ಉಡುಪಿ: ಜ. 3 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

 ಉಡುಪಿ: ಜ. 3 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
Share this post

ಉಡುಪಿ, ಜ 31, 2022: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಜನವರಿ 3 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

220/110/11ಕೆವಿ ಕೇಮಾರ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಫೀಡರ್‌ಗಳಾದ ನಿಟ್ಟೆ, ಕಲ್ಯಾ, ಲೆಮಿನಾ, ನಿಟ್ಟೆ ವಾಟರ್ ಸಪ್ಲೈ , 110ಕೆವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ 11ಕೆವಿ ಪದವು ಫೀಡರ್ ಹಾಗೂ 110 ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಫೀಡರ್‌ಗಳಾದ ಮುಂಡ್ಕೂರು, ನಂದಳಿಕೆ, ಬೋಳ ಮತ್ತು ಬೆಳ್ಮಣ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನಿಟ್ಟೆ, ನಿಟ್ಟೆ ಕಾಲೇಜು, ನಿಟ್ಟೆ ವಾಟರ್ ಸಪ್ಲೈ , ಬೊರ್ಗಲ್ ಗುಡ್ಡೆ, ಹಾಮಾಜೆ, ಕುಂಟಾಡಿ, ಕೈರಬೆಟ್ಟು, ನಿಟ್ಟೆ ಪಂಚಾಯತ್, ನಿಟ್ಟೆ ಮಸೀದಿ, ಲೆಮಿನಾ ಇಂಡಸ್ಟ್ರಿಸ್, ದೂಪದಕಟ್ಟೆ, ಕೆಮ್ಮಣ್ಣು, ಗುಂಡ್ಯಡ್ಕ, ಕಲ್ಲಂಬಾಡಿ, ಪದವು, ನೆಲ್ಲಿಗುಡ್ಡೆ, ಬಾರಾಡಿ, ಬೇಲಾಡಿ, ಕಾಂತಾವರ, ಕಲ್ಯಾ, ಬೆಳ್ಮಣ್, ಬೆಳ್ಮಣ್ ದೇವಸ್ಥಾನ, ಗೋಳಿಕಟ್ಟೆ, ನಂದಳಿಕೆ, ಜಂತ್ರ, ನೀಚಾಲು, ಕೆದಿಂಜೆ, ಅಂಬರಾಡಿ, ಬೋಳ ಪಂಚಾಯತ್, ಪಿಲಿಯೂರು, ಕೆರೆಕೋಡಿ, ಒಂಜಾರೆ ಕಟ್ಟೆ, ಬಾರೆಬೈಲು, ಪುಕ್ಕಲ್ಲು, ಕೆಂಪುಜೋರ, ಮಾವಿನಕಟ್ಟೆ, ದೇಂದೊಟ್ಟು ಪದವು, ಇಟ್ಟಮೇರಿ, ಕೊರಜೆ, ಮುಂಡ್ಕೂರು, ಕಾಂಜರಕಟ್ಟೆ, ಸಚ್ಚರಿಪೇಟೆ, ಮುಲ್ಲಡ್ಕ, ಕೋಡಿಮಾರು, ಸಂಕಲಕರಿಯ, ನಾನಿಲ್ ತಾರ್, ಜಾರಿಗೆಕಟ್ಟೆ, ಪರಪ್ಪಾಡಿ, ಲೆಮಿನಾ ಕ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳ್ಗಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಶಿರ್ವ ಎಂ.ಯು.ಎಸ್.ಎಸ್ ನಲ್ಲಿ ರೀ-ಕಂಡಕ್ಟರಿಂಗ್ ಮತ್ತು ಉಪಕೇಂದ್ರದ ಒಳಗೆ ಸ್ಟ್ರಕ್ಚರ್ ಪೇಂಟಿಂಗ್ ಮಾಡುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಈ ಉಪಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್ ಮಾರ್ಗದಲ್ಲಿ ಬಂಟಕಲ್ಲು ಗ್ರಾಮ, ಪೊಲಿಪು ಗ್ರಾಮ, ಮೂಡಬೆಟ್ಟು ಗ್ರಾಮ, ಪಾಂಗಳ ಗ್ರಾಮ, ಶಿರ್ವ ಹಾಗೂ ಶಂಕರಪುರ ಗ್ರಾಮ, ಕುರ್ಕಾಲು ಗ್ರಾಮ, ಇನ್ನಂಜೆ ಗ್ರಾಮ, ಕಳತ್ತೂರು ಗ್ರಾಮ (ಪುಂಚಲಕಾಡು), ಪಣಿಯೂರು ಗ್ರಾಮ, ಬಡಾ ಗ್ರಾಮ(ಉಚ್ಚಿಲ), ಮೂಳೂರು ಗ್ರಾಮ, ಬೆಳಪು ಗ್ರಾಮ, ಮಲ್ಲಾರು ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/33/11 ಕೆವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಇಂಡಸ್ಟ್ರೀಯಲ್ ಕೆ.ಎಂ.ಎಫ್ ಮತ್ತು ಮಣಿಪಾಲ ಟೌನ್ ಫೀಡರಿನಲ್ಲಿ ಹಾಗೂ 110/33/11ಕೆವಿ ವಿದ್ಯುತ್ ಉಪಕೇಂದ್ರ ಹಿರಿಯಡ್ಕದಿಂದ ಹೊರಡುವ 11ಕೆವಿ ಹಿರಿಯಡ್ಕ, ಪೆರ್ಡೂರು, ಹಿರೇಬೆಟ್ಟು ಫೀಡರಿನಲ್ಲಿ ಮೆಂಟೆನೆನ್ಸ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಶಿವಳ್ಳಿ ಇಂಡಸ್ಟ್ರೀಯಲ್ ಏರಿಯಾ, ಈಶ್ವರನಗರ, ಸರಳೇಬೆಟ್ಟು, ಅರ್ಬಿ, ಪ್ರಗತಿನಗರ, 80 ಬಡಗುಬೆಟ್ಟು, ಮಣಿಪಾಲ ಟೌನ್, ವೇಣುಗೋಪಾಲ ಟೆಂಪಲ್ ಹತ್ತಿರ, ಮಣಿಪಾಲ ಮೀಡಿಯಾ ನೆಟ್‌ವರ್ಕ್, ಹಿರಿಯಡ್ಕ ಪೇಟೆ, ಪಾಪುಜೆ, ಬಜೆ, ಪುತ್ತಿಗೆ, ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ, ಗುಡ್ಡೆಯಂಗಡಿ, ಕೊಂಡಾಡಿ, ಕೋಡಿಬೆಟ್ಟು, ಪೆರ್ಣಂಕಿಲ, ಕಣಂಜಾರು, ಕಾಜರಗುತ್ತು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/33/11ಕೆ.ವಿ ಕುಂದಾಪುರ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಅಂಪಾರು, ಬಳ್ಕೂರು ಮತ್ತು ಜಪ್ತಿವಾಟರ್ ಸಪ್ಲೈ ಮಾರ್ಗಗಳಲ್ಲಿ ಟ್ರೀ ಟ್ರಿಮ್ಮಿಂಗ್ ಮತ್ತು ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅಂಪಾರು, ಹಳ್ನಾಡು, ಕಾವ್ರಾಡಿ, ಶಂಕರನಾರಾಯಣ, ಕೋಣಿ, ಬಳ್ಕೂರು, ಕಂಡ್ಲೂರು, ಮೂಡ್ಲಕಟ್ಟೆ, ಕುಂದಾಪುರ ಪುರಸಭೆಯ ಕುಡಿಯುವ ನೀರಿನ ಸ್ಥಾವರ, ಬಸ್ರೂರು, ಆನಗಳ್ಳಿ ಮತ್ತು ಕಂದಾವರ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!