ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಪರಿಹಾರ ಧನ: ಮೇ 27 ರಿಂದ ಅರ್ಜಿ ಸಲ್ಲಿಕೆ ಆರಂಭ
ಬೆಂಗಳೂರು, ಮೇ 26, 2021: ಕೋವಿಡ್-19ರ 2ನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತಿತರೆ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿದ್ದರಿಂದ ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ರೂ. 3000 ಪರಿಹಾರ ಧನ ನೀಡಲು ಮೇ 21 ರಂದು ಸರಕಾರ ಆದೇಶಿಸಿತ್ತು.
ಈ ಪರಿಹಾರ ಧನ ಪಡೆಯಲು ಅನ್ಲೈನ್ ಮೂಲಕ “ಸೇವಾ ಸಿಂಧು” ವೆಬ್ ಪೋರ್ಟಲ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ಮೇ 27 ರಂದು ಬೆಳಿಗ್ಗೆ 11 ಗಂಟೆಯಿಂದ ಪ್ರಾರಂಭಿಸಲಾಗುತ್ತಿದೆ.
ಅರ್ಹ ಫಲಾನುಭಾವಿಗಳು ಅರ್ಜಿಗಳನ್ನು “ಸೇವಾ ಸಿಂಧು” ಅಂತರ್ಜಾಲದಲ್ಲಿ ಸಲ್ಲಿಸಿ ಪರಿಹಾರ ಧನವನ್ನು ಪಡೆದುಕೊಳ್ಳಲು ಸಾರಿಗೆ ಆಯುಕ್ತರು ತಿಳಿಸಿದ್ದಾರೆ.
ಅರ್ಹ ಫಲಾನುಭಾವಿಗಳಿಗೆ ಪರಿಹಾರ ಧನವನ್ನು ಅವರ ಖಾತೆಗೆ ನೇರವಾಗಿ ಡಿ.ಬಿ.ಟಿ. ಮೂಲಕ ವರ್ಗಾಹಿಸಲಾಗುವುದು.
ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರುಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಆಯುಕ್ತರು ತಿಳಿಸಿದ್ದಾರೆ.