ಕಾರವಾರ: ಸ್ವಾತಂತ್ರ್ಯೋತ್ಸವ ಅಂಗವಾಗಿ ಮುಕ್ತ ಚದುರಂಗ ಸ್ಪರ್ಧೆ
ಕಾರವಾರ, ಆ.08, 2023: 77 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಬಾಲಕ/ಬಾಲಕಿಯರಿಗಾಗಿ ಮುಕ್ತ “ಚದುರಂಗ” ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಈ ಸ್ಪರ್ಧೆಯನ್ನು ಆಗಸ್ಟ್ 12 ರಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುವುದು.
ತಾಲೂಕಿನಲ್ಲಿ ವಿಜೇತರಾದ ಪ್ರತಿ ವಿಭಾಗಕ್ಕೆ ಒಬ್ಬರಂತೆ 04 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಆಗಸ್ಟ್ 14 ರಂದು ಕಾರವಾರದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರತಿ ವಿಭಾಗದಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳನ್ನು ಸ್ವಾತಂತ್ರ್ಯೋತ್ಸವದ ದಿನದಂದು ವಿತರಿಸಲಾಗುವುದು.
ಆಸಕ್ತ ಬಾಲಕ/ಬಾಲಕಿಯರು ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳಾದ ಕಾರವಾರದ ಶಾನೂರಲಿ 9590318322, ಅಂಕೋಲಾದ ಪ್ರಶಾಂತ ನಾಯ್ಕ 990352618, ಕುಮಟಾದ ಶಾರದಾ ನಾಯ್ಕ 8618235935, ಹೊನ್ನಾವರದ ಸುದೀಶ ನಾಯ್ಕ 9448530726, ಭಟ್ಕಳದ ನಾಗರಾಜ ಪಟಗಾರ 9448995841, ಶಿರಶಿಯ ಕಿರಣ ನಾಯ್ಕ 9449801404, ಸಿದ್ದಾಪುರದ ಮಾಧವ ನಾಯ್ಕ 9449360803, ಯಲ್ಲಾಪುರದ ನಾರಾಯಣ ನಾಯಕ 9986221280, ಮುಂಡಗೋಡದ ಹನುಮಂತ ವಡ್ಡರ 8105464657 ಹಳಿಯಾಳದ ಶಿವಾನಂದ ಆರ್ 7019565606, ಜೋಯಿಡಾದ ತುಕಾರಾಮ ಗೌಡ 9945489193, ದಾಂಡೇಲಿಯ ಮಮತಾ ಕೇಳೋಜಿ 8971873968 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.