ಪಣಿಯಾಡಿ ದೇವಸ್ಥಾನ ಜೀರ್ಣೋದ್ಧಾರ: ಮನವಿ ಪತ್ರ ಬಿಡುಗಡೆಗೊಳಿಸಿದ ಶಾಸಕ ರಘುಪತಿ ಭಟ್
ಉಡುಪಿ, ಜನವರಿ 11, 2021: ಪಣಿಯಾಡಿ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ ಆದಿತ್ಯವಾರದಂದು ನಡೆಯಿತು. ಶಾಸಕರಾದ ಕೆ ರಘುಪತಿ ಭಟ್ ಭಾಗವಹಿಸಿ ಶ್ರೀದೇವಳದ ಜೀರ್ಣೋದ್ಧಾರದ ಮನವಿ ಪತ್ರ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಸ್ಥಳೀಯ ನಗರಸಭಾ ಸದಸ್ಯರಾದ ಗಿರೀಶ್ ಅಂಚನ್, ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ, ಕಾರ್ಯಾಧ್ಯಕ್ಷರಾದ ಮಲ್ಪೆ ವಿಶ್ವನಾಥ್ ಭಟ್, ಎಸ್. ನಾರಾಯಣ್ ಮಡಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಮೋಹನ್ ಉಪಾಧ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ದಿನಕರ್ ಪೂಜಾರಿ, ಜೀರ್ಣೋದ್ಧಾರ ಸಮಿತಿ ಮುಖ್ಯ ಕಾರ್ಯದರ್ಶಿ ಶ್ರೀಶ ನಾಯಕ್, ಸಮಿತಿಯ ಉಪಾಧ್ಯಕ್ಷರಾದ ಎಲ್ ಏನ್ ಹೆಗ್ಡೆ, ಚಂದ್ರಶೇಖರ್ ಶೆಟ್ಟಿ, ದಿನಕರ್ ಪೂಜಾರಿ, ಡಾ| ಕೃಷ್ಣ ಮೂರ್ತಿ ಹಾಗೂ ಪ್ರಮುಖರು ಸ್ಥಳೀಯರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ 17 – 18 ರಂದು ಶ್ರೀ ದೇವರನ್ನು ಬಾಲಾಲಯಕ್ಕೆ ಸ್ಥಳಾಂತರಿಸುವ ಭಿತ್ತಿಪತ್ರವನ್ನೂ ಬಿಡುಗಡೆಗೊಳಿಸಲಾಯಿತು. ಜೀರ್ಣೋದ್ಧಾರ ಪ್ರಕ್ರಿಯೆಗೆ ಸರ್ವರ ಸಂಪೂರ್ಣ ಬೆಂಬಲವನ್ನು ಯಾಚಿಸುತ್ತ ಕಾರ್ಯಕ್ರಮದ ಕೊನೆಯಲ್ಲಿ
ರಾಘವೇಂದ್ರ ಭಟ್ ವಂದನೆ ಸಲ್ಲಿಸಿದರು.
ಪಣಿಯಾಡಿ ದೇವಸ್ಥಾನವು ಶ್ರೀ ಪುತ್ತಿಗೆ ಮಠದ ಆಡಳಿತಕ್ಕೆ ಒಳಪಟ್ಟಿದೆ.