ನಗರ ಕೇಂದ್ರ ಗ್ರಂಥಾಲಯ, ಮಕ್ಕಳ ಸಮುದಾಯ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಉದ್ಘಾಟನೆ

 ನಗರ ಕೇಂದ್ರ ಗ್ರಂಥಾಲಯ, ಮಕ್ಕಳ ಸಮುದಾಯ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಉದ್ಘಾಟನೆ
Share this post

ಉಡುಪಿ, ಜುಲೈ 20, 2023: ಕೇರಳದ ಗ್ರಂಥಾಲಯ ಚಳುವಳಿಯ ಪಿತಾಮಹ ಪಿ. ಎನ್ ಪಣಿಕ್ಕರ್ (ಪುತುವಾಯಿಲ್ ನಾರಾಯಣ ಪಣಿಕ್ಕರ್) ಇವರ ಪುಣ್ಯತಿಥಿಯ ಪ್ರಯುಕ್ತ ಜೂನ್ 19 ರಂದು ರಾಷ್ಟ್ರೀಯ ಓದುವ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಜೂನ್ 19 ರಿಂದ ಜುಲೈ 18 ರ ವರೆಗೆ ಓದುವ ತಿಂಗಳು  ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ.

ಮಕ್ಕಳು ಹಾಗೂ ಸಾರ್ವಜನಿಕರನ್ನು ಗ್ರಂಥಾಲಯದತ್ತ ಆಕರ್ಷಿಸಿ ಅವರಲ್ಲಿ ಪುಸ್ತಕ ಓದುವ ಹವ್ಯಾಸ ಮತ್ತು ಗ್ರಂಥಾಲಯಗಳ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಓದುವ ತಿಂಗಳು ಕಾರ್ಯಕ್ರಮದ ಪ್ರಯುಕ್ತ ಮಂಗಳವಾರ ನಡೆದ ಪುಸ್ತಕ ಪ್ರದರ್ಶನವನ್ನು ಅಜ್ಜರಕಾಡಿನ ವಿದ್ಯಾ ವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಮಕ್ಕಳ ಸಮುದಾಯ ಕೇಂದ್ರ ಗ್ರಂಥಾಲಯದಲ್ಲಿ ಸಾಹಿತಿ ಸಂಗೀತ ಜಾನ್ಸನ್ ಹಾಗೂ ನಗರ ಗ್ರಂಥಾಲಯದಲ್ಲಿ ಹಿರಿಯ ಸಾಹಿತಿ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಉದ್ಘಾಟಿಸಿದರು.

ಶಾಲಾ ಮಕ್ಕಳಿಗಾಗಿ ಪುಸ್ತಕ ಓದುವ ಸ್ಪರ್ಧೆ, ಕನ್ನಡ ಪುಸ್ತಕ ಓದಿ ಕಥೆ ಹೇಳುವ ಸ್ಪರ್ಧೆ,  ಪುಸ್ತಕ ಓದಿ, ವಿಷಯ ತಿಳಿಸುವ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ  ಮಕ್ಕಳು ಭಾಗವಹಿಸಿದ್ದರು. 

ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಇವರು ಸ್ವಾಗತಿಸಿ,  ಪ್ರಥಮ ದರ್ಜೆ ಸಹಾಯಕಿ ಶಕುಂತಳಾ ಕುಂದರ್ ನಿರೂಪಿಸಿ, ಗ್ರಂಥಪಾಲಕಿ ರಂಜಿತ ಸಿ ವಂದಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!