ವೆನ್‍ಲಾಕ್ ತುರ್ತು ಚಿಕಿತ್ಸಾ ವಿಭಾಗ ಸ್ಥಳಾಂತರ

 ವೆನ್‍ಲಾಕ್ ತುರ್ತು ಚಿಕಿತ್ಸಾ ವಿಭಾಗ ಸ್ಥಳಾಂತರ
Share this post

ಮಂಗಳೂರು,ಸೆ.19, 2024: ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿ ಚಿಕಿತ್ಸಾ ವಿಭಾಗದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ತುರ್ತು ಚಿಕಿತ್ಸಾ ವಿಭಾಗವನ್ನು ಹೊಸ ಸರ್ಜಿಕಲ್ ಬ್ಲಾಕ್‍ಗೆ ಸ್ಥಳಾಂತರಿಸಲಾಗಿದೆ.

ಗುರುವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ವೆನ್‍ಲಾಕ್‍ಗೆ ಭೇಟಿ ನೀಡಿ ತುರ್ತು ಚಿಕಿತ್ಸಾ ವಿಭಾಗವನ್ನು ವೀಕ್ಷಿಸಿದರು.

ಈ ಕಟ್ಟಡವನ್ನು ಕಳೆದ ಆಗಸ್ಟ್ 15ರಂದು ಉದ್ಘಾಟಿಸಲಾಗಿತ್ತು. ಸಾರ್ವಜನಿಕರು ಇನ್ನು ಮುಂದೆ ತುರ್ತು ಚಿಕಿತ್ಸಾ ವಿಭಾಗದ ಸೇವೆಗಾಗಿ ಹೊಸ ಸರ್ಜಿಕಲ್ ಬ್ಲಾಕ್‍ಗೆ ಭೇಟಿ ನೀಡುವಂತೆ ವೆನ್‍ಲಾಕ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!