ಏಪ್ರಿಲ್ 28ರಂದು ಹೊನ್ನಾವರದ ಹಲವು ಕಡೆ ಪವರ್ ಕಟ್

 ಏಪ್ರಿಲ್ 28ರಂದು ಹೊನ್ನಾವರದ ಹಲವು ಕಡೆ ಪವರ್ ಕಟ್
Share this post

ಹೊನ್ನಾವರ ಏಪ್ರಿಲ್ 27, 2021: ಹೊನ್ನಾವರದ 11 ಕೆವಿ ಕರ್ಕಿ ಫೀಡರ್, ಕಾಸರಕೋಡ 33 ಕೆವಿ ಹಾಗೂ ಗೇರುಸೊಪ್ಪಾ 33ಕೆವಿ ವ್ಯಾಪ್ತಿಯ ಮಾರ್ಗಗಳ ನಿರ್ವಹಣಾ ಕಾರ್ಯಗಳ ನಿಮಿತ್ತ ಈ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಯ ಪ್ರದೇಶಗಳಲ್ಲಿ ಏಪ್ರಿಲ್ 28ರಂದು ಬುಧವಾರ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ವಿತರಣಾ ಕೇಂದ್ರ ಹಾಗೂ ಮಾರ್ಗಗಳ ನಿರ್ವಹಣಾ ಕಾರ್ಯದ ನಿಮಿತ್ತ ಗೇರುಸೊಪ್ಪಾ 33ಕೆವಿ ವ್ಯಾಪ್ತಿಯ ರೈಟ್, ಲೆಫ್ಟ್, ಕಾಲೋನಿ, ಉಪ್ಪೋಣಿ, ಮಾಗೋಡ ಹಾಗೂ ಕಾಸರಕೋಡ 33 ಕೆವಿ ವ್ಯಾಪ್ತಿಯ ಟೊಂಕಾ, ಕೆಳಗಿನೂರು, ಬಳಕೂರು, ಇಡಗುಂಜಿ ಮತ್ತು ದೇವರಗದ್ದೆ ಫೀಡರುಗಳ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂನ ಹೊನ್ನಾವರ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!