ಉಡುಪಿ: ರಜತ ಮಹೋತ್ಸವ ಅಂಗವಾಗಿ ಚಿತ್ರಕಲಾ ಸ್ಪರ್ಧೆ

 ಉಡುಪಿ: ರಜತ ಮಹೋತ್ಸವ ಅಂಗವಾಗಿ ಚಿತ್ರಕಲಾ ಸ್ಪರ್ಧೆ
Share this post

ಉಡುಪಿ, ಜ 16, 2023: ಉಡುಪಿ ಜಿಲ್ಲಾ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜನವರಿ 20 ರಿಂದ 22 ರ ವರೆಗೆ ಮಲ್ಪೆ ಬೀಚ್‌ನಲ್ಲಿ ಬೀಚ್ ಉತ್ಸವ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಜ. 22 ರಂದು ಬೆಳಗ್ಗೆ 10 ಗಂಟೆಗೆ ಚಿತ್ರಕಲಾ /ಪೇಂಟಿಂಗ್ ಸ್ಪರ್ಧೆಯನ್ನು ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ.

1 ರಿಂದ 4 ನೇ ತರಗತಿಯ ಕಿರಿಯ ಪ್ರಾಥಮಿಕ ವಿಭಾಗದವರಿಗೆ ಐಚ್ಛಿಕ ವಿಷಯದ ಕುರಿತು, 5 ರಿಂದ 7 ನೇ ತರಗತಿಯ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕುರಿತು, 8 ರಿಂದ 10 ನೇ ತರಗತಿ ವರೆಗಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಮಲ್ಪೆ ಕಡಲತೀರ ಎಂಬ ವಿಷಯದ ಕುರಿತು ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಭೂದೃಶ್ಯ ರಚನೆ ಕುರಿತು ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, ಭಾಗವಹಿಸಲು ಇಚ್ಛಿಸುವ ಆಸಕ್ತ ವಿದ್ಯಾರ್ಥಿಗಳು ಜನವರಿ 19 ರ ಒಳಗೆ ಸಂಬಂಧಪಟ್ಟ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಯವರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಚಿತ್ರಕಲಾ ಶಿಕ್ಷಕರಿಂದ ಮಳಿಗೆಯಲ್ಲಿ ವಿದ್ಯಾರ್ಥಿಗಳಿಂದ ಮಾಡಿಸಿದ ಚಿತ್ರಕಲೆ/ ಪೇಂಟಿಂಗ್ ಫಲಕಗಳನ್ನು ಚಿತ್ರಕಲಾ ಪ್ರದರ್ಶನ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಧನಂಜಯ ಮೊ.ನಂ: 9008198125, ರಾಘವೇಂದ್ರ ಚಾತ್ರಮಕ್ಕಿ ಮೊ.ನಂ: 9164156884, ಮಲ್ಲಪ್ಪ ಕುಂಬಾರ ಮೊ.ನಂ: 9902722987 ಹಾಗೂ ನಾಗರಾಜ್ ಎಂ ಮೊ.ನಂ:9449964968 ಅನ್ನು ಸಂಪರ್ಕಿಸಬಹುದಾಗಿದೆ   ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!