ಜು.18, 19 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

 ಜು.18, 19 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
Share this post

ಮಂಗಳೂರು,ಜು.17, 2022: 33/11 ಕೆ.ವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆ.ವಿ ಎಂ.ಪಿ.ಟಿ ಫೀಡರ್ ಮತ್ತು 11ಕೆ.ವಿ ಬಿ.ಇ.ಎಂ. ಫೀಡರ್‍ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.

ಆದ ಕಾರಣ ಜು.18 ರಂದು ಬೆಳಿಗ್ಗೆ 10 ರಿಂದ 5ರವರೆಗೆ ಬಂದರ್ ಪೊಲೀಸ್ ಸ್ಟೇಷನ್, ಗಾಂಧಿ ಸನ್ಸ್, ನೂರ್ ಮೊಹಮ್ಮದ್, ಅಜೀಜುದ್ದೀನ್ ರಸ್ತೆ, ಜೆ.ಎಂ.ರಸ್ತೆ, ಛೇಂಬರ್ ರೋಡ್, ಬಾಂಬೆ ಲಕ್ಕಿ ಹೊಟೇಲ್, ಭಟ್ಕಲ್ ಬಜಾರ್, ಅನ್ಸಾರಿ ರಸ್ತೆ, ಕಂಡತ್ ಪಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಉರ್ವ ಮಾರ್ಕೆಟ್:
33/11 ಕೆ.ವಿ ಉರ್ವಮಾರ್ಕೆಟ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಡೊಮಿನಿಕ್ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.

ಹಾಗಾಗಿ ಜು.19 ರಂದು ಬೆಳಿಗ್ಗೆ 10 ರಿಂದ 4ರವರೆಗೆ ಕೊಡಿಕಲ್ 4ನೇ ಮೈಲ್, ಕೊಟ್ಟಾರ ಚೌಕಿ, ವಿವೇಕಾನಂದ ನಗರ, ಆಲಗುಡ್ಡೆ, ಜೆ.ಬಿ. ಲೋಬೊ ರೋಡ್, ಎಸ್.ಎನ್.ಡಿ.ಪಿ, ನಾಗಬ್ರಹ್ಮ ಸನ್ನಿಧಿ ರಸ್ತೆ, ಕಂಚಿಕಾರ ಗುತ್ತು, ಗಣೇಶ್ ಭಜನಾ ಮಂದಿರ, ಜಿ.ಎಸ್.ಬಿ, ವಲ್ಲಿ ಕಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!