ಮಂಗಳೂರು: ಜುಲೈ 29, 30 ರಂದು ವಿದ್ಯುತ್ ವ್ಯತ್ಯಯ
ಮಂಗಳೂರು,ಜು.28, 2022: ಮಂಗಳೂರು ನಗರದ ಕೆಲವು ಪ್ರದೇಶದಲ್ಲಿ ಜುಲೈ 29, 30 ರಂದು ವಿದ್ಯುತ್ ನಿಲುಗಡೆಯಾಗಲಿದೆ.
ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ ವಿವೇಕ್ ಮೋಟಾರ್ ಫೀಡರ್ ಮತ್ತು ಮಾರ್ಕೆಟ್ ಫೀಡರ್ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಜು.29ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ಕೈಗೊಳ್ಳಲಾಗುತ್ತದೆ.
ಆದ ಕಾರಣ ಮೈದಾನ್ 3ನೇ ಕ್ರಾಸ್, 4ನೇ ಕ್ರಾಸ್, ಬೀಬಿ ಅಲಾಬಿ ರಸ್ತೆ, ರಾವ್ & ರಾವ್ ಸರ್ಕಲ್, ಲೇಡಿಘೋಷನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗ, ಜಿ.ಹೆಚ್.ಎಸ್ ರಸ್ತೆ, ಪಿ.ಎಮ್. ರಾವ್ ರೋಡ್, ಗೌರಿಮಠ ರಸ್ತೆ, ರಾಘವೇಂದ್ರ ಮಠ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಕದ್ರಿ: ಕದ್ರಿ ಉಪಕೇಂದ್ರದಿಂದ ಹೊರಡುವ 11ಕೆ.ವಿ ಕರಂಗಲ್ಪಾಡಿ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಜು.29ರ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಕೈಗೊಳ್ಳಲಾಗುತ್ತದೆ.
ಹೀಗಾಗಿ ಕದ್ರಿ ಕಂಬಳ ರೋಡ್, ಪಿಂಟೋಸ್ ಲೇನ್, ಜೈಲ್ ರೋಡ್, ಕರಂಗಲ್ಪಾಡಿ, ಮಾರ್ಕೆಟ್, ಮೆಡಿಕೇರ್ ಬಿಲ್ಡಿಂಗ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಅತ್ತಾವರ: ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆ.ವಿ ವಿಶ್ವಭವನ ಫೀಡರ್ನಲ್ಲಿ ಹಾಗೂ ನೆಹರೂಮೈದಾನ ಉಪಕೇಂದ್ರದಿಂದ ಹೊರಡುವ 11ಕೆ.ವಿ ಸೌತ್ವಾರ್ಫ್ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಜು.30ರ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ನಡೆಯುವುದು.
ಆದ ಕಾರಣ ಕೆ.ಎಸ್. ರಾವ್ ರೋಡ್, ಓಲ್ಡ್ ಬಸ್ಸ್ಟ್ಯಾಂಡ್, ಹಂಪನಕಟ್ಟೆ, ಶರವು ಟೆಂಪಲ್ ರಸ್ತೆ, ಹ್ಯಾಮಿಲ್ಟನ್ ಸರ್ಕಲ್, ಧಕ್ಕೆ, ಓಲ್ಡ್ ಪೋರ್ಟ್ ಗೇಟ್, ಬದ್ರಿಯಾ ರಸ್ತೆ, ಗೂಡ್ಶೆಡ್ ರಸ್ತೆ, ಬ್ಯಾಂಬೂ ಬಜಾರ್, ನೀರೇಶ್ವಲ್ಯ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.