ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ
Share this post

ಕಾರವಾರ, ಸೆ.21, 2025: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಜಿಲ್ಲೆಯ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಛಾಯಾಗ್ರಹಣ, ಭಾಷಣ ಸ್ಪರ್ಧೆಯನ್ನು ತಾಲ್ಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುವುದು.

ಚಿತ್ರಕಲೆ:
ಎಲ್ಲಾ ಶಾಲೆಗಳ 6ನೇ ತರಗತಿಯಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ 9ನೇ ತರಗತಿಯಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ವಿಭಾಗಗಳಲ್ಲಿ “ನನ್ನ ಮತ ನನ್ನ ಹಕ್ಕು” ಎಂಬ ಶೀರ್ಷಿಕೆಯ ಕುರಿತು ಚಿತ್ರಕಲೆ ಸ್ಪರ್ಧೆಯನ್ನು ಅಕ್ಟೋಬರ್ 31ರೊಳಗೆ ತಾಲ್ಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುತ್ತದೆ.

ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಆಡಳಿತದಿಂದ ನೇಮಿಸಲ್ಪಟ್ಟ ತೀರ್ಪುಗಾರರಿಂದ (ಜ್ಯೂರಿ) ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗಳಿಸುವ ಸ್ಪರ್ಧಾರ್ಥಿಗಳಿಗೆ ಕ್ರಮವಾಗಿ ರೂ.15,000, ರೂ.10,000 ಮತ್ತು ರೂ.5,000 ನಗದು ಬಹುಮಾನವನ್ನು ನವೆಂಬರ್ 14 ಮಕ್ಕಳ ದಿನಾಚರಣೆಯಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ವಿತರಿಸಲಾಗುವುದು.

ತಾಲ್ಲೂಕು ಮಟ್ಟದ ಮೂವರು ವಿಜೇತರು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡು, ಅಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದವರಿಗೆ ಕ್ರಮವಾಗಿ ರೂ.25,000, ರೂ.15,000 ಮತ್ತು ರೂ.10,000 ಬಹುಮಾನ ನೀಡಲಾಗುವುದು. ಜಿಲ್ಲಾ ಮಟ್ಟದಿಂದ ಆಯ್ಕೆಯಾಗುವ ಮೂರು ಚಿತ್ರಕಲಾ ಪ್ರತಿಗಳನ್ನು ರಾಜ್ಯ ಮಟ್ಟಕ್ಕೆ ಕಳುಹಿಸಲಾಗುವುದು.

ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಮೂವರು ಸ್ಪರ್ಧಾರ್ಥಿಗಳಿಗೆ ಕ್ರಮವಾಗಿ ರೂ.1,00,000, ರೂ.50,000 ಮತ್ತು ರೂ.25,000 ನಗದು ಬಹುಮಾನವನ್ನು ನವೆಂಬರ್ 26 ಸಂವಿಧಾನ ದಿನಾಚರಣೆಯಂದು ವಿತರಿಸಲಾಗುವುದು.

ಛಾಯಾಗ್ರಹಣ:
ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ “ನನ್ನ ಮತ ನನ್ನ ಹಕ್ಕು” ಎಂಬ ಶೀರ್ಷಿಕೆಯ ಕುರಿತು ಛಾಯಾಗ್ರಹಣ ಸ್ಪರ್ಧೆ ನಡೆಸಲಾಗುತ್ತದೆ.

ಸ್ಪರ್ಧೆಗೆ ಅಕ್ಟೋಬರ್ 31ರೊಳಗೆ https://www.democracydaykarnataka.in ವೆಬ್‌ಸೈಟ್‌ನಲ್ಲಿ ಚಿತ್ರಗಳನ್ನು ಅಪ್‌ಲೋಡ್ ಮಾಡಬೇಕು. ತಾಲ್ಲೂಕು ಮಟ್ಟದಲ್ಲಿ ವಿಜೇತರಿಗೆ ರೂ.15,000, ರೂ.10,000, ರೂ.5,000 ನಗದು ಬಹುಮಾನ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಜೇತರಿಗೆ ರೂ.25,000, ರೂ.15,000 ಮತ್ತು ರೂ.10,000 ನಗದು ಬಹುಮಾನವನ್ನು ನವೆಂಬರ್ 14 ಮಕ್ಕಳ ದಿನಾಚರಣೆಯಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ವಿತರಿಸಲಾಗುವುದು.

ಜಿಲ್ಲಾ ಮಟ್ಟದಿಂದ ಆಯ್ಕೆಗೊಂಡ ಮೂವರು ವಿಜೇತರ ಛಾಯಾಚಿತ್ರಗಳನ್ನು ರಾಜ್ಯ ಮಟ್ಟಕ್ಕೆ ಕಳುಹಿಸಲಾಗುವುದು. ರಾಜ್ಯ ಮಟ್ಟದಲ್ಲಿ ಆಯ್ಕೆಯಾದವರಿಗೆ ಕ್ರಮವಾಗಿ ರೂ.1,00,000, ರೂ.50,000 ಮತ್ತು ರೂ.25,000 ನಗದು ಬಹುಮಾನವನ್ನು ನವೆಂಬರ್ 26 ಸಂವಿಧಾನ ದಿನಾಚರಣೆಯಂದು ವಿತರಿಸಲಾಗುವುದು.

ಭಾಷಣ ಸ್ಪರ್ಧೆ:
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ಅಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಆಯೋಜಿಸಲಾಗುವುದು. ವಿಷಯಗಳು:

  1. ನನ್ನ ಮತ ನನ್ನ ಹಕ್ಕು
  2. ಸಂವಿಧಾನದ ಪೀಠಿಕೆಯ ಮಹತ್ವ
  3. ಮಹಾತ್ಮ ಗಾಂಧೀಜಿಯವರ ದೃಷ್ಟಿಕೋನದಲ್ಲಿ ಗಾಂಧಿ ಭಾರತ

ಅಕ್ಟೋಬರ್ 31ರೊಳಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳು ಮುಕ್ತಾಯಗೊಳ್ಳಲಿವೆ. ತಾಲ್ಲೂಕು ಮಟ್ಟದಲ್ಲಿ ವಿಜೇತರಿಗೆ ಕ್ರಮವಾಗಿ ರೂ.15,000, ರೂ.10,000 ಮತ್ತು ರೂ.5,000 ನಗದು ಬಹುಮಾನ ನೀಡಲಾಗುವುದು. ಜಿಲ್ಲಾ ಮಟ್ಟದ ವಿಜೇತರಿಗೆ ಕ್ರಮವಾಗಿ ರೂ.25,000, ರೂ.15,000 ಮತ್ತು ರೂ.10,000 ನಗದು ಬಹುಮಾನ ನೀಡಲಾಗುವುದು.

ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಮೂವರು ವಿಜೇತರಿಗೆ ಕ್ರಮವಾಗಿ ರೂ.1,00,000, ರೂ.50,000 ಮತ್ತು ರೂ.25,000 ನಗದು ಬಹುಮಾನವನ್ನು ನವೆಂಬರ್ 26 ಸಂವಿಧಾನ ದಿನಾಚರಣೆಯಂದು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!