಗೆ ಸ್ತ್ರೀಯೂ ಹಾಗೆ. ಉದಾಹರಣೆಗೆ: ಮಹಾಭಾರತದ ಕೃಷ್ಣ ಸಹೋದರಿ ಹೋಮಾಗ್ನಿಯಲ್ಲಿ ಹುಟ್ಟಿ ಬಂದ ದ್ರೌಪದಿ.Read More
ನವರಾತ್ರಿ ಪ್ರಯುಕ್ತ ರಾಜೇಶ್ ಭಟ್ ಪಣಿಯಾಡಿ ಅವರ ವಿಶೇಷ ಲೇಖನಮಾಲೆ:Read More
ಶರದ್ ಋತು ಆಶ್ವೀಜ ಮಾಸ ಶುಕ್ಲ ಪಕ್ಷದ ಶರನ್ನವರಾತ್ರಿಯ ದ್ವಿತೀಯ ದಿನವಾದ ಇಂದು ಆರ್ಯ ಬ್ರಹ್ಮಚಾರಿಣೀ ರೂಪದಲ್ಲಿ ದುರ್ಗೆ ಪೂಜಿಸಲ್ಪಡುತ್ತಾಳೆ. Read More
ಮಾತೆ ದುರ್ಗೆ ಯ ಪರ್ವ ಕಾಲ ಇದು. ನವರಾತ್ರಿಯ ಮೊದಲ ದಿನವಾದ ಇಂದು ದುರ್ಗೆಯ ಪ್ರಥಮ ರೂಪ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ವೃಷಭ ವಾಹನಿಯಾದ ಆಕೆಯ ಒಂದು ಕೈಯಲ್ಲಿ ತ್ರಿಶೂಲ ಹಾಗೂ ಇನ್ನೊಂದು ಕೈಯಲ್ಲಿ ಕಮಲವನ್ನು ಹಿಡಿದಿದ್ದಾಳೆ. ದಕ್ಷ ಯಜ್ಞದ ಸಂದರ್ಭದಲ್ಲಿ ತಂದೆ ದಕ್ಷ ಪ್ರಜಾಪತಿಯಿಂದ ತನ್ನ ಪತಿಯ ನಿಂದನೆಯನ್ನು ಸಹಿಸಲಾಗದೆ ಯೋಗಾಗ್ನಿಯಲ್ಲಿ ಭಸ್ಮೀಭೂತಳಾಗಿ ಪರ್ವತರಾಜನ ಮಗಳಾಗಿ ಹುಟ್ಟಿದ ಪಾರ್ವತಿ ದೇವಿ ನವರಾತ್ರಿಯ ಪ್ರಥಮ ದಿನದಂದು ಶೈಲಪುತ್ರಿಯಾಗಿ ಆರಾಧಿಸಲ್ಪಡುತ್ತಾಳೆ. Read More
ಉಡುಪಿಯ ಸಮೀಪದ ಒಂದು ಪುಟ್ಟ ಊರು ಪಣಿಯಾಡಿ. ಇಲ್ಲಿ ವಿರಾಜಮಾನರಾಗಿರುವ ಶ್ರೀ ಶೇಷಾಸನ ಲಕ್ಷ್ಮೀ ಅನಂತ ಪದ್ಮನಾಭ ದೇವರ ದಿವ್ಯ ಸನ್ನಿಧಿಯಲ್ಲಿ ಪ್ರತೀ ವರ್ಷದಂತೆ ಊರಿನ ಯುವ ಬಳಗದ ಸದಸ್ಯರ ಸಹಕಾರದಿಂದ ಸುಂದರ ವರ್ಣ ವಿನಾಯಕನ ಹಬ್ಬಾಚರಣೆ ಬಹಳ ಸಂಭ್ರಮದಿಂದ ಸಾಗುತ್ತಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ, ಹೂವಿನ ಅಲಂಕಾರ, ಪೂಜಾ ವಿಧಿವಿಧಾನಗಳು ಭಕ್ತರ ಕಣ್ಮನ ಸೆಳೆಯುತ್ತಿದೆ. Read More