ಆ.13 ರಂದು ಪಿಲಿಕುಳದಲ್ಲಿ ಆಟಿಕೂಟ

 ಆ.13 ರಂದು ಪಿಲಿಕುಳದಲ್ಲಿ ಆಟಿಕೂಟ
Share this post

ಮಂಗಳೂರು.ಆ.11, 2023: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪಿಲಿಕುಳ ಆಟಿಕೂಟ-2023 ಇದೇ ಆ.13ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಪಿಲಿಕುಳದ ಗುತ್ತು ಮನೆಯಲ್ಲಿ ನಡೆಯಲಿದೆ.

ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಉಪಸ್ಥಿತಿ ವಹಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಕಾರ್ಯಕ್ರಮ ಉದ್ಘಾಟಿಸುವರು.

ಮೂಡಬಿದ್ರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಮಂಗಳೂರಿನ ಯಕ್ಷಾಭಿನಯ ಬಳಗದಿಂದ ಬಡಗುತಿಟ್ಟಿನ ಯಕ್ಷನೃತ್ಯ ಹಾಗೂ ಇತರ ವೈವಿಧ್ಯಮಯ  ಜನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!