ಗೃಹಲಕ್ಷ್ಮಿ ಯೋಜನೆ: ಸಹಾಯವಾಣಿ ಸ್ಥಾಪನೆ
ಉಡುಪಿ, ಜುಲೈ 21, 2023: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾಕೇಂದ್ರ, ನಗರ ಪ್ರದೇಶಗಳಿಗೆ ಸಂಬಂಧಿಸಿದಂತೆ ವಾರ್ಡ್ ಕಚೇರಿ ನೋಂದಣಿ ಕೇಂದ್ರದಲ್ಲಿ ನಿಗದಿಪಡಿಸಿರುವ ಫಲಾನುಭವಿಗಳ ವೇಳಾ ಪಟ್ಟಿಯಂತೆ ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಉಚಿತವಾಗಿ ನೋಂದಣಿ ಮಾಡಲಾಗುತ್ತಿದೆ.
ಬಾಹ್ಯಮೂಲದ ಯಾವುದೇ ಅಪ್ಲಿಕೇಷನ್ ಅಥವಾ ವೆಬ್‌ಸೈಟ್ ಮೂಲಕ ನೋಂದಣಿ ಮಾಡಲು ಅವಕಾಶ ಇರುವುದಿಲ್ಲ. ಅನರ್ಹ ಫಲಾನುಭವಿಗಳು ನೋಂದಣಿ ಮಾಡಿ ಸೌಲಭ್ಯ ಪಡೆದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು.
ಗೃಹಲಕ್ಷ್ಮಿ ನೋಂದಣಿ ವೇಳಾಪಟ್ಟಿಯನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ ಪಡಿತರ ಚೀಟಿ ಸಂಖ್ಯೆ ನಮೂದಿಸಿ ಹಾಗೂ ದೂರವಾಣಿ ಸಂಖ್ಯೆ 8147500500ಗೆ ಪಡಿತರಚೀಟಿ ಸಂಖ್ಯೆಯನ್ನು ಎಸ್‌ಎಂಎಸ್ ಮಾಡುವ ಮೂಲಕ ತಿಳಿದುಕೊಳ್ಳಬಹುದಾಗಿರುತ್ತದೆ.
ಗ್ರಾಮ ಒನ್ ಕೇಂದ್ರಕ್ಕೆ ಸ್ಥಳೀಯ ಗ್ರಾಮಾಡಳಿತ ಅಧಿಕಾರಿ, ಬಾಪೂಜಿ ಸೇವಾ ಕೇಂದ್ರಕ್ಕೆ ಸ್ಥಳೀಯ ಗ್ರಾಮ ಪಂಚಾಯತ್ ಪಿ.ಡಿ.ಓ, ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಒನ್ ಹಾಗೂ ವಾರ್ಡ್ ಕಛೇರಿ ನೋಂದಣಿ ಕೇಂದ್ರಕ್ಕೆ ನಗರಾಡಳಿತ ಇಲಾಖೆಗೆ ಸಂಬಂಧಿಸಿದ ಕಂದಾಯ ಅಧಿಕಾರಿ, ಆರೋಗ್ಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದ್ದು, ಗೃಹಲಕ್ಷ್ಮಿ ಯೋಜನೆಯ ಮಾರ್ಗಸೂಚಿ ಹಾಗೂ ಆನ್‌ಲೈನ್ ನೋಂದಣಿ ಸಮಸ್ಯೆಗಳ ಬಗ್ಗೆ ಈ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆ ಕುರಿತು ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗೆ 1902 ಉಚಿತ ಸಹಾಯವಾಣಿ ಸಂಖ್ಯೆಗೆ ಬೆಳಗ್ಗೆ 9 ರಿಂದ ಸಂಜೆ 6 ರ ವರೆಗೆ ಕರೆ ಮಾಡಬಹುದು ಅಥವಾ ತಾಲೂಕುವಾರು ಸಹಾಯವಾಣಿ ಉಡುಪಿ ತಾಲೂಕು ದೂ.ಸಂಖ್ಯೆ: 0820-2520417, ಬ್ರಹ್ಮಾವರ ದೂ.ಸಂಖ್ಯೆ: 0820-2560494, ಕಾಪು ದೂ.ಸಂಖ್ಯೆ: 0820-2551444, ಕುಂದಾಪುರ ದೂ.ಸಂಖ್ಯೆ: 08254-230357, ಬೈಂದೂರು ದೂ.ಸಂಖ್ಯೆ: 08254-251657, ಕಾರ್ಕಳ ದೂ.ಸಂಖ್ಯೆ: 08258-230201, ಹೆಬ್ರಿ ದೂ.ಸಂಖ್ಯೆ: 08253-250201 ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ ಸಂಖ್ಯೆ 0820-2574802/ ಉಚಿತ ಸಹಾಯವಾಣಿ 1077 ಅನ್ನು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ಕರೆ ಮಾಡಬಹುದು ಅಥವಾ ಸ್ಥಳೀಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.