ಶಿಲ್ಪಕಲೆಯ ಮೇರು ವ್ಯಕ್ತಿ ಅಮರಶಿಲ್ಪಿ ಜಕಣಾಚಾರಿ: ಜಿಲ್ಲಾಧಿಕಾರಿ
ಮಂಗಳೂರು,ಜ.01, 2023: ನೂರಾರು ವರ್ಷಗಳ ಹಿಂದೆಯೇ ಶಿಲ್ಪಕಲೆಗೆ ಅತ್ಯುನ್ನತ ಮೆರುಗು ತಂದು ಇತಿಹಾಸದ ಭವ್ಯ ಸಾಕ್ಷ್ಯ ನೀಡಿದ ಮೇರು ವ್ಯಕ್ತಿ ಅಮರಶಿಲ್ಪಿ ಜಕಣಾಚಾರಿ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ. ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೇಲೂರು ಹಳೇಬೀಡಿನಂತಹ ಭವ್ಯ ಇತಿಹಾಸದ ಉತ್ಕøಷ್ಟ ಶಿಲ್ಪ ಕಲೆಯನ್ನು ನಾಡಿಗೆ ದೊರಕಲು ಕಾರಣ ಕರ್ತರಾದ ಜಕಣಾಚಾರಿ ಅವರ ಕೊಡುಗೆ ಸದಾ ಸ್ಮರಣೀಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸುಂದರ ಆಚಾರ್ಯ ಬೆಳುವಾಯಿ ಮಾತನಾಡಿ ಜಕಣಾಚಾರಿ ಅವರ ಕೊಡುಗೆಗಳನ್ನು ಸ್ಮರಿಸಿದರು. ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ವಿಶ್ವಕರ್ಮ ಬ್ರಾಹ್ಮಣ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.