ಸೆ.14, 15 ವಿದ್ಯುತ್ ವ್ಯತ್ಯಯ

 ಸೆ.14, 15 ವಿದ್ಯುತ್ ವ್ಯತ್ಯಯ
Share this post

ಮಂಗಳೂರು,ಸೆ.13, 2022: ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆ.ವಿ ಮಾರ್ಕೆಟ್ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಂಡ ಕಾರಣ ಸೆ.14 ಹಾಗೂ 15ರಂದು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಸೆ.14ರಂದು:
ಲೇಡಿಗೋಷನ್ ಹಾಸ್ಪಿಟಲ್, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗ, ಜಿ.ಎಚ್.ಎಸ್ ರಸ್ತೆ, ಪಿ.ಎಮ್. ರಾವ್ ರೋಡ್, ಗೌರಿಮಠ ರಸ್ತೆ, ರಾಘವೇಂದ್ರ ಮಠ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.


ಮೂಡಬಿದ್ರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಬೆಳುವಾಯಿ ಮತ್ತು ಶಿರ್ತಾಡಿ ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡ ಕಾರಣ ಫೀಡರುಗಳಲ್ಲಿ ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್ ಕಟ್ಟೆ, ಆಜಾದ್ ನಗರ, ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯಿದೆ, ಕೆಸರಗದ್ದೆ, ಪೆಲಕುಂಜ, ಶಾಂತಿನಗರ, ಮೂಡಾಯಿಕಾಡು, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ದರೆಗುಡ್ಡೆ, ಅರಸುಕಟ್ಟೆ, ಪಣಪಿಲ, ಬಸವನಕಜೆ, ಅಮನೊಟ್ಟು, ಆನೆಗುಡ್ಡೆ, ಜೋಗೊಟ್ಟು, ವಾಲ್ಪಾಡಿ, ಶಿರ್ತಾಡಿ, ಮಕ್ಕಿ, ಶಿಮುಂಜೆ, ಅಳಿಯೂರು, ಬೋರುಗುಡ್ಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

ಸೆ.15ರಂದು:
ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆ.ವಿ. ಡೊಂಗರಕೇರಿ ಫೀಡರ್ ಮತ್ತು 33/11ಕೆ.ವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆ.ವಿ ಹಂಪನಕಟ್ಟ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಂಡ ಕಾರಣ ಸಿಟಿ ಸೆಂಟರ್, ಕೊಡಿಯಾಲ್ ಬೈಲ್, ಡಿಸ್ಟ್ರಿಕ್ಟ್ ಕೋರ್ಟ್, ಕರ್ನಾಟಕ ಬ್ಯಾಂಕ್, ಅಲೋಶಿಯಸ್ ಕಾಲೇಜ್, ಜಯಶ್ರೀ ಹಾಸ್ಪಿಟಲ್, ಮನೋರಮ ಹೋಟೆಲ್, ಪಂಚವಟಿ ಲೇನ್, ಟೌನ್ ಹಾಲ್, ಜಿಲ್ಲಾ ಪಂಚಾಯತ್, ಮಿನಿ ವಿಧಾನಸೌಧ, ಐಡಿಯಲ್ ಐಸ್‍ಕ್ರೀಂ, ಭೂಷನ್ ಬಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

ವಿ. ಎಸ್.ಆರ್.ಎಸ್ ಕಾವೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಯೆಯ್ಯಾಡಿ ಮತ್ತು ಹರಿಪದವು ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡ ಕಾರಣ ಸೆ.15ರ ಬೆಳಿಗ್ಗೆ 9.45 ರಿಂದ ಸಂಜೆ 4.30ರ ವರೆಗೆ ಮೇರಿಹಿಲ್, ಯೆಯ್ಯಾಡಿ, ಹರಿಪದವು, ಕುಂಟಲ್ಪಾಡಿ, ಕೆ.ಪಿ.ಟಿ., ಉದಯನಗರ, ಲ್ಯಾಂಡ್ ಲಿಂಕ್ಸ್, ಪೆರ್ಲಗುರಿ, ಪದವಿನಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!