ಮೈಸೂರು ದಸರಾದಲ್ಲಿ ಆಹಾರ ಮಳಿಗೆ ತೆರೆಯಲು ಅರ್ಜಿ ಆಹ್ವಾನ

 ಮೈಸೂರು ದಸರಾದಲ್ಲಿ ಆಹಾರ ಮಳಿಗೆ ತೆರೆಯಲು ಅರ್ಜಿ ಆಹ್ವಾನ
Share this post

ಉಡುಪಿ, ಆಗಸ್ಟ್ 26, 2022: ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ಸೆಪ್ಟಂಬರ್ 26 ರಿಂದ ಅಕ್ಟೋಬರ್ 5 ರ ವರೆಗೆ ನಡೆಯಲಿದ್ದು, ದಸರಾ ಅಂಗವಾಗಿ ಜನಪ್ರಿಯ ಆಹಾರ ಮೇಳವನ್ನು ಸೆ. 26 ರಿಂದ ಅ.3 ರ ವರೆಗೆ ಮೈಸೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಪ್ಯಾಲೆಸ್ ಹೋಟೆಲ್ ಸಮೀಪದ ಮೂಡಾ ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಆಹಾರ ಮೇಳಗಳಲ್ಲಿ ಸ್ಥಳೀಯ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಶೈಲಿಯ ಉಟೋಪಚಾರ ತಯಾರಿಸುವ ಆಹಾರ ಮಳಿಗೆ ತೆರೆಯಲು ಹೋಟೆಲ್, ಕೇಟರ‍್ಸ್, ಸಂಘ-ಸAಸ್ಥೆ, ಗೃಹ ಅಡುಗೆ ತಯಾರಕರು ಹಾಗೂ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಸೆಪ್ಟಂಬರ್ 12 ಕೊನೆಯ ದಿನ.

ಅರ್ಜಿ ನಮೂನೆಗಳನ್ನು ರೂ.ನಂ.33, 2 ನೇ ಮಹಡಿ, ಹೊಸ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ಸಿದ್ದಾರ್ಥನಗರ, ಮೈಸೂರು ಹಾಗೂ ಹೆಚ್ಚಿನ ಮಾಹಿತಿಗಾಗಿ ದಸರಾ ಮಹೋತ್ಸವ ಆಹಾರ ಮೇಳ ಉಪಸಮಿತಿಯ ಕಾರ್ಯಾಧ್ಯಕ್ಷೆ ಕುಮುದಾ ಶರತ್, ಕಾರ್ಯದರ್ಶಿ ರಮಣಿ ಎಂ.ಕೆ, ವ್ಯವಸ್ಥಾಪಕ ಸತೀಶ್ ಮೊ.ನಂ: 9481216356, ಕುಮಾರ್ ಮೊ.ನಂ: 9902248619, ಸುರೇಶ್ ಮೊ.ನಂ: 8722104052, ವಿದ್ಯಾ ಆರ್ ಮೊ.ನಂ; 9740428972, ಮಾದೇಗೌಡ ಮೊ.ನಂ: 890939533, ಶಶಿಧರ ನಾಯಕ್ ಮೊ.ನಂ: 9632960615, ಕಚೇರಿಯ ದೂ.ಸಂಖ್ಯೆ: 0821-2422107 ಹಾಗೂ ಇ-ಮೇಲ್ [email protected] ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮೈಸೂರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!