ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
Share this post

ಮಂಗಳೂರು, ಮೇ.24, 2023: ಜಿಲ್ಲೆಯ ಬಾಲಭವನದ ಚಟುವಟಿಕೆ ಮತ್ತು ಕಾರ್ಯಕ್ರಮ ನಡೆಸಲು ಕಂಪ್ಯೂಟರ್ ಜ್ಞಾನ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಕಾರ್ಯಕ್ರಮ ಸಂಯೋಜಕರು ಹಾಗೂ ಕಚೇರಿ ಸಹಾಯಕರ ಹುದ್ದೆಗೆ ಮಾಸಿಕ ಗೌರವಧನ 10,000 ರೂ.ಗಳ ಆಧಾರದಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಪಿ.ಯು.ಸಿ ಮತ್ತು ಮೇಲ್ಪಟ್ಟ ವಿದ್ಯಾರ್ಹತೆಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರುವ ಅರ್ಹ ಅಭ್ಯರ್ಥಿಗಳು ಕಾರ್ಯಕ್ರಮ ಸಂಯೋಜಕರು ಹಾಗೂ ಕಚೇರಿ ಸಹಾಯಕರ ಹುದ್ದೆಗೆ 2023ರ ಜೂನ್ 6ರೊಳಗೆ ಅರ್ಜಿ ಭರ್ತಿ ಮಾಡಿ ನಗರದ ಬಿಜೈ ನಲ್ಲಿರುವ ಮೆಸ್ಕಾಂ ಹತ್ತಿರದ ಜಿಲ್ಲಾ ಸ್ರೀಶಕ್ತಿ ಭವನ 2ನೇ ಮಹಡಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ:0824-2451254 ಗೆ ಕರೆ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!