ಅ.10 ರಂದು ತುಳುಲಿಪಿ ದಿನ ಘೋಷಣೆ
ಮಂಗಳೂರು ಅ 09: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಅಕ್ಟೋಬರ್ 10 ರಂದು ಬೆಳಿಗ್ಗೆ 10 ಗಂಟೆಗೆ ಅಕಾಡೆಮಿಯ ತುಳುಭವನದ ಸಿರಿಚಾವಡಿಯಲ್ಲಿ ತುಳುಲಿಪಿಗೆ ಮಹತ್ತರ ಕೊಡುಗೆ ನೀಡಿದ ಪುಣಿಂಚತ್ತಾಯ ಅವರ 84ನೇ ಜನ್ಮದಿನವನ್ನು ತುಳುಲಿಪಿ ದಿನವೆಂದು ಘೋಷಣೆ ಮಾಡಲಾಗುವುದು.
ಕರ್ನಾಟಕ ತುಳು ಸಾಹಿತ್ಯಅಕಾಡೆಮಿ, ಐಲೇಸ ಬೆಂಗಳೂರು ಮತ್ತು ತುಳು ವರ್ಲ್ಡ್ ಮಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
101 ಕವಿಗಳು ಬರೆದ ತುಳು ಭಾವಗೀತೆಗಳ ಪುಸ್ತಕವನ್ನು ಸಂಯೋಜಕರು ನಿಟ್ಟೆ ವಿಶ್ವವಿದ್ಯಾಲಯ ತುಳು ಅಧ್ಯಯನ ಕೇಂದ್ರ ಡಾ.ಸಾಯಿಗೀತ, ರವರು ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದ ಉದ್ಟಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದಕುಲಪತಿಡಾ. ಪಿ. ಎಸ್. ಎಡಪಡಿತ್ತಾಯ ವಹಿಸಲಿದ್ದು, ಅಧ್ಯಕ್ಷತೆಯನ್ನುಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷದಯಾನಂದ ಜಿ. ಕತ್ತಲ್‍ಸಾರ್ ಅವರು ವಹಿಸಲಿದ್ದಾರೆ.