ರೈತರಿಗೆ ಕೃಷಿಯ ನಿರ್ವಹಣೆಯ ಮಾಹಿತಿ
ಮಂಗಳೂರು, ಮಾರ್ಚ್ 10, 2021: ಕೃಷಿ ಇಲಾಖೆಯು ಜಿಲ್ಲೆಯ ಪ್ರತಿಯೊಂದು ರೈತರಿಗೆ ಸೂಕ್ತ ಬೆಳೆಯನ್ನು ಬೆಳೆಯಲು ಪ್ರೋತ್ಸಾಹಿಸುತ್ತದೆ.
ಇದರೊಂದಿಗೆ ಮಣ್ಣಿನಲ್ಲಿ ಲಭ್ಯವಿರುವ ಪೋಷಾಕಾಂಶಗಳ ಬಗ್ಗೆ ಮಾಹಿತಿ ನೀಡಲು ಹಾಗೂ ಸಕಾಲದಲ್ಲಿ ಬೆಳೆಯ ಎಲ್ಲಾ ಹಂತಗಳಲ್ಲಿ ಸರ್ವೇಕ್ಷಣೆಯನ್ನು ಕೈಗೊಂಡು ಕಂಡುಬಂದಿರುವ/ ಕಂಡುಬರಬಹುದಾದ ಕೀಟ, ರೋಗ ಮತ್ತು ಕಳೆಗಳ ನಿರ್ವಹಣಾ ಮಾರ್ಗೋಪಾಯಗಳನ್ನು ರೈತರಿಗೆ ಟೋಲ್ ಫ್ರಿ ಸಹಾಯವಾಣಿ ಸಂಖ್ಯೆ:155313 ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ,
ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ವಾಹನದ ಮೂಲಕ ಟೋಲ್ ಫ್ರಿ ಸಹಾಯವಾಣಿ ಸಂಖ್ಯೆ:155313 ಗೆ ಸಂಪರ್ಕಿಸಬಹುದು ಹಾಗೂ ಸ್ವೀಕರಿಸಿದ ಕರೆಗಳಿಗೆ ಕ್ಷೇತ್ರ ಭೇಟಿಯನ್ನು ಮಾಡಿ ರೈತರಿಗೆ ಪರಿಹಾರವನ್ನು ನೀಡಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.