2 ನೇ ಡೋಸ್ ಬಾಕಿ ಇರುವ ಲಸಿಕಾ ಫಲಾನುಭವಿಗಳಿಗೆ ಕೋವಿಶೀಲ್ಡ್ ಲಸಿಕೆ ಲಭ್ಯ
ಮಂಗಳೂರು, ಮೇ 07, 2021: ದಕ್ಷಿಣ ಕನ್ನಡ ಜಿಲ್ಲೆಯ ಲಸಿಕಾ ಶಿಬಿರಕ್ಕೆ ಸಂಬಂಧಿಸಿದಂತೆ, ಮೇ. 08 ರಂದು ಮಂಗಳೂರು ತಾಲೂಕಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 350 ಡೋಸ್, ಸ.ಆ.ಕೇಂದ್ರ ಮೂಡಬಿದ್ರೆ 200 ಡೋಸ್, ಸ.ಆ.ಕೇಂದ್ರ ಮುಲ್ಕಿ 200 ಡೋಸ್. ನ.ಸ.ಆ.ಕೇಂದ್ರ ಉಳ್ಳಾಲ 180 ಡೋಸ್, ನ.ಆ.ಕೇಂದ್ರ ಸುರತ್ಕಲ್ 200 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು. ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 4 ಗಂಟೆಯವರೆಗೆ ಲಸಿಕಾ ಶಿಬಿರ ನಡೆಯಲಿದೆ.
ಈ ಶಿಬಿರದಲ್ಲಿ 2ನೇ ಡೋಸ್ ಬಾಕಿ ಇರುವ ಲಸಿಕಾ ಫಲಾನುಭವಿಗಳಿಗೆ ಮಾತ್ರ ಅವಕಾಶವಿದ್ದು, ಪ್ರಥಮ ಡೋಸ್ ಪಡೆಯಲು ಯಾರಿಗೂ ಅವಕಾಶವಿರುವುದಿಲ್ಲ.
ಉಳಿದಂತೆ ತಾಲೂಕು ಆಸ್ಪತ್ರೆ ಬಂಟ್ವಾಳ ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯ ತಾಲೂಕುಗಳಲ್ಲೂ ಲಸಿಕಾ ಶಿಬಿರ ನಡೆಯಲಿದ್ದು ಸಂಬಂಧಪಟ್ಟ ತಾಲೂಕು ಆರೋಗ್ಯಾಧಿಕಾರಿಗಳು/ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಮೂಲಕ ಕೋವಿಡ್ ಲಸಿಕೆಯ ಲಭ್ಯತೆಯನ್ನು ಖಾತ್ರಿಪಡಿಸಿ 2ನೇ ಡೋಸ್ ಲಸಿಕೆಯನ್ನು ಮಾತ್ರ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.