ವಿಶೇಷ ಗ್ರಾಮ ಸಭೆಯಲ್ಲಿ ಶಾಲಾ ಅಭಿವೃದ್ದಿ ಕಾಮಗಾರಿಗಳಿಗೆ ಬೇಡಿಕೆ

 ವಿಶೇಷ ಗ್ರಾಮ ಸಭೆಯಲ್ಲಿ ಶಾಲಾ ಅಭಿವೃದ್ದಿ ಕಾಮಗಾರಿಗಳಿಗೆ ಬೇಡಿಕೆ
Share this post

ಮನೆ ಮನೆಗೂ ಖಾತರಿಯಡಿ ಪೌಷ್ಠಿಕ ಕೈತೋಟ ನಿರ್ಮಾಣ

ಶಿರಸಿ, ಡಿ 20, 2022: ತಾಲೂಕಿನ ಇಸಳೂರು ಗ್ರಾಮ ಪಂಚಾಯತ್‌ನಲ್ಲಿ ಮಕ್ಕಳು ಮತ್ತು ಮಹಿಳಾ ವಿಶೇಷ ಗ್ರಾಮ ಸಭೆ ನಡೆಸಿ ಅವರ ಸಮಸ್ಯೆಗಳ ಕುರಿತು ಅಧಿಕಾರಿಗಳು ಹಾಗೂ ಪಂಚಾಯತ್ ಪ್ರತಿನಿಧಿಗಳ ಸಮ್ಮುಖದಲ್ಲಿ ಚರ್ಚಿಸಲಾಯಿತು.

ಮಂಗಳವಾರ ನಡೆದ ಸಭೆಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ತಾಲೂಕು ಐಇಸಿ ಸಂಯೋಜಕರು ಖಾತರಿ ಯೋಜನೆಯಡಿ ಸಿಗುವ ಸೌಲಭ್ಯಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯೋಜನೆಯ ಸದುಪಯೋಗದ ಕುರಿತು ಮಾಹಿತಿ ನೀಡಿದರು. ಇನ್ನು ಅಪೌಷ್ಠಿಕತೆ ಹೋಗಲಾಡಿಸುವ ದೃಷ್ಠಿಯಿಂದ ಶಾಲೆಗಳಿಗೆ ಹಾಗೂ ವೈಯಕ್ತಿಕವಾಗಿ ಪೌಷ್ಟಿಕ ಕೈತೋಟ ನೀಡಲಾಗುತ್ತಿದೆ ಅದರ ಸದುಪಯೋಗ ಪ್ರತಿಯೊಬ್ಬರು ಪಡೆಯಬೇಕೆಂದು ತಿಳಿಸಿದರು.

ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಆಹಾರ ಸುರಕ್ಷತೆ, ಮಹಿಳೆ ಮತ್ತು ಮಕ್ಕಳ ಮೇಲಾಗುವ ದೌರ್ಜನ್ಯ ತಡೆಯಲು ಅನುಸರಿಸಬೇಕಾದ ಕ್ರಮಗಳು, ಹಾಗೂ ಎನ್‌ಆರ್‌ಎಲ್‌ಎಮ್ ಒಕ್ಕೂಟದ ಕುರಿತು ಪರಿಣಿತರು ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಭಟ್, ಉಪಾಧ್ಯಕ್ಷ ಪ್ರಸನ್ನ ಹೆಗಡೆ ಹಾಗೂ ಸದಸ್ಯರು, ಪಂಚಾಯತ್ ಅಭಿವೃದ್ದಿ ಗೋಪಾಲ ಪಟಗಾರ್, ಕಾರ್ಯದರ್ಶಿ ವೆಂಕಟ್ರಮಣ ಶೆಟ್ಟಿ, ಐಇಸಿ ಸಂಯೋಜಕರಾದ ಪೂರ್ಣಿಮಾ ಗೌಡ, ಎನ್‌ಆರ್‌ಎಲ್‌ಎಮ್ ವಲಯ ಮೇಲ್ವಿಚಾರಕರಾದ ರಾಮಣ್ಣ, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಎಮ್‌ಬಿಕೆ, ಪಂಚಾಯತ್ ಸಿಬ್ಬಂದಿಗಳು, ವೈದ್ಯಾಧಿಕಾರಿಗಳು, ನೂಡಲ್ ಅಧಿಕಾರಿ, ಸ್ವಸಹಾಯ ಸಂಘದವರು, ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!