ಉಜಿರೆಯ ಎಸ್‌.ಡಿ.ಎಂ ಕಾಲೇಜಿನ ಕನ್ನಡ ವಿಭಾಗದಿಂದ ಶೈಕ್ಷಣಿಕ ಅಧ್ಯಯನ ಪ್ರವಾಸ

 ಉಜಿರೆಯ ಎಸ್‌.ಡಿ.ಎಂ ಕಾಲೇಜಿನ ಕನ್ನಡ ವಿಭಾಗದಿಂದ ಶೈಕ್ಷಣಿಕ ಅಧ್ಯಯನ ಪ್ರವಾಸ
Share this post

ಉಜಿರೆ, ಜೂನ್ 14, 2023: ಉಜಿರೆಯ‌ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗವು  ವಿದ್ಯಾರ್ಥಿಗಳಿಗಾಗಿ ಕುಪ್ಪಳಿಗೆ ಎರಡು ದಿನದ ಶೈಕ್ಷಣಿಕ  ಅಧ್ಯಯನ ಪ್ರವಾಸವನ್ನು ಆಯೋಜಿಸಿತ್ತು.

ರಾಷ್ಟ್ರಕವಿ ಕುವೆಂಪು ಅವರ ಕುರಿತು ವಿದ್ಯಾರ್ಥಿಗಳಲ್ಲಿ ಮಾಹಿತಿ ಮತ್ತು ಆಸಕ್ತಿ ಮೂಡಿಸುವ ದೃಷ್ಟಿಯಿಂದ ಕುವೆಂಪು ಅವರ ಜನ್ಮಸ್ಥಳವಾದ ಕುಪ್ಪಳಿಗೆ ಅಧ್ಯಯನ ಪ್ರವಾಸ ಮಾಡಲಾಯಿತು. 

ಈ ಸಂದರ್ಭದಲ್ಲಿ ಕುವೆಂಪು ಅವರು ವಾಸವಾಗಿದ್ದ ಕವಿಮನೆ, ಕವಿಶೈಲದ ಜೊತೆಯಲ್ಲಿ ಕುವೆಂಪು ಅವರ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿದ ನವಿಲು ಕಲ್ಲು, ರಾಮತೀರ್ಥ ಮತ್ತು ತೇಜಸ್ವಿ ಸ್ಮಾರಕ, ಕಲಾ ಭವನಗಳಿಗೆ ಭೇಟಿ ನೀಡಲಾಯಿತು. 

ಈ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಕಡಿದಾಳ್ ಪ್ರಕಾಶ್, ಖಜಾಂಚಿ ಮನುದೇವ್ ಮತ್ತು ಪ್ರಾಧ್ಯಾಪಕರಾದ ರಾಜಶೇಖರ ಹಳೆಮನೆ, ನವನೀತ್ ಕುಮಾರ್ ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!