ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳು ಲಭ್ಯ

 ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳು ಲಭ್ಯ
Share this post

ಉಡುಪಿ, ಜುಲೈ 24, 2025: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಭತ್ತದ ಬಿತ್ತನೆ ಗುರಿ 35,000 ಹೆಕ್ಟೇರ್ ಇದ್ದು, ಈವರೆಗೆ 26,050 ಹೆಕ್ಟೇರ್ ಬಿತ್ತನೆಯಾಗಿರುತ್ತದೆ. ಜೂನ್ ಮಾಹೆಯ 2ನೇ ವಾರದಿಂದ ಬಿತ್ತನೆ ಪ್ರಾರಂಭಗೊAಡಿದ್ದು, ಪ್ರಸ್ತುತ ಭರದಿಂದ ಸಾಗುತ್ತಿದ್ದು, ಆಗಸ್ಟ್ 2ನೇ ವಾರದಲ್ಲಿ ಬಿತ್ತನೆ ಪೂರ್ಣಗೊಳ್ಳುವ ನಿರೀಕ್ಷೆಯಿರುತ್ತದೆ.

ಜಿಲ್ಲೆಯ ಮುಂಗಾರು ಹಂಗಾಮಿನ ರಸಗೊಬ್ಬರ ಬೇಡಿಕೆ 8,404 ಮೆ.ಟನ್ ಇದ್ದು, ಜುಲೈ ಅಂತ್ಯದವರೆಗಿನ ಬೇಡಿಕೆ 5,470 ಮೆ.ಟನ್ ಆಗಿರುತ್ತದೆ. ಈವರೆಗೆ 6,809 ಮೆ.ಟನ್ ಸರಬರಾಜಾಗಿ 2,568 ಮೆ.ಟನ್ ವಿತರಣೆಯಾಗಿ, 4,240 ಮೆ.ಟನ್ ದಾಸ್ತಾನು ಲಭ್ಯವಿರುತ್ತವೆ. ಯೂರಿಯಾ ರಸಗೊಬ್ಬರದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದ್ದು, ಜುಲೈ ಅಂತ್ಯದವರೆಗಿನ ಬೇಡಿಕೆ 1,510 ಮೆ.ಟನ್ ಇದ್ದು, 2035 ಮೆ.ಟನ್ ಪೂರೈಕೆಯಾಗಿ, 792 ಟನ್ ವಿತರಣೆಯಾಗಿ 1243 ಟನ್ ದಾಸ್ತಾನು ಇರುತ್ತದೆ.

ಯೂರಿಯಾ ರಸಗೊಬ್ಬರವನ್ನು ಭತ್ತದ ಕೃಷಿಯಲ್ಲಿ ಮೂಲ ಹಾಗೂ ಮೇಲುಗೊಬ್ಬರವಾಗಿ ಬಳಕೆ ಮಾಡುತ್ತಿದ್ದು, ಬೇಡಿಕೆಗೆ ಅನುಗುಣವಾಗಿ ಪೂರೈಕೆ ಇದ್ದು, ಯಾವುದೇ ಕೊರತೆ ಇರುವುದಿಲ್ಲ. ಭೌತಿಕ ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾವನ್ನು ಸಹ ಬಳಸಲು ಅವಕಾಶವಿದ್ದು, ರೈತರು ಪ್ರತಿ ಲೀಟರ್ ನೀರಿಗೆ 4 ಎಂ.ಎಲ್ ನಂತೆ 1 ಹೆಕ್ಟೇರ್‌ಗೆ 1 ಲೀಟರ್ ದ್ರವರೂಪದ ಯೂರಿಯಾ ಗೊಬ್ಬರವನ್ನು ಭತ್ತದ ಬೆಳೆಗೆ ಸಿಂಪಡಿಸಿ, ಉತ್ಪಾದನಾ ವೆಚ್ಚವನ್ನು ತಗ್ಗಿಸಬಹುದಾಗಿದೆ. 

 ರೈತರು ರಸಗೊಬ್ಬರಗಳ ಕೊರತೆ ಕಂಡುಬAದಲ್ಲಿ ಕೃಷಿ ಇಲಾಖೆಯ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಉಡುಪಿ ಮೊ.ನಂ: 8277932515, ಕುಂದಾಪುರ ಮೊ.ನಂ: 8277932503, ಕಾರ್ಕಳ ಮೊ.ನಂ:8277932505 ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಮೊ.ನಂ: 9071150501 ಅಥವಾ 8277932500 ಹಾಗೂ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ ಟೋಲ್ ಫ್ರೀ ಸಂಖ್ಯೆ 1077, 2574802 ಅನ್ನು ಸಂಪರ್ಕಿಸಿ ಮಾಹಿತಿ ನೀಡಿದಲ್ಲಿ ತುರ್ತು ಕ್ರಮವಹಿಸಿ ಸ್ಥಳೀಯವಾಗಿ ರಸಗೊಬ್ಬರಗಳ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!