ಉಜಿರೆಯ ರುಡ್‍ಸೆಟ್ ಸಂಸ್ಥೆಯಲ್ಲಿ ಪಶುಮಿತ್ರ ತರಬೇತಿಗೆ ಅರ್ಜಿ ಆಹ್ವಾನ

 ಉಜಿರೆಯ ರುಡ್‍ಸೆಟ್ ಸಂಸ್ಥೆಯಲ್ಲಿ ಪಶುಮಿತ್ರ ತರಬೇತಿಗೆ ಅರ್ಜಿ ಆಹ್ವಾನ
Share this post

ಮಂಗಳೂರು,ಜು.06, 2022: ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಹಾಗೂ ಇತರೆ ಎಂಟು ಸಚಿವಾಲಯದ ಸಹಯೋಗದೊಂದಿಗೆ ಆಜಾದಿ ಸೆ ಅಂತ್ಯೋ ದಯ ತಕ್  ಅಭಿಯಾನದಡಿ ಕೃಷಿಕರು ಕೃಷಿ ಉದ್ಯಮಿಗಳಾಗಿ ಹೆಚ್ಚಿನ ಆದಾಯಗಳಿಸಲು ಸಹಕಾರಿಯಾಗುವಂತೆ ತರಬೇತಿ ನೀಡಲು ದೇಶದಲ್ಲಿ 75 ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡವೂ ಆಯ್ಕೆಯಾಗಿದೆ.

ತರಬೇತಿಯ ಅವಧಿ 60 ದಿನಗಳು, ಜು. 18 ರಿಂದ ಉಜಿರೆಯ  ಸಿದ್ಧವನದ ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆಯಲ್ಲಿ ಆಯೋಜಿಸಲಾಗಿದೆ. ಕೃಷಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು, ಪಶು ಸಂಗೋಪನೆಯಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಆಸಕ್ತಿ ಇರುವ ಹಾಗೂ ಸ್ವ-ಉದ್ಯೋಗವನ್ನು ಮಾಡಲು ಇಚ್ಛಿಸುವ ಯುವಕ, ಯುವತಿಯರಿಗೆ ಅವಕಾಶ.

ಹೈನುಗಾರಿಕೆ, ಕುರಿ, ಆಡು, ಹಂದಿ, ಕೋಳಿ ಸಾಕಾಣಿಕೆ, ಅಲ್ಲದೆ ಉತ್ತಮ ತಳಿಗಳ ಆಯ್ಕೆ, ಅವುಗಳ ಆಹಾರ ಪದ್ದತಿ, ಜೊತೆಗೆ ನುರಿತ ಪಶುವೈದ್ಯರಿಂದ ವೈದ್ಯಕೀಯ ಮಾಹಿತಿಯನ್ನು ತರಬೇತಿಯಲ್ಲಿ ನೀಡಲಾಗುತ್ತದೆ. 18 ರಿಂದ 45 ವರ್ಷಗಳ ವಯೋಮಿತಿ ಹೊಂದಿದ ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿಯನ್ನು ವೆಬ್‍ಸೈಟ್: www.rudsetujire.com ನಲ್ಲಿ ಅಥವಾ ಅರ್ಜಿಯನ್ನು ಬರೆದು ರುಡ್‍ಸೆಟ್ ಸಂಸ್ಥೆಯ ನಿರ್ದೇಶಕರು, ಸಿದ್ಧವನ ಉಜಿರೆ-574240 ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಈ ವಿಳಾಸಕ್ಕೆ ಕಳುಹಿಸಬಹುದು ಮತ್ತು ಮಾಹಿತಿಗೆ ದೂ.ಸಂಖ್ಯೆ:08256-236404 ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!