ರಬ್ಬರ್ ನಾಟಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಮಂಗಳೂರು, ಅ.31, 2023: 2022ರಲ್ಲಿ ಮರು ನಾಟಿ ಮಾಡಿದ ಮತ್ತು ಹೊಸದಾಗಿ ನಾಟಿ ಮಾಡಿದ ರಬ್ಬರ್ ಬೆಳೆಗಾರರಿಂದ ಆರ್ಥಿಕ ಸಹಾಯಕ್ಕಾಗಿ ಮಂಡಳಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ರಬ್ಬರ್ ಅಡಿಯಲ್ಲಿ ಒಟ್ಟು 5 ಹೆಕ್ಟೇರ್ ವಿಸ್ತೀರ್ಣ ಮೀರದ ಬೆಳೆಗಾರರು ಷರತ್ತಿಗೊಳಪಟ್ಟು 2 ಹೆಕ್ಟೇರ್ ವರೆಗಿನ ಪ್ರದೇಶಕ್ಕೆ ನಾಟಿ ಅನುದಾನಕ್ಕೆ ಅರ್ಹರಾಗಿರುತ್ತಾರೆ. ಬೆಳೆಗಾರರು 2023ರ ನವೆಂಬರ್ 30ರಂದು ಅಥವಾ ಮೊದಲು ಕೇಂದ್ರ ಸರ್ಕಾರದ ಸೇವೆ ಮತ್ತು ಸರ್ವೀಸ್ ಪ್ಲಸ್ ವೆಬ್ ಪೊರ್ಟಲ್ ಮೂಲಕ ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ರಬ್ಬರ್ ಮಂಡಳಿಯ ವೆಬ್‍ಸೈಟ್ ವಿಳಾಸ: www.rubberboard.org.in ನೋಡಬಹುದು ಅಥವಾ ಬೆಳೆಗಾರರು ಮಂಗಳೂರು, ಪುತ್ತೂರು, ಕುಂದಾಪುರ ಮತ್ತು ಶಿವಮೊಗ್ಗದಲ್ಲಿರುವ ಹತ್ತಿರದ ರಬ್ಬರ್ ಮಂಡಳಿಯ ಪ್ರಾದೇಶಿಕ ಕಚೇರಿಯನ್ನು ಅಥವಾ ಕೇತ್ರ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಉಪ ರಬ್ಬರ್ ಉತ್ಪಾದನಾ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.