ರೈತ ಸುರಕ್ಷಾ ಫಸಲ್ ಬಿಮಾ ಯೋಜನೆ ಸೌಲಭ್ಯ ಪಡೆಯಲು ಗ್ರಾಮ ಒನ್ ಕೇಂದ್ರಗಳ ಮೂಲಕ ಅರ್ಜಿ ಆಹ್ವಾನ
ಕಾರವಾರ, ಜೂ 22, 2022: ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ(ವಿಮಾ) ಯೋಜನೆಯ ಸೌಲಭ್ಯ ಪಡೆಯಲು ಗ್ರಾಮ ಒನ್ ಕೇಂದ್ರಗಳ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿಮಾ ಕಂತು ಪಾವತಿಸಲು ಭತ್ತ (ಮಳೆಯಾಶ್ರಿತ ಮತ್ತು ನೀರಾವರಿ) ಬೆಳೆಗಾರರು ಆ. 14 ರೊಳಗಾಗಿ, ಮುಸುಕಿನ ಜೋಳ (ಮಳೆಯಾಶ್ರಿತ) ಬೆಳೆಗಾರರು ಜುಲೈ. 31 ರೊಳಗಾಗಿ ಪಂಚಾಯತ್ ಮಟ್ಟದಲ್ಲಿ ಹಾಗೂ ಹತ್ತಿ(ಮಳೆಯಾಶ್ರಿತ) ಬೆಳೆಗಾರರು ಜುಲೈ. 31 ರೊಳಗಾಗಿ ಹೋಬಳಿ ಮಟ್ಟದಲ್ಲಿ ಬೆಳೆ ಸಾಲ ಪಡೆಯುವ ರೈತರು ವಿಮಾ ಕಂತಿನ ಹಣವನ್ನು ಸಾಲ ಪಡೆಯುವ ಹಣಕಾಸು ಸಂಸ್ಥೆಗಳಲ್ಲಿ ಕಟ್ಟಬೇಕು.
ಬೆಳೆ ಸಾಲ ಪಡೆಯದ ರೈತರು ಕೃಷಿ ವಿಮಾ ಯೋಜನೆಗೆ ನಿಗದಿಪಡಿಸಿದ ಹಣಕಾಸು ಸಂಸ್ಥೆ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಕಂತನ್ನು ತುಂಬಿ ಬೆಳೆ ವಿಮೆಗೊಳಪಡಿಸಬಹುದು .
ಹೆಚ್ಚಿನ ಮಾಹಿತಿಗಾಗಿ ವಿಮಾ ಕಂಪನಿ ಬಜಾಜ್ ಅಲೈನ್ಸ್ ಲಿಮಿಟೆಡ್ (Bajaj Allianz Ltd) ಸುನೀಲ್ ಅಯ್ಯನಗೌಡರ ದೂರವಾಣಿ ಸಂಖ್ಯೆ 8217053424 ಗೆ , ಬ್ಯಾಂಕುಗಳು, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಎಂದು ಕಾರವಾರ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.