ಹೆದ್ದಾರಿ ದರೋಡೆಗೆ ಸಂಚು ರೂಪಿಸುತ್ತಿದ್ದ 8 ಮಂದಿ ಆರೋಪಿಗಳ ಸೆರೆ
ಮಂಗಳೂರು, ಏಪ್ರಿಲ್ 12, 2021 : ಮಂಗಳೂರು ನಗರದಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆದ್ದಾರಿ ದರೋಡೆ ಮಾಡಲು
ಸ್ಥಳೀಯವಾಗಿ ಸಿದ್ದತೆ ಮಾಡಿಕೊಂಡ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಏಪ್ರಿಲ್ 12 ರಂದು ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಕೊರೊನಾ ನೈಟ್ ಕರ್ಫ್ಯೂ ಬಗ್ಗೆ ರಾತ್ರಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯದಲ್ಲಿ ಉಳಾಯಿಬೆಟ್ಟು ಗ್ರಾಮದ ಪರಾರಿ ಎಂಬಲ್ಲಿ ಇನ್ನೋವಾ ಕಾರೊಂದನ್ನು ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಿ ಮಾರಕಾಯುಧಗಳೊಂದಿಗೆ ಗುಂಪಾಗಿ ನಿಂತುಕೊಂಡು ರಸ್ತೆಯಲ್ಲಿ ಹಾದು ಹೋಗುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಲು ಪ್ರಯತ್ನಿಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು.
- ತೌಸಿರ್ ಯಾನೆ ಪತ್ತೋಂಜಿ ತೌಸಿರ್, ಪ್ರಾಯ (28), ಮಾರ್ನಮಿಕಟ್ಟೆ, ಮಂಗಳೂರು.
- ಮೊಹಮ್ಮದ್ ಅರಾಫತ್ ಯಾನೆ ಅರಫಾ (29), ಆರ್ಕುಳ ಕಾಟೇಜ್, ಫರಂಗಿಪೇಟೆ, ಬಂಟ್ವಾಳ
- ತಸ್ಲಿಂ (27), ಅಮ್ಮೆಮಾರ್, ಫರಂಗಿಪೇಟೆ, ಬಂಟ್ವಾಳ ತಾಲೂಕು.
- ನಾಸೀರ್ ಹುಸೈನ್ (29), ತುಂಬೆ ಹೌಸ್, ಸರಕಾರಿ ಶಾಲೆ ಹತ್ತಿರ, ಬಂಟ್ವಾಳ.
- ಮೊಹಮ್ಮದ್ ರಫೀಕ್ (37), ಪುದು ಅಂಚೆ & ಗ್ರಾಮ, ಬಂಟ್ವಾಳ
- ಮೊಹಮ್ಮದ್ ಸಫ್ವಾನ್ ಯಾನೆ ಸಫ್ವಾನ್ (25), ಪುದು ಅಂಚೆ ಮತ್ತು ಗ್ರಾಮ,
ಬಂಟ್ವಾಳ. - ಮೊಹಮ್ಮದ್ ಜೈನುದ್ದೀನ್ (24), ಅಮ್ಮೆಮಾರ್, ಪುದು ಅಂಚೆ, ಬಂಟ್ವಾಳ
- ಉನೈಝ್ ಯಾನೆ ಮೊಹಮ್ಮದ್ ಉನೈಝ್, ಪ್ರಾಯ (26), ಪುದು ಅಂಚೆ, ಬಂಟ್ವಾಳ.
ಆರೋಪಿಗಳ ವಶದಿಂದ ತಲವಾರು-2, ಚೂರಿ-2, ಡ್ರಾಗನ್ ಚೂರಿ-1, ಮೊಬೈಲ್ -8, ಮಂಕಿ ಕ್ಯಾಪ್-5, ಮೆಣಸಿನ ಹುಡಿ ಪ್ಯಾಕೆಟ್-3, ಕೆಎ-09-ಎನ್-7886 ನೇ ಇನ್ನೋವಾ ಕಾರು ಹೀಗೆ ಒಟ್ಟು 10,89,490/-ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳÁಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಡಿಸಿಪಿ ಶ್ರೀ ಹರಿರಾಂ ಶಂಕರ್ ಐ.ಪಿ.ಎಸ್ ಹಾಗೂ ಅಪರಾಧ & ಸಂಚಾರ ವಿಭಾಗದ ಡಿಸಿಪಿ ಶ್ರೀ ವಿನಯ್ ಎ ಗಾಂವ್ಕರ್ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಘಟಕದ ಇನ್ಸ್‍ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್‍ಐ ರವರಾದ ರಾಜೇಂದ್ರ ಬಿ, ಪ್ರದೀಪ್ ಟಿ ಆರ್ ಮತ್ತು ಸಿಸಿಬಿ ಸಿಬ್ಬಂದಿಗಳು ಈ ಕಾರ್ಯಾಚರಣೆಯನ್ನು ಭಾಗವಹಿಸಿದ್ದರು.
- ಈ ಗ್ಯಾಂಗ್‍ನ್ನು ತೌಸಿರ್ @ ತೌಸಿ @ ಪತ್ತೊಂಜಿ ಮತ್ತು ವಿದೇಶದಲ್ಲಿರುವ ರೌಡಿ ಬಾತಿಶ್ @ ಬಾಸಿತ್ ಎಂಬವರ ಜೊತೆಯಾಗಿ ನಡೆಸಿಕೊಂಡಿರುವುದಾಗಿದೆ.
- ಇದಕ್ಕಾಗಿ ಟಿಬಿ ಗ್ರೂಪ್ ( Tausseer and Bathish) ಎಂಬ ಗ್ರೂಪ್‍ನ್ನು ತೌಸಿರ್‍ನು ಪ್ರಾರಂಭಿಸಿದ್ದು, ಇದರಲ್ಲಿ ತನ್ನ ಸಹಚರರನ್ನು ಗ್ರೂಪ್‍ಗೆ ಸೇರಿಸಿಕೊಂಡು ಹಣಕಾಸಿನ ಸೆಟ್ಲ್‍ಮೆಂಟ್ ವ್ಯವಹಾರವನ್ನು ಮಾಡಿಕೊಳ್ಳುತ್ತಿದ್ದರು.
- ವಿದೇಶದಲ್ಲಿರುವ ಬಾತಿಶ್ @ ಬಾಶಿತ್ ಎಂಬಾತನ ಸೂಚನೆಯಂತೆ ಮಂಗಳೂರಿನ ಹಲವಾರು ಮುಸ್ಲಿಂ ವ್ಯಕ್ತಿಗಳ ಹಣಕಾಸಿನ ವ್ಯವಹಾರದ ಸೆಟ್ಲ್ ಮೆಂಟ್‍ನ್ನು ತೌಸಿರ್ @ ತೌಸಿ ಮತ್ತು ಇತರರು ಮಾಡುತ್ತಿರುವುದಾಗಿದೆ.
- ವಿದೇಶದ ಸೌದಿ ಅರೇಬಿಯಾ ಎಂಬಲ್ಲಿ ತಲೆಮರೆಸಿಕೊಂಡಿರುವ ಬಾತಿಶ್ @ ಬಾಶಿತ್ ಎಂಬಾತನ ಸೂಚನೆಯಂತೆ ತೌಸಿರ್ ಮತ್ತು ಇತರರು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುಳ್ಯದ ಅನಾಸ್ ಎಂಬವರ ಮಾಹಿತಿಯನ್ನು ಸಂಗ್ರಹಿಸಿ ಆತನಿಂದ ಹಣವನ್ನು ವಸೂಲಿ ಮಾಡಲು ಸ್ಕೆಚ್ ಹಾಕಿರುತ್ತಾರೆ.
- ಬಿ ಸಿ ರೋಡ್ ಮೆಲ್ಕಾರ್ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ವ್ಯವಹಾರ ಮಾಡುತ್ತಿರುವ ಝೀಯದ್ ಎಂಬಾತನಿಗೆ ತೌಸಿರ್ ಗ್ಯಾಂಗ್‍ನ ಸಫ್ವಾನ್ ಎಂಬಾತನು 12 ಲಕ್ಷ ಹಣವನ್ನು ವ್ಯವಹಾರಕ್ಕಾಗಿ ನೀಡಿದ್ದು, ಈ ಹಣವನ್ನು ಝೀಯದ್‍ನು ವಾಪಾಸು ನೀಡದೇ ಇದ್ದುದರಿಂದ ವಿದೇಶದಲ್ಲಿರುವ ಬಾಶಿತ್ ಯಾನೆ ಬಾತಿಶ್ ಎಂಬಾತನ ಸೂಚನೆಯಂತೆ ಝೀಯದ್‍ನನ್ನು ಬೆಂಗಳೂರಿನಿಂದ ಕಿಡ್ನಾಫ್ ಮಾಡಿ ಕೊÉ ಮಾಡಲು ಈ ಗ್ಯಾಂಗ್‍ನವರು ಸಂಚು ರೂಪಿಸಿ ಬೆಂಗಳೂರಿಗೆ ಹೋಗಿದ್ದು, ಅಲ್ಲಿ ಇವರಿಗೆ ಝೀಯದ್‍ನು ಸಿಗದೇ ಇದ್ದುದರಿಂದ ವಾಪಾಸು ಮಂಗಳೂರಿಗೆ ಬಂದು ಹೆದ್ದಾರಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು.
- 2020 ನೇ ಇಸವಿಯಲ್ಲಿ ಈ ಆರೋಪಿತರ ಪೈಕಿ ತೌಸಿರ್ ಯಾನೆ ತೌಸಿ ಮತ್ತು ತಸ್ಲಿಂ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ದರೋಡೆಗೆ ವಿಫಲ ಯತ್ನ ನಡೆಸಿದ್ದು, ಆ ಮನೆಯಲ್ಲಿದ್ದ ಸಾಕು ನಾಯಿಯನ್ನು ತಲವಾರಿನಿಂದ ಕಡಿದು ಕೊಂದಿದ್ದರು.
- ತೌಸಿರ್ @ ತೌಸಿ ಎಂಬಾತನ ವಿರುದ್ಧ ಈಗಾಗಲೇ ಕೊಲೆ ಯತ್ನ, ಹಲ್ಲೆ ದರೋಡೆ, ಸಂಬಂಧಿಸಿದಂತೆ 6 ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುತ್ತದೆ. ಧರ್ಮಸ್ಥಳದಲ್ಲಿ ದಾಖಲಾದ ದರೋಡೆಗೆ ಯತ್ನ ಪ್ರಕರಣದಲ್ಲಿ ದಸ್ತಗಿರಿಯಾಗದೇ ತಲೆಮರೆಸಿಕೊಂಡಿದ್ದನು.
- ಆರೋಪಿಗಳ ಪೈಕಿ ತಸ್ಲಿಂ ಎಂಬಾತನು 2017 ರಲ್ಲಿ ಫರಂಗಿಪೇಟೆಯಲ್ಲಿ ನಡೆದ ಝೀಯಾ @ ರಿಯಾಸ್ ಮತ್ತು ಫಯಾಸ್ ಎಂಬವರ ಜೋಡಿ ಕೊÉ ಪ್ರಕರಣದಲ್ಲಿ ಭಾಗಿಯಾಗಿದ್ದನು. ಅಲ್ಲದೇ
- ಈತನು ಸುಮಾರು 12 ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ. ಧರ್ಮಸ್ಥಳದಲ್ಲಿ ದಾಖಲಾದ ದರೋಡೆಗೆ ಯತ್ನ ಪ್ರಕರಣದಲ್ಲಿ ಈತನು ದಸ್ತಗಿರಿಯಾಗದೇ ತಲೆಮರೆಸಿಕೊಂಡಿದ್ದನು.