ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು,ಜು.09, 2022: ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯ ವಿವರ ಇಂತಿದೆ:
ಕೃತಕಾಂಗ ಜೋಡನೆ ಪಿ ಎಂಡ್ ಒ ಅಭಿಯಂತರರು (ಪಿ ಎಂಡ್ ಒ ಇಂಜಿನಿಯರಿಂಗ್ ಪದವಿ ಡಿಪ್ಲೋಮ 2ರಿಂದ 5ವರ್ಷ ಅನುಭವ), ಪ್ರಾಸ್ಥೊಟಿಸ್ಟ್ ಮತ್ತು ಆಥೋಟಿಸ್ಟ್ (ಡಿಪ್ಲೋಮ ಇನ್.ಪಿ&ಒ/ಐ.ಟಿ.ಐ (ಪಿಟ್ಟರ್)2 ವರ್ಷದ ಕ್ಷೇತ್ರ ಮಟ್ಟದ ಅನುಭವ), ಕ್ಲಿನಿಕಲ್ ಸೈಕಾಲಜಿಸ್ಟ್ (ಎಂ.ಎ.ಇನ್ ಕ್ಲಿನಿಕಲ್ ಸೈಕಲೋಜಿ), ಸ್ಪೀಚ್ ಥೆರಪಿಸ್ಟ್ ಮತ್ತು ಆಡಿಯಾಲಜಿಸ್ಟ್ (ಬಿ.ಎಸ್.ಸಿ ಇನ್ ಸ್ಪೀಚ್ ಮತ್ತು ಆಡಿಯಾಲಜಿ), ಫಿಸಿಯೋಥೆರಪಿಸ್ಟ್, ಆಕ್ಯುಪೇಶನಲ್ ಥೆರಪಿಸ್ಟ್ (ಡಿಗ್ರಿ ಇನ್ ಫಿಸಿಯೋಥೆರಪಿ ಅಥವಾ ಅಕ್ಯುಪೇಶóನ್ ಥೆರಪಿ), ಇಯರ್ ಮೊಲ್ಡ್ ಟೆಕ್ನಿಷಿಯನ್ (ಸರ್ಟಿಫಿಕೆಟ್ ಕೋರ್ಸ್ ಇನ್ ಇಯರ್ ಮೊಲ್ಡ್ ಟೆಕ್ನಾಲಜಿ), ಆಪ್ತಲ್ಮೋಲಜಿಸ್ಟ್ ವಾರಕ್ಕೆ 2 ದಿನಗಳು ದಿನಕ್ಕೆ 1000 ರೂ. ಗಳಂತೆ (ಪೋಸ್ಟ್ ಗ್ರಾಜುಯೇಷನ್ /ಡಿಪ್ಲೋಮ ಇನ್ ಆಪ್ತಲ್ಮೋಲಜಿ), ಸೈಕಿಯಾಟ್ರಿಸ್ಟ್ (ವಾರಕ್ಕೆ 2 ದಿನಗಳು ದಿನಕ್ಕೆ 1000 ರೂ. ಗಳಂತೆ) (ಪೋಸ್ಟ್ ಗ್ರಾಜುಯೇಷನ್ /ಸ್ರೆಕಿಯಾಟ್ರಿ ಮೆಡಿಸಿನ್).
ಅರ್ಜಿಯನ್ನು ಅಧ್ಯಕ್ಷರು ಅಥವಾ ಕಾರ್ಯದರ್ಶಿ ಲಯನ್ಸ್ ಸೆಂಟರ್ ಫಾರ್ ದ ಫಿಸಿಕಲಿ ಹ್ಯಾಂಡಿಕ್ಯಾಪ್ಡ್ ವೆನ್ಲಾಕ್ ಆಸ್ಪತ್ರೆ, ಮಂಗಳೂರು-575001 ಇಲ್ಲಿಗೆ ಜು.12ರೊಳಗೆ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ:0824-2422300, 8747917610 ಮೂಲಕ ಕರೆ ಮಾಡಿ ಸಂಪರ್ಕಿಸಬಹುದು ಎಂದು ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಸೆಂಟರ್ ಫಾರ್ ದ ಫಿಸಿಕಲಿ ಹ್ಯಾಂಡಿಕ್ಯಾಪ್ನ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ