ಪಣಿಯಾಡಿ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಲಕ್ಷ ತುಳಸಿ ಅರ್ಚನೆ, ದೀಪೋತ್ಸವ


ಉಡುಪಿ, ನ 15, 2022: ಪುರಾಣ ಪ್ರಸಿದ್ಧ ಪಣಿಯಾಡಿ ಶೇಷಾಸನ ಲಕ್ಷ್ಮೀ ಅನಂತ ಪದ್ಮನಾಭ ದೇವಳದಲ್ಲಿ ದಿನಾಂಕ 13 ಭಾನುವಾರದಂದು ಕಾರ್ತಿಕ ಮಾಸದ ಶುಭಾವಸರದಲ್ಲಿ ಪ್ರಾತಃ ಕಾಲದಲ್ಲಿ ಶ್ರೀದೇವರಿಗೆ ಕಲಶಾಭಿಷೇಕದ ಜೊತೆಗೆ ಅನಂತ ವಿಪ್ರ ಬಳಗದಿಂದ ಶ್ರೀಮುರಳಿ ಕೃಷ್ಣ ತಂತ್ರಿಯವರ ಪ್ರಾಯೋಜಕತ್ವದಲ್ಲಿ ವಿಪ್ರ ಬಂಧುಗಳಿಂದ ವಿಷ್ಣು ಸಹಸ್ರ ನಾಮಾವಳಿ ಸಹಿತ ಲಕ್ಷ ತುಳಸಿ ಅರ್ಚನೆ ಸಂಪನ್ನಗೊಂಡಿತು.
ಇದನ್ನೂ ಓದಿ: ಪಣಿಯಾಡಿ ದೇವಸ್ಥಾನದಲ್ಲಿ ಸಂಭ್ರಮದ ಶ್ರೀ ಮಧ್ವ ಜಯಂತಿ ಮಹೋತ್ಸವ
ಈ ಕಾರ್ಯಕ್ರಮದಲ್ಲಿ ಕಡಿಯಾಳಿ, ಕರಂಬಳ್ಳಿ ಹಾಗೂ ಬೈಲೂರು ಇತ್ಯಾದಿ ವಿಪ್ರ ವಲಯದ ಬಂಧುಗಳೂ ಸೇರಿಕೊಂಡಿದ್ದರು.
ಮಧ್ಯಾಹ್ನ ಅನ್ನ ಸಂತರ್ಪಣೆಯ ಬಳಿಕ ಸಂಜೆ ಶ್ರೀ ಪುತ್ತಿಗೆ ಮಠದ ವತಿಯಿಂದ ವಿಶೇಷ ದೀಪೋತ್ಸವಾದಿ ಸೇವೆಗಳು ನಡೆದವು.
ಈ ಸಂದರ್ಭದಲ್ಲಿ ತುಳಸೀ ಸಂಕೀರ್ತನೆ, ಭಜನೆ, ಅನಂತ ದೀಪಗಳ ರಾತ್ರಿ ದೀಪೋತ್ಸವದ ಜೊತೆ ರಂಗಪೂಜೆ, ಅಷ್ಟಾವಧಾನ, ಪಲ್ಲಕ್ಕಿಉತ್ಸವ ಸೇವೆ, ಉತ್ಸವ ಬಲಿ, ಸಿಡಿಮದ್ದು ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳು ಭಕ್ತ ಜನ ಸಾಗರದ ನಡುವೆ ಋತ್ವಿಜರಾದ ಶ್ರೀ ವಾದಿರಾಜ ತಂತ್ರಿ ಹಾಗೂ ಪ್ರಧಾನ ಅರ್ಚಕ ಶ್ರಿ ರಾಘವೇಂದ್ರ ಭಟ್ ರವರ ನೇತೃತ್ವದಲ್ಲಿ ಸಾಂಗವಾಗಿ ಬಹಳ ವಿಜೃಂಭಣೆಯಿಂದ ನೆರವೇರಿತು.
Also read: Anantha Chaturdashi celebrated at Paniyadi Lakshmi Ananthapadmanabha Temple
ಬರಹ, ಚಿತ್ರ: ರಾಜೇಶ್ ಭಟ್ ಪಣಿಯಾಡಿ










Latest News
- Udupi Sri Krishna Alankara
- Daily Panchangam
- Udupi Mallige and Jaaji today’s price
- Water level in Uttara Kannada reservoirs
- Kateel Sri Durgaparameshwari today’s Alankara