ಡಾ. ವಿಘ್ನರಾಜ ಅವರಿಗೆ ತುಳುಸಾಹಿತ್ಯ ಅಕಾಡೆಮಿ ಪ್ರಶಸ್ತಿ

 ಡಾ. ವಿಘ್ನರಾಜ ಅವರಿಗೆ  ತುಳುಸಾಹಿತ್ಯ ಅಕಾಡೆಮಿ ಪ್ರಶಸ್ತಿ
Share this post

ಬೆಳ್ತಂಗಡಿ, ಫೆ 27, 2021: ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ವಿಘ್ನರಾಜ ಎಸ್.ಆರ್. ತುಳು ಸಾಹಿತ್ಯ ಅಕಾಡೆಮಿಯ 2019ನೆ ಸಾಲಿನ ತುಳು ಸಾಹಿತ್ಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಡಾ.ಎಸ್.ಆರ್.ವಿಘ್ನರಾಜ

ಡಾ.ಎಸ್.ಆರ್.ವಿಘ್ನರಾಜ ಅವರು ಹಸ್ತಪ್ರತಿ ಶಾಸ್ತ್ರದಲ್ಲಿ ವಿಶೇಷ ಪರಿಣತರು. ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದಲ್ಲಿ ಕಾರ್ಯನಿರ್ವಹಿಸುತ್ತಿರುವವರು.

ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಹಸ್ತಪ್ರತಿಶಾಸ್ತ್ರ ಡಿಪ್ಲೋಮ ಪದವಿ ಪಡೆದವರು. ದಕ್ಷಿಣ ಭಾರತದ ಲಿಪಿಗಳಾದ ಕನ್ನಡ, ತುಳು, ಮಲೆಯಾಳ, ತೆಲುಗು, ನಂದಿನಾಗರಿ ಮತ್ತು ಮರಾಠಿ ಲಿಪಿಗಳಲ್ಲಿರುವ 12,000 ಕ್ಕೂ ಅಧಿಕ ವೈದಿಕ, ಜೈನ, ವೀರಶೈವ ಮೊದಲಾದ ಮತಧರ್ಮಗಳಿಗೆ ಸಂಬಂಧಪಟ್ಟ ಗ್ರಂಥಗಳನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದವರು.

ತುಳು ಲಿಪಿಯಲ್ಲಿರುವ 3,500ಕ್ಕೂ ಹೆಚ್ಚು ಗ್ರಂಥಗಳನ್ನು ಅಧ್ಯಯನ ನಡೆಸಿರುವ ವಿಘ್ನರಾಜರು ಮೊಟ್ಟಮೊದಲ ಬಾರಿಗೆ ತುಳು ಗ್ರಂಥಗಳಲ್ಲಿರುವ ಅಂಕೆ ಸಂಖ್ಯೆಗಳನ್ನು ಅದರ ಸ್ವರೂಪವನ್ನು ಜನತೆಗೆ ಪರಿಚಯಿಸಿರುತ್ತಾರೆ.

Subscribe to our newsletter!

Other related posts

error: Content is protected !!